ತಮ್ಮ ಜೀವನಾಧಾರಿತ ಸಿನಿಮಾದಲ್ಲಿ ಯಾರು ನಟಿಸಬೇಕು? ಅಚ್ಚರಿಯ ನಟನನ್ನು ಆರಿಸಿದ ಸುರೇಶ್ ರೈನಾ

ಬಾಲಿವುಡ್‌ನಲ್ಲಿ ಈಗ ಬಯೋಪಿಕ್‌ (ಜೀವನಾಧಾರಿತ) ಸಿನಿಮಾಗಳ ಕಾಲ. ಸಾಕಷ್ಟು ಬಯೋಪಿಕ್‌ಗಳು ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿವೆ ಮತ್ತು ಹಿಟ್ ಸಹ ಆಗುತ್ತಿವೆ.

Recommended Video

ಚಿರು ಪುಣ್ಯತಿಥಿ ಕುಟುಂಬದವರಿಗೆ ಖಡಕ್ ಸೂಚನೆ ಕೊಟ್ಟ ಪೊಲೀಸ್ | Chiranjeevi Sarja | Meghan Raj | Dhruva Sarja

ಅದರಲ್ಲಿಯೂ ಕ್ರೀಡಾಪಟುಗಳ ಜೀವನಾಧಾರಿತ ಸಿನಿಮಾಗಳಿಗಂತೂ ತುಸು ಹೆಚ್ಚೇ ಡಿಮ್ಯಾಂಡ್ ಇದೆ. ಸಾಕಷ್ಟು ಸಂಖ್ಯೆಯಲ್ಲಿ ಕ್ರೀಡಾಪಟುಗಳ ಜೀವನ ತೆರೆಯ ಮೇಲೆ ಬಂದಿದೆ.

ಕ್ರಿಕೆಟ್ ಆಟಗಾರರ ಜೀವನಾಧಾರಿತ ಸಿನಿಮಾಗಳಂತೂ ಪಕ್ಕಾ ಹಿಟ್ ಎನ್ನಲಾಗುತ್ತದೆ. ಈಗಾಗಲೇ ಅಜರುದ್ಧೀನ್, ಸಚಿನ್, ಧೋನಿ ಜೀವನಾಧಾರಿತ ಸಿನಿಮಾಗಳು ತೆರೆಗೆ ಬಂದಿವೆ. ಕಪಿಲ್ ಜೀವನಾಧಾರಿತ ಸಿನಿಮಾ ತೆರೆಗೆ ಬರಲು ತಯಾರಾಗಿದೆ.

ಅಭಿಮಾನಿಗಳ ಪ್ರಶ್ನೆಗೆ ರೈನಾ ಉತ್ತರ

ಅಭಿಮಾನಿಗಳ ಪ್ರಶ್ನೆಗೆ ರೈನಾ ಉತ್ತರ

ಖ್ಯಾತ ಕ್ರಿಕೆಟರ್ ಸುರೇಶ್ ರೈನಾ ಅವರಿಗೆ ಕೆಲವು ಅಭಿಮಾನಿಗಳು ಇದೇ ಪ್ರಶ್ನೆಯನ್ನು ಮುಂದಿಟ್ಟಿದ್ದು, 'ನಿಮ್ಮ ಜೀವನ ಸಿನಿಮಾ ಆದರೆ ಯಾವ ನಟ ನಿಮ್ಮ ಪಾತ್ರ ಮಾಡಬೇಕು ಎಂದು ಬಯಸುತ್ತೀರಿ' ಎಂದು ಕೇಳಿದ್ದಾರೆ. ಇದಕ್ಕೆ ಅಚ್ಚರಿಯ ನಟನನ್ನು ಸುರೇಶ್ ರೈನಾ ಹೆಸರಿಸಿದ್ದಾರೆ.

ಸುರೇಶ್ ರೈನಾ ಆಯ್ಕೆ ಯಾರು?

ಸುರೇಶ್ ರೈನಾ ಆಯ್ಕೆ ಯಾರು?

ಹೌದು, ಸುರೇಶ್ ರೈನಾ ತಮ್ಮ ಜೀವನಾಧಾರಿತ ಸಿನಿಮಾ ನಿರ್ಮಾಣವಾದರೆ ತಮ್ಮ ಪಾತ್ರವನ್ನು ಮಲಯಾಳಂ ನ ಖ್ಯಾತ ನಟ ದುಲ್ಕರ್ ಸಲ್ಮಾನ್ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ರಣ್ವೀರ್, ರಣ್ಬೀರ್ ಹೆಸರನ್ನು ನಿರೀಕ್ಷಿಸುತ್ತಿದ್ದವರಿಗೆ ಇದು ಅಚ್ಚರಿಯ ಆಯ್ಕೆಯೇ ಆಗಿದೆ.

ಮತ್ತೊಬ್ಬ ನಟನನ್ನು ಹೆಸರಿಸಿದ್ದಾರೆ ರೈನಾ

ಮತ್ತೊಬ್ಬ ನಟನನ್ನು ಹೆಸರಿಸಿದ್ದಾರೆ ರೈನಾ

ದುಲ್ಕರ್ ಬಿಟ್ಟು ಮತ್ತೊಬ್ಬ ನಟನ ಹೆಸರನ್ನು ಸಹ ಸುರೇಶ್ ಹೇಳಿದ್ದು, ಅವರೇ ಶಾಹಿದ್ ಕಪೂರ್. ಶಾಹಿದ್ ಉತ್ತಮ ಕ್ರಿಕೆಟ್ ಆಟಗಾರ ಸಹ ಆಗಿದ್ದು, ಅತ್ಯುತ್ತಮ ನಟರೂ ಹೌದು. ಹಾಗಾಗಿ ಅವರನ್ನು ಸುರೇಶ್ ರೈನಾ ಆಯ್ಕೆ ಮಾಡಿದ್ದಾರೆ.

ಹಲವು ಕ್ರೀಡಾಪಟುಗಳ ಜೀವನ ಸಿನಿಮಾ ಆಗಿದೆ

ಹಲವು ಕ್ರೀಡಾಪಟುಗಳ ಜೀವನ ಸಿನಿಮಾ ಆಗಿದೆ

ಮಿಲ್ಕಾ ಸಿಂಗ್, ಮೇರಿಕೋಮ್, ಕುಸ್ತಿ ಪಟು ಮಹಾವೀರ್ ಸಿಂಗ್ ಪೋಗಟ್, ಕ್ರಿಕೆಟಿಗ ಅಜರುದ್ಧೀನ್, ಧೋನಿ, ಸಚಿನ್ ಜೀವನಾಧಾರಿತ ಸಿನಿಮಾಗಳು ಈಗಾಗಲೇ ತೆರೆಗೆ ಬಂದು ಹಿಟ್ ಎನಿಸಿಕೊಂಡಿವೆ. ಸೈನಾ ನೆಹ್ವಾಲ್, ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನಾಧಾರಿತ ಸಿನಿಮಾಗಳು ತೆರೆಗೆ ಬರಲಿವೆ.

More from Filmibeat

English summary
Cricketer Suresh Raina choose two actors who can act in his biopic movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X