ಹೃತಿಕ್ ರೋಷನ್ 'ಸೂಪರ್ 30' ಮೊದಲ ದಿನ ಗಳಿಸಿದ್ದೆಷ್ಟು?

ಬಾಲಿವುಡ್ ಸೂಪರ್ ಡ್ಯಾನ್ಸರ್ ಹೃತಿಕ್ ರೋಷನ್ ಎರಡೂವರೆ ವರ್ಷದ ನಂತರ ಬೆಳ್ಳಿತೆರೆ ಮೇಲೆ ಮಿಂಚಲು ಬಂದಿದ್ದಾರೆ. 2017ರಲ್ಲಿ ತೆರೆಕಂಡಿದ್ದ ಕಾಬಿಲ್ ಚಿತ್ರದ ಬಳಿಕ ಮೂಡಿಬಂದಿರುವ ಸೂಪರ್ 30 ಸಿನಿಮಾ ಈ ಶುಕ್ರವಾರ ತೆರೆಕಂಡಿದೆ.

ಬಿಡುಗಡೆಗೆ ಮುಂಚೆ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸೂಪರ್ 30 ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿದೆ. ಸಿನಿಮಾಗೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಕಬೀರ್ ಸಿಂಗ್ ಹವಾ ಇರೋದ್ರಿಂದ ಸೂಪರ್ 30ಗೆ ಸಾಧಾರಣ ಯಶಸ್ಸು ಎನ್ನಬಹುದು.

ಅಂದ್ರೆ, ಬಿಡುಗಡೆಯಾದ ಮೊದಲ ದಿನ ಸೂಪರ್ 30 ಸಿನಿಮಾ ಸುಮಾರು 11.83 ಕೋಟಿ ಗಳಿಕೆ ಕಂಡಿದೆ ಎಂದು ಬಾಲಿವುಡ್ ವಿಶ್ಲೇಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ 11.83 ಕೋಟಿ ಗಳಿಸಿದ್ರೆ, ವಿದೇಶದಲ್ಲೂ ಕೂಡ ಸೂಪರ್ 30 ಕಮಾಲ್ ಮಾಡಿದೆ. ತರಣ್ ಆದರ್ಶ್ ಅವರು ಹೇಳಿರುವ ಪ್ರಕಾರ ವಿದೇಶದಲ್ಲಿ ಮೊದಲ ದಿನ 6.18 ಕೋಟಿ ಕಲೆಕ್ಷನ್ ಮಾಡಿದೆ.

Super 30 movie day 1 collection

ಈ ಹಿಂದೆ ಬಿಡುಗಡೆಯಾಗಿದ್ದ ಹೃತಿಕ್ ಸಿನಿಮಾ ಕಾಬಿಲ್ ಚಿತ್ರದ ಗಳಿಕೆಯನ್ನ ಈ ಸಿನಿಮಾ ಬ್ರೇಕ್ ಮಾಡಿರುವುದು ಸಮಾಧಾನಕರ ವಿಚಾರ. ಕಾಬಿಲ್ ಸಿನಿಮಾ ಮೊದಲ ದಿನ 10.43 ಕೋಟಿ ಗಳಿಸಿತ್ತು. ಸೂಪರ್ 30 ಅದಕ್ಕಿಂತ ಒಂದೂವರೆ ಕೋಟಿ ಹೆಚ್ಚು ಬಾಚಿಕೊಂಡಿದೆ.

ವಾರಾಂತ್ಯದಲ್ಲಿ ಸಿನಿಮಾ ಗಳಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ಇನ್ನುಳಿದಂತೆ ಪಾಟ್ನಾ ಮೂಲದ ಗಣಿತ ಶಾಸ್ತ್ರಜ್ಞ ಆನಂದ್ ಕುಮಾರ್ ಅವರ ಜೀವನ ಆಧಾರಿತ ಕಥೆ ಇದಾಗಿದ್ದು, ಹೃತಿಕ್ ರೋಷನ್ ನಾಯಕರಾಗಿ ನಟಿಸಿದ್ದಾರೆ. ವಿಕಾಸ್ ಭಾಲ್ ನಿರ್ದೇಶನವಿದ್ದು, ಮೃನಾಲ್ ಠಾಕೂರ್ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Bollywood suprstar hrithik roshan starrer 'Super 30' movie has a decent Day 1 in box office. friday Super 30 collect ₹ 11.83 crore in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X