ದೇಶದ ಎಲ್ಲಾ ಪ್ರೇಕ್ಷಕರಿಗೂ ಪದ್ಮಾವತ್ ದರ್ಶನ

By Pavithra

ವಿವಾದಗಳಿಂದ ಬಾರಿ ಸುದ್ದಿಯಾಗಿರುವ ಪದ್ಮಾವತ್ ಸಿನಿಮಾ (ಜ 25)ರಂದು ದೇಶದಾದ್ಯಂತ ತೆರೆಗೆ ಬರಲಿದೆ. ಪದ್ಮಾವತ್ ಸಿನಿಮಾವನ್ನ ಮಧ್ಯಪ್ರದೇಶ್, ಹರಿಯಾಣ, ಗುಜರಾತ್, ರಾಜಸ್ಥಾನದಲ್ಲಿ ಬಿಡುಗಡೆ ಮಾಡುವುದಕ್ಕೆ ನಿಷೇಧ ಹೇರಲಾಗಿತ್ತು. ಈ ಕುರಿತು ಪದ್ಮಾವತ್ ಸಿನಿಮಾ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಚಿತ್ರ ಬಿಡುಗಡೆಗೆ ನಿಷೇಧ ಹೇರಿದ್ದ ನಾಲ್ಕು ರಾಜ್ಯಗಳ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ದೊರೆತ ನಂತರ ಸಿನಿಮಾ ಮೇಲೆ ನಿಷೇಧ ಹೇರುವುದು ಸರಿಯಿಲ್ಲ ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.

ಇದೇ ಸಮಯದಲ್ಲಿ ಪದ್ಮಾವತ್ ಸಿನಿಮಾ ಪ್ರದರ್ಶನದ ವೇಳೆ ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಆಯಾ ರಾಜ್ಯದ ಸರ್ಕಾರಗಳು ಎಚ್ಚರ ವಹಿಸಬೇಕು ಮತ್ತು ಚಿತ್ರಮಂದಿರ ಹಾಗೂ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ತಿಳಿಸಿದೆ.

Supreme Court directed 'Padmaavat' movie to be released across the country

ಪದ್ಮಾವತ್ ಸಿನಿಮಾವನ್ನ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಹಾಗೂ ರಣವೀರ್ ಸಿಂಗ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ವಿವಾದಕ್ಕೂ ಮುಂಚಿನಿಂದಲೂ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟುಕೊಂಡಿತ್ತು ವಿವಾದ ಹೆಚ್ಚಾದಂತೆ ಸಿನಿಮಾದ ಬಗೆಗಿನ ನಿರೀಕ್ಷೆಗಳು ದುಪ್ಪಟ್ಟು ಆಗಿದೆ.

More from Filmibeat

English summary
The Supreme Court has directed 'Padmaava't movie to be released across the country. The Supreme Court has said that it is not okay to stop the movie after the certification by the Censor Board.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X