twitter
    For Quick Alerts
    ALLOW NOTIFICATIONS  
    For Daily Alerts

    ಶ್ರೀದೇವಿ ಸಾವಿನ ಪ್ರಕರಣಕ್ಕೆ ಮರುಜೀವ: ಸುಪ್ರೀಂ ಅಂಗಳದಲ್ಲಿ ಡೆತ್ ಮಿಸ್ಟರಿ.!

    By Bharath Kumar
    |

    ಫೆಬ್ರವರಿ 24, ರಂದು ದುಬೈ ಹೋಟೆಲ್ ವೊಂದರಲ್ಲಿ ಬಾಲಿವುಡ್ ನಟಿ ಶ್ರೀದೇವಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಸಂಬಂಧಿಕರ ಮದುವೆಗೆ ತೆರೆಳಿದ್ದ ನಟಿ ಹೋಟೆಲ್ ರೂಂನ ಬಾತ್ ಟಾಬ್ ನಲ್ಲಿ ಮುಳುಗಿ ನಿಧನರಾಗಿದ್ದರು.

    ಮೇಲ್ನೋಟಕ್ಕೆ ಇದು ಅನುಮಾನಾಸ್ಪದಕ ಸಾವು ಎಂದೆನಿಸಿದರು, ದುಬೈ ಪೊಲೀಸರು 'ಇದೊಂದು ಆಕಸ್ಮಿಕ ಸಾವು, ಅತೀಯಾದ ಪಾನಮತ್ತರಾಗಿದ್ದರಿಂದ ಬಾತ್ ಟಾಬ್ ನಲ್ಲಿ ಮುಳುಗಿದ್ದಾರೆ' ಎಂದು ದುಬೈ ಪೊಲೀಸರು ಪ್ರಕರಣದ ತನಿಖೆಯನ್ನ ಪೂರ್ಣಗೊಳಿಸಿದ್ದರು.

    ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣ

    ನಂತರ ದುಬೈ ಕಾನೂನು ರೀತಿಯಲ್ಲಿ ದಾಖಲೆಗಳನ್ನ ಸಲ್ಲಿಸಿ ಶ್ರೀದೇವಿ ಮೃತದೇಹವನ್ನ ಭಾರತಕ್ಕೆ ತಂದು, ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಯಿತು. ಆದ್ರೆ, ಭಾರತದಲ್ಲಿ ಶ್ರೀದೇವಿ ಸಾವಿನ ಬಗ್ಗೆ ಯಾರೊಬ್ಬರು ದನಿ ಎತ್ತಲಿಲ್ಲ. ಆದ್ರೀಗ, ಬಾಲಿವುಡ್ ನಿರ್ಮಾಪಕನೊಬ್ಬ ಶ್ರೀದೇವಿ ಸಾವಿನ ತನಿಖೆ ಮತ್ತೆ ನಡೆಸಲು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ಸುಪ್ರೀಂ ಮೊರೆಹೋದ ನಿರ್ಮಾಪಕ

    ಸುಪ್ರೀಂ ಮೊರೆಹೋದ ನಿರ್ಮಾಪಕ

    ಬಾಲಿವುಡ್ ನಿರ್ಮಾಪಕ ಸುನೀಲ್ ಸಿಂಗ್ ಎಂಬುವವರು ಶ್ರೀದೇವಿ ಸಾವಿನ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನ ಪರಿಷ್ಕರಿಸಿದ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿದೆ.

    ಶ್ರೀದೇವಿಯಂತೆ 'ಬಾತ್ ಟಬ್'ನಲ್ಲಿ ಸಾವುಗೀಡಾಗಿದ್ದ 6 ತಾರೆಯರುಶ್ರೀದೇವಿಯಂತೆ 'ಬಾತ್ ಟಬ್'ನಲ್ಲಿ ಸಾವುಗೀಡಾಗಿದ್ದ 6 ತಾರೆಯರು

    ಸುನೀಲ್ ಸಿಂಗ್ ಗೆ ಅನುಮಾನ

    ಸುನೀಲ್ ಸಿಂಗ್ ಗೆ ಅನುಮಾನ

    ಶ್ರೀದೇವಿ ದುಬೈನಲ್ಲಿ ಸಾವುಗೀಡಾದಾಗ ಸುನೀಲ್ ಸಿಂಗ್ ಕೂಡ ಅಲ್ಲೇ ಇದ್ದರಂತೆ. ಶ್ರೀದೇವಿ ತಂಗಿದ್ದ ಹೋಟೆಲ್ ಸಿಬ್ಬಂದಿ, ಕೆಲಸಗಾಗರ ಬಳಿ ಮಾತನಾಡಿದ್ದ ನಿರ್ಮಾಪಕನಿಗೆ ಬೇರೆ ಮಾಹಿತಿ ಸಿಕ್ಕಿತಂತೆ. ಹೀಗಾಗಿ, ಸಾವಿನ ಹಿಂದೆ ಬೇರೆಯದ್ದೇ ಕಾರಣವಿರಬಹುದು ಎಂದು ವಿಚಾರಣೆ ನಡೆಸಲು ಮನವಿ ಸಲ್ಲಿಸಿದ್ದಾರಂತೆ.

    ಕಮಲ್ ಹಾಸನ್ ಮತ್ತು ಶ್ರೀದೇವಿ 'ಅಣ್ಣ-ತಂಗಿ'.!ಕಮಲ್ ಹಾಸನ್ ಮತ್ತು ಶ್ರೀದೇವಿ 'ಅಣ್ಣ-ತಂಗಿ'.!

    ಅರ್ಜಿ ತಿರಸ್ಕರಿಸಿದ ಕೋರ್ಟ್

    ಅರ್ಜಿ ತಿರಸ್ಕರಿಸಿದ ಕೋರ್ಟ್

    ಸುನೀಲ್ ಸಿಂಗ್ ಅವರ ಅರ್ಜಿಯನ್ನ ಶುಕ್ರವಾರ ವಿಚಾರಣೆ ನಡೆಸಿದ ಕೋರ್ಟ್ ಈ ಪ್ರಕರಣವನ್ನ ತಿರಸ್ಕರಿಸಿದೆ. ''ಈಗಾಗಲೇ ಎರಡು ಅರ್ಜಿಯನ್ನ ಈ ಪ್ರಕರಣದಲ್ಲಿ ತಿರಸ್ಕರಿಸಿದ್ದೇವೆ. ತನಿಖೆಗೆ ನಾವು ಮಧ್ಯೆ ಪ್ರವೇಶಿಸಬಾರದು'' ಎಂದು ಮುಖ್ಯ ನ್ಯಾಯಾಧೀಶರು ತಿಳಿಸಿದ್ದಾರಂತೆ.

    ಶ್ರೀದೇವಿಯ ಅಂತಿಮ ದರ್ಶನದ ವೇಳೆ ಟೀಕೆಗೆ ಗುರಿಯಾದ ನಟಿ ಜಾಕ್ವೆಲಿನ್ಶ್ರೀದೇವಿಯ ಅಂತಿಮ ದರ್ಶನದ ವೇಳೆ ಟೀಕೆಗೆ ಗುರಿಯಾದ ನಟಿ ಜಾಕ್ವೆಲಿನ್

    ಅರ್ಜಿದಾರರ ವಾದವೇನು.?

    ಅರ್ಜಿದಾರರ ವಾದವೇನು.?

    ನಟಿ ಶ್ರೀದೇವಿ ಅವರ ಹೆಸರಿನಲ್ಲಿ ಸುಮಾರು 240 ಕೋಟಿ ವಿಮೆ ಮಾಡಿಸಲಾಗಿದೆ. ಶ್ರೀದೇವಿ ಸಾವಿನ ಬಳಿಕವೇ ಆ ಹಣ ಕೈಸೇರುವುದು. ಹೀಗಾಗಿ, ಇದರ ಹಿಂದೆ ಏನಾದರೂ ಕಾರಣವಿರಬಹುದಾ ಎಂದು ಆರೋಪಿಸಿದ್ದರು.

    ಶ್ರೀದೇವಿ ಬರ್ತಡೇಗೆ ಕಾದಿತ್ತು ಬಹುದೊಡ್ಡ ಸರ್ಪ್ರೈಸ್: ನೋಡಲು ಆಕೆಯೇ ಇಲ್ಲ.!ಶ್ರೀದೇವಿ ಬರ್ತಡೇಗೆ ಕಾದಿತ್ತು ಬಹುದೊಡ್ಡ ಸರ್ಪ್ರೈಸ್: ನೋಡಲು ಆಕೆಯೇ ಇಲ್ಲ.!

    ಕುಟುಂಬದವರಿಗಿಲ್ಲದ ಯೋಚನೆ ಇವರಿಗ್ಯಾಕೆ.?

    ಕುಟುಂಬದವರಿಗಿಲ್ಲದ ಯೋಚನೆ ಇವರಿಗ್ಯಾಕೆ.?

    ಶ್ರೀದೇವಿ ಕುಟುಂಬದವರೇ ಆಕೆಯೆ ಸಾವಿನ ಬಗ್ಗೆ ಯಾವುದೇ ತನಿಖೆಗೆ ಮುಂದಾಗಿಲ್ಲ. ಆದ್ರೆ, ಈ ನಿರ್ಮಾಪಕನಿಗೇಕೆ ಈ ಯೋಚನೆ ಎಂದು ಪ್ರಶ್ನೆ ಕಾಡುತ್ತಿದೆ.

    English summary
    A request for an investigation into actor Sridevi's death in February was rejected today by the Supreme Court, Sunil Singh had approached the Supreme Court after his petition was rejected by the Delhi High Court.
    Friday, May 11, 2018, 13:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X