100 ಕೋಟಿಯ ಅಧಿಪತಿಯಾದ ಹೃತಿಕ್ ರೋಷನ್
'ಸೂಪರ್ 30' ಸಿನಿಮಾ ಇದೀಗ ನೂರು ಕೋಟಿ ಕ್ಲಬ್ ಸೇರಿದೆ. ಸಿನಿಮಾ ಬಿಡುಗಡೆಯಾದ ಹತ್ತು ದಿನಗಳಲ್ಲಿ 100 ಕೋಟಿ ಕಲೆಕ್ಷನ್ ಮಾಡಿದೆ.
ಮೊದಲ ವಾರ 'ಸೂಪರ್ 30' ಸಿನಿಮಾ 75.85 ಕೋಟಿ ಗಳಿಕೆ ಮಾಡಿತ್ತು. ಬಳಿಕ ನಿಧಾನವಾಗಿ ಮುಂದುವರೆದ ಕಲೆಕ್ಷನ್, ಹತ್ತನೇ ದಿನಕ್ಕೆ ಹೃತಿಕ್ ರೋಷನ್ ರನ್ನು ನೂರು ಕೋಟಿಯ ಅಧಿಪತಿಯಾಗುವಂತೆ ಮಾಡಿದೆ.
ಬಾಲಿವುಡ್ ಸಿನಿಮಾಗಳ ಗಳಿಕೆಗೆ ಹೋಲಿಕೆ ಮಾಡಿ ನೋಡಿದರೆ, 'ಸೂಪರ್ 30' ಬಹಳ ನಿಧಾನವಾಗಿ ಹೆಜ್ಜೆ ಇಡುತ್ತಿದೆ. 'ಕಬೀರ್ ಸಿಂಗ್' ಹಾಗೂ 'ಲಯನ್ ಕಿಂಗ್' ಸಿನಿಮಾಗಳು 'ಸೂಪರ್ 30'ಗೆ ದೊಡ್ಡ ಪೈಪೋಟಿ ನೀಡುತ್ತಿವೆ.

ಬಾಕ್ಸ್ ಆಫೀಸ್ ವಿಚಾರವನ್ನು ಪಕ್ಕಕ್ಕೆ ಇಟ್ಟು ನೋಡುವುದಾದರೆ, 'ಸೂಪರ್ 30' ಸಿನಿಮಾಗೆ ತುಂಬ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾದ ಒಳ್ಳೆಯ ವಿಷಯಗಳು ಎಲ್ಲರಿಗೂ ಇಷ್ಟ ಆಗುತ್ತಿದೆ. ಈ ಕಾರಣ ಬಿಹಾರ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
'ಸೂಪರ್ 30' ಚಿತ್ರ ಭಾರತದ ಖ್ಯಾತ ಗಣಿತಜ್ಞ ಆನಂದ್ ಕುಮಾರ್ ಅವರ ಕಥೆಯಾಗಿದೆ. ಹೃತಿಕ್ ರೋಷನ್ ಅವರ ಅದ್ಬುತ ನಟನೆ ಸಿನಿಮಾದ ಹೈಲೈಟ್ ಆಗಿದೆ. ವಿಕಾಸ್ ಬಹ್ಲ ಸಿನಿಮಾದ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











