For Quick Alerts
  ALLOW NOTIFICATIONS  
  For Daily Alerts

  ರಾಜೇಶ್ ಖನ್ನಾಗೆ ಸಾವು ಯಾಕಾದರೂ ಬಂತು?

  |

  ಬಾಲಿವುಡ್ ಮೊಟ್ಟ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಇನ್ನಿಲ್ಲವೆಂಬುದೂ ಇದೀಗ ಎಲ್ಲರಿಗೂ ತಿಳಿದ ವಿಷಯ. ಸಾವಿಗೂ ಮೊದಲು ಇವರು ಪದೇ ಪದೇ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಏನಾಗಿತ್ತು ಅವರಿಗೆ, ಅವರ ಅನಾರೋಗ್ಯಕ್ಕೆ ಕಾರಣವಾದ ಅಂಶವೇನು ಎಂಬುದು ಬಹುತೇಕ ರಹಸ್ಯವಾಗಿಯೇ ಉಳಿದಿತ್ತು.

  ಕೇವಲ 69 ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಈ ಕಾಕಾರ ಸಾವಿಗೆ ನಿಜವಾದ ಕಾರಣವೇನು ಎಂಬುದು ಈಗ ಬಯಲಾಗಿದೆ. "ಅವರು ತೀವ್ರವಾದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಗಟ್ಟಿ ಆಹಾರ ಸೇವಿಸಲು ಸಾಧ್ಯವಾಗದ ಅವರು ಇತ್ತೀಚಿಗೆ ದ್ರವರೂಪದ ಆಹಾರ ಸೇವಿಸುತ್ತಿದ್ದರು. ಲಿವರ್ ಸಮಸ್ಯೆ ಮೀತಿಮೀರಿ ರಾಜೇಶ್ ಖನ್ನಾ ಸಾವಿಗೆ ಶರಣಾಗುವಂತಾಯ್ತು" ಎಂದು ಅವರ ಆಪ್ತ ಮಿತ್ರರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

  ವೈದ್ಯಕೀಯ ವರದಿ ಪ್ರಕಾರ, ಕಳೆದ ಏಪ್ರಿಲ್ ತಿಂಗಳಿನಿಂದಲೂ ರಾಜೇಶ್ ಖನ್ನಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆಗಾಗ ಆಸ್ಪತ್ರೆಗೆ ಹೋಗಿ ಬರುವಂತಾಗಿತ್ತು. ಕಳೆದ ತಿಂಗಳು, ಜೂನ್ 23 (ಜೂನ್ 23, 2012) ರಿಂದಲೂ ರಾಜೇಶ್ ಖನ್ನಾ ತೀವ್ರ ಅಸ್ವಸ್ಥರಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಮೊದಲು ದೂರವಾಗಿದ್ದ ಅವರ ಪತ್ನಿ ಡಿಂಪಲ್ ಕಪಾಡಿಯಾ ಈ ವೇಳೆಯಲ್ಲಿ ಅವರಿಗೆ ಜೊತೆಯಾಗಿದ್ದರು.

  ಜುಲೈ 8ಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಗ್ ಆಗಿ ಮನೆಗೆ ಬಂದಿದ್ದರಾದರೂ ಮತ್ತೆ ಆರೋಗ್ಯ ಹದಗೆಟ್ಟು ಜುಲೈ 14 ಕ್ಕೆ ಆಸ್ಪತ್ರೆಗೆ ದಾಖಲಾಗುವಂತಾಗಿತ್ತು. ವೈದ್ಯರು ಕೈಚೆಲ್ಲಿದ ನಂತರ ಮೊನ್ನೆ, ಅಂದರೆ 17 ರಂದು ಆಸ್ಪತ್ರೆಯಿಂದ ಅವರನ್ನು ಮನೆಗೆ ಕರೆತರಲಾಗಿತ್ತು. ಈ ಮೊದಲಿದ್ದ ಕುಡಿತದ ಚಟವನ್ನು ಅವರು ಕಳೆದ ಜನವರಿಯಲ್ಲೇ ಬಟ್ಟಿದ್ದರು. ಡಿಂಪಲ್ ಜೊತೆಗೆ ಹದಗೆಟ್ಟಿದ್ದ ಸಂಬಂಧ ಮತ್ತೆ ಚಿಗುರಿಕೊಂಡಿತ್ತು. (ಏಜೆನ್ಸೀಸ್)

  English summary
  Superstar Rajesh Khanna died due to the reason of liver infection. His death caused due to alcohol consumption that affected his liver.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X