'ದಿ ಕೇರಳ ಸ್ಟೋರಿ' ವಿವಾದ: ಪಶ್ಚಿಮ ಬಂಗಾಳ, ತಮಿಳುನಾಡಿಗೆ ಸುಪ್ರೀಂ ಕೋರ್ಟ್ ನೋಟಿಸ್

ವಿವಾದಾತ್ಮಕ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರತಿದಿನ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಇದೀಗ ಸುಪ್ರೀಂ ಕೋರ್ಟ್ ಈ ಸಿನಿಮಾ ವಿಚಾರಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿಗೆ ನೋಟಿಸ್ ನೀಡಿದೆ. ಬೇರೆ ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿರುವಾಗ ನಿಮ್ಮ ರಾಜ್ಯಗಳಲ್ಲಿ ಯಾಕೆ ಪ್ರದರ್ಶನ ನಿಲ್ಲಿಸಿದ್ದೀರಾ ಎಂದು ಕೇಳಿದೆ. ಪಶ್ಚಿಮ ಬಂಗಾಳದಲ್ಲಿ ಸರ್ಕಾರವೇ ಚಿತ್ರ ನಿಷೇಧಿಸಿದೆ.

"ಪಶ್ಚಿಮ ಬಂಗಾಳ ಸಿನಿಮಾವನ್ನು ಏಕೆ ನಿಷೇಧಿಸಬೇಕು? ಇದೇ ರೀತಿಯ ಜನರನ್ನು ಹೊಂದಿರುವ ರಾಜ್ಯಗಳು ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಅಲ್ಲೆಲ್ಲ ಏನೂ ಸಮಸ್ಯೆ ಆಗಿಲ್ಲ. ಇದಕ್ಕೂ ಚಿತ್ರದ ಕಲಾತ್ಮಕ ಮೌಲ್ಯಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿಗಳ ಪೀಠವು ಅಭಿಪ್ರಾಯಪಟ್ಟಿದೆ. ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಪಿ. ಎಸ್ ನರಸಿಂಹ ಅವರು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ನೋಟಿಸ್ ಜಾರಿ ಮಾಡಿದ್ದಾರೆ.

Supreme Court notice to West Bengal, Tamilnadu in plea against The Kerala Story movie ban

ತಮಿಳುನಾಡಿನಲ್ಲಿ ಸಿನಿಮಾ ನಿಷೇಧಿಸಿಲ್ಲ. ಬದಲಿಗೆ ಪ್ರೇಕ್ಷಕರು ಸಿನಿಮಾ ನೋಡಲಿ ಬರುತ್ತಿಲ್ಲ, ಸಿನಿಮಾದಲ್ಲಿ ಸ್ಟಾರ್ ಕಲಾವಿದರು ಇಲ್ಲ. ಹಾಗಾಗಿ ಸಿನಿಮಾ ಪ್ರದರ್ಶನ ನಿಲ್ಲಿಸುತ್ತಿರುವುದಾಗಿ ಥಿಯೇಟರ್ ಮಾಲೀಕರು ಹೇಳಿದ್ದರು. ಇನ್ನು ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಾಗಬಹುದು ಎಂದು ಹೇಳಲು ಗುಪ್ತಚರ ಮಾಹಿತಿಗಳನ್ನು ಉಲ್ಲೇಖಿಸಿದರು.

ತಮಿಳುನಾಡಿನಲ್ಲಿ ಚಿತ್ರ ಪ್ರದರ್ಶಿಸುವ ಥಿಯೇಟರ್‌ಗಳಿಗೆ ಭದ್ರತೆ ಒದಗಿಸಿರುವ ಬಗ್ಗೆಯೂ ನ್ಯಾಯಾಲಯ ಕೇಳಿದೆ. ಥಿಯೇಟರ್‌ಗಳ ಮೇಲೆ ದಾಳಿ ನಡೆದಾಗ ಸರ್ಕಾರ ಬೇರೆ ಕಡೆ ನೋಡುವುದಿಲ್ಲ ಎಂದು ಅದು ರಾಜ್ಯದ ವಕೀಲರಿಗೆ ಹೇಳಿದೆ.

ಕೇರಳದಲ್ಲಿ ಯುವತಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಮತ್ತು ಅವರು ಐಸಿಸ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು 'ದಿ ಕೇರಳ ಸ್ಟೋರಿ' ಚಿತ್ರದಲ್ಲಿ ತೋರಿಸಲಾಗಿದೆ. ಇದೆಲ್ಲಾ ಕಟ್ಟು ಕತೆ ಎಂದು ಕೇರಳದಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಆರೋಪಿಸಿದ್ದವು. ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದ್ದವು. ಆದರೆ ಕೋರ್ಟ್ ಇದಕ್ಕೆ ಒಪ್ಪಲಿಲ್ಲ.

Supreme Court notice to West Bengal, Tamilnadu in plea against The Kerala Story movie ban

3 ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ

ಒಂದ್ಕಡೆ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ 'ದಿ ಕೇರಳ ಸ್ಟೋರಿ' ಚಿತ್ರ ಪ್ರದರ್ಶನ ನಿಲ್ಲಿಸಿದ್ದರೆ ಮತ್ತೊಂದು ಕಡೆ 3 ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಇಲ್ಲರೂ ಈ ಸಿನಿಮಾ ನೋಡಬೇಕು ಎಂದು ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಹರ್ಯಾಣ ಸರ್ಕಾರಗಳು ತೆರಿಗೆ ವಿನಾಯಿತಿ ನೀಡಿವೆ.

ಒಂದು ವಾರಕ್ಕೆ 81 ಕೋಟಿ ಗಳಿಕೆ

ವಿವಾದ ಏನೇ ಇದ್ದರೂ 'ದಿ ಕೇರಳ ಸ್ಟೋರಿ' ಸಿನಿಮಾ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ವಾರವೇ 81 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ 2ನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ಶುಕ್ರವಾರ 8 ಕೋಟಿ ರೂ. ಗಳಿಕೆ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯಲು ಆರಂಭಿಸಿತು. ಕಳೆದ ಶುಕ್ರವಾರಕ್ಕಿಂತಲೂ ನಂತರದ ದಿನಗಳಲ್ಲಿ ಕಲೆಕ್ಷನ್ ಹೆಚ್ಚಾಗಿದೆ.

40 ದೇಶಗಳಲ್ಲಿ ಸಿನಿಮಾ ರಿಲೀಸ್

ಈಗಾಗಲೇ 60 ಲಕ್ಷಕ್ಕೂ ಹೆಚ್ಚು ಜನ 'ದಿ ಕೇರಳ ಸ್ಟೋರಿ' ಜನ ಸಿನಿಮಾ ನೋಡಿದ್ದಾರೆ ಎಂದು ಅಂದಾಜಿಸಲಾಗಿದೆ. ಇದೀಗ ಪ್ರಪಂಚದ 40 ದೇಶಗಳಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೇಶಗಳಲ್ಲಿ ಸಿನಿಮಾ ಪ್ರದರ್ಶನ ಮಾಡುತ್ತೇವೆ ಎಂದು ನಿರ್ದೇಶಕರು ಟ್ವೀಟ್ ಮಾಡಿ ಹೇಳಿದ್ದಾರೆ.

More from Filmibeat

English summary
Supreme Court notice to West Bengal, Tamilnadu in plea against The Kerala Story movie ban. Supreme Court Asks Why Should West Bengal Ban The Kerala Story. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X