twitter
    For Quick Alerts
    ALLOW NOTIFICATIONS  
    For Daily Alerts

    'ಸೂಪರ್ 30' ಸಿನಿಮಾದ ರಿಯಲ್ ಹೀರೋ ಇವರೇ

    |

    'ಸೂಪರ್ 30' ಸಿನಿಮಾ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ನಟ ಹೃತ್ತಿಕ್ ರೋಷನ್ ವೇಷ ಸಿನಿಮಾದ ಬಗ್ಗೆ ಬಹಳ ಕುತೂಹಲ ಹುಟ್ಟು ಹಾಕಿದೆ.

    'ಸೂಪರ್ 30' ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಸಿನಿಮಾ ನೋಡುವ ತವಕ ಹೆಚ್ಚು ಮಾಡಿದೆ. ಈ ವರ್ಷದ ಒಂದೊಳ್ಳೆ ಸಿನಿಮಾ ಆಗುವ ಎಲ್ಲ ಲಕ್ಷಣಗಳು ಈ ಸಿನಿಮಾದಲ್ಲಿ ಕಾಣುತ್ತಿದೆ. 'ಕ್ವೀನ್' ಸಿನಿಮಾ ಮಾಡಿದ್ದ ವಿಕಾಸ್ ಬಹ್ಲ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ.

    'ಸೂಪರ್ 30' ಚಿತ್ರದ ಇಂಗ್ಲೀ‍ಷ್ ಬರದವರ ಸೂಪರ್ ಹಾಡು 'ಸೂಪರ್ 30' ಚಿತ್ರದ ಇಂಗ್ಲೀ‍ಷ್ ಬರದವರ ಸೂಪರ್ ಹಾಡು

    ಈ ಸಿನಿಮಾದ ಮೂಲಕ ಮೊದಲ ಬಾರಿಗೆ ನಟ ಹೃತ್ತಿಕ್ ರೋಷನ್ ಒಂದು ಬಯೋಪಿಕ್ ಚಿತ್ರ ಮಾಡುತ್ತಿದ್ದಾರೆ. ಬಿಹಾರದ ಆನಂದ್ ಕುಮಾರ್ ಅವರ ಸ್ಫೂರ್ತಿಧಾಯಕ ಕಥೆಯೇ 'ಸೂಪರ್ 30' ಸಿನಿಮಾವಾಗಿದೆ. ಮುಂದೆ ಓದಿ...

    ಬಿಹಾರದ ಆನಂದ್ ಕುಮಾರ್ ಅವರ ಕಥೆ

    ಬಿಹಾರದ ಆನಂದ್ ಕುಮಾರ್ ಅವರ ಕಥೆ

    'ಸೂಪರ್ 30' ಸಿನಿಮಾ ಬಿಹಾರದ ಪಾಟ್ನಾದ ಆನಂದ್ ಕುಮಾರ್ ಅವರ ಕಥೆ. ಆನಂದ್ ಒಬ್ಬ ಗಣಿತ ಶಿಕ್ಷಕ. ತಮ್ಮ 'ಸೂಪರ್ 30' ಕಾರ್ಯಕ್ರಮದ ಮೂಲಕ ದೇಶಾದ್ಯಂತ ಇವರು ಜನಪ್ರಿಯತೆ ಪಡೆದಿದ್ದಾರೆ. IIT ಪ್ರವೇಶ ಪರೀಕ್ಷೆ ಬರೆಯಲು ಬಯಸುವ ಬಡ ವಿದ್ಯಾರ್ಥಿಗಳಿಗೆ ಆನಂದ್ ಟ್ಯೂಷನ್ ಮಾಡುತ್ತಾರೆ.

    ಗಣಿತ ವಿಷಯದಲ್ಲಿ ಹೆಚ್ಚು ಆಸಕ್ತಿ

    ಗಣಿತ ವಿಷಯದಲ್ಲಿ ಹೆಚ್ಚು ಆಸಕ್ತಿ

    ಆನಂದ್ ಅವರ ತಂದೆ ಅಂಚೆ ಕಚೇರಿಯಲ್ಲಿ ಕೆಲಸ ಮಾಡುವ ಸಾಮಾನ್ಯ ಕ್ಲರ್ಕ್ ಆಗಿದ್ದರು. ಬಡ ಕುಟುಂಬದಲ್ಲಿ ಹುಟ್ಟಿದ ಇವರು ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಓದಲು ಹಣ ಇಲ್ಲದೆ, ಹಿಂದಿ ಮೀಡಿಯಂನಲ್ಲಿ ಓದಿದರು. ಶಾಲೆಯಿಂದ ಗಣಿತ ವಿಷಯದ ಮೇಲೆ ಆಸಕ್ತಿ ಹೊಂದಿದ್ದರು. ನಂತರ ಕೇಂಬ್ರಿಡ್ಜ್ ನಲ್ಲಿ ಪದವಿ ಮಾಡಲು ಅರ್ಹತೆ ಪಡೆದರೂ, ತಮ್ಮ ಆರ್ಥಿಕ ಸಮಸ್ಯೆಯಿಂದ ಹೋಗಲು ಆಗಲಿಲ್ಲ.

    ವಿಡಿಯೋ : 'ಸೂಪರ್ 30' ಚಿತ್ರದ ಮುದ್ದಾದ ಹಾಡು ರಿಲೀಸ್ ವಿಡಿಯೋ : 'ಸೂಪರ್ 30' ಚಿತ್ರದ ಮುದ್ದಾದ ಹಾಡು ರಿಲೀಸ್

    ಹೆಚ್ಚಿನ ಹಣ ಸಂಪಾದನೆಗೆ ಟ್ಯೂಷನ್ ಶುರು

    ಹೆಚ್ಚಿನ ಹಣ ಸಂಪಾದನೆಗೆ ಟ್ಯೂಷನ್ ಶುರು

    ಬೆಳಗ್ಗೆ ಓದುತ್ತಿದ್ದ ಆನಂದ್, ಸಂಜೆ ತಾಯಿ ಮಾಡಿದ ಹಪ್ಪಳವನ್ನು ಮಾರಾಟ ಮಾಡುತ್ತಿದ್ದರು. ಅವರ ತಂದೆ ತೀರಿ ಹೋದ ಬಳಿಕ ಆರ್ಥಿಕ ಸಮಸ್ಯೆ ಇನ್ನಷ್ಟು ಕಷ್ಟವಾಯ್ತು. ಆಗಲೇ ಆನಂದ್ ಗಣಿತ ವಿಷಯದ ಬಗ್ಗೆ ಟೂಷನ್ ಪ್ರಾರಂಭ ಮಾಡಿದರು. IIT ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದರು.

    2 ರಿಂದ 500 ವಿದ್ಯಾರ್ಥಿಗಳು

    2 ರಿಂದ 500 ವಿದ್ಯಾರ್ಥಿಗಳು

    500 ರೂಪಾಯಿ ನೀಡಿ ಒಂದು ಸಣ್ಣ ಕೊಠಡಿಯನ್ನು ಆನಂದ್ ಬಾಡಿಗೆ ಪಡೆದರು. ಅದಕ್ಕೆ ರಾಮಾನುಜನ್ ಎಂದು ನಾಮಕರಣ ಮಾಡಿದರು. ಪ್ರಾರಂಭದಲ್ಲಿ ಅವರ ಬಳಿ ಬಂದಿದ್ದು ಕೇವಲ 2 ವಿದ್ಯಾರ್ಥಿಗಳು. ಬಳಿಕ ಅದು 36ಕ್ಕೆ ಬಂತು, ನಂತರ 500 ಆಯ್ತು... ವರ್ಷಗಳ ಕಳೆದ ಮೇಲೆ ಆ ಸಂಸ್ಥೆ ಬೆಳೆಯುತ್ತಾ ಹೋಯ್ತು.

    ಹೃತಿಕ್ ರೋಷನ್ 'ಸೂಪರ್ 30' ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್ ಹೃತಿಕ್ ರೋಷನ್ 'ಸೂಪರ್ 30' ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

    2002 ರಲ್ಲಿ 'ಸೂಪರ್ 30' ಕಾರ್ಯಕ್ರಮ

    2002 ರಲ್ಲಿ 'ಸೂಪರ್ 30' ಕಾರ್ಯಕ್ರಮ

    ತಮ್ಮ ರಾಮಾನುಜನ್ ಸಂಸ್ಥೆಯ ಮೂಲಕ ಟೂಷನ್ ಮಾಡುತ್ತಿದ್ದ ಆನಂದ್ ಬಳಿಗೆ ಕೆಲ ಬಡ ವಿದ್ಯಾರ್ಥಿಗಳು ಬಂದು ತಮ್ಮ ಹತ್ತಿರ ಹಣ ಇಲ್ಲ ಆದರೆ, ಕಲಿಯುವ ಆಸೆ ಇದೆ ಎಂದರು. ಆಗ ಪ್ರತಿ ವರ್ಷ ಒಂದು ಪರೀಕ್ಷೆ ನಡೆಸಿ ಅದರಲ್ಲಿ ಪಾಸ್ ಆದ 30 ಬಡ ಮಕ್ಕಳಿಗೆ 'ಸೂಪರ್ 30' ಎಂಬ ಕಾರ್ಯಕ್ರಮ ಮಾಡಿ, ಪಾಠ ಕೇಳಿ ಕೊಡಲು ಪ್ರಾರಂಭ ಮಾಡಿದರು.

    ಪಲಿತಾಂಶ ನೋಡಿ ಎಲ್ಲರೂ ಅಚ್ಚರಿ

    ಪಲಿತಾಂಶ ನೋಡಿ ಎಲ್ಲರೂ ಅಚ್ಚರಿ

    2010ರಲ್ಲಿ 'ಸೂಪರ್ 30'ಯ ಎಲ್ಲ ಮೂವತ್ತು ವಿದ್ಯಾರ್ಥಿಗಳು IIT JEE ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ. 2003 ರಿಂದ 2017 ವರೆಗೆ ಸುಮಾರು 391 ವಿದ್ಯಾರ್ಥಿಗಳು ಆನಂದ್ ಅವರ ಸಂಸ್ಥೆಯಿಂದ IT JEE ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಈ ಮಟ್ಟದ ಪಲಿತಾಂಶ ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದೆ.

    ಆನಂದ್ ಗೆ ಬಂದ ಪ್ರಶಸ್ತಿ, ಪುರಸ್ಕಾರ

    ಆನಂದ್ ಗೆ ಬಂದ ಪ್ರಶಸ್ತಿ, ಪುರಸ್ಕಾರ

    ಆನಂದ್ ಕುಮಾರ್ ಅವರ ಈ ಸಾಧನೆಗೆ ದೊಡ್ಡ ದೊಡ್ಡ ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಡಿಸ್ಕವರಿ ಚಾನಲ್ ಅವರ ಬಗ್ಗೆ ಒಂದು ಡಾಕ್ಯುಮೆಂಟರಿ ಪ್ರಸಾರ ಮಾಡಿದೆ. ಲಿಮ್ಕಾ ಬುಕ್ ದಾಖಲೆಯಲ್ಲಿ ಅವರ ಹೆಸರು ಸೇರಿತು. ಯೂರೋಪ್ ನ ಫೋಕಸ್ ಮ್ಯಾಗಜಿನ್ ಗ್ಲೋಬಲ್ ಪರ್ಸನಾಲಿಟಿ ಎಂದು ಗುರುತಿಸಿದೆ. ಕೊಯಮತ್ತೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ. ಜೊತೆಗೆ ಎಸ್ ರಾಮಾನುಜನ್ ಪ್ರಶಸ್ತಿಯೂ ಸಿಕ್ಕಿದೆ.

    English summary
    Hrithik Roshan's 'Super 30' movie is biopic of mathematician Anand Kumar. He best known for his Super 30 programme. 'Super 30' movie will be releasing on July 12th.
    Tuesday, July 9, 2019, 17:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X