ಆ ರಾಷ್ಟ್ರ ಪ್ರಶಸ್ತಿ ನಿರ್ದೇಶಕ ನನ್ನ ಜೊತೆ ಮಲಗಲು ಬಯಸಿದ್ದ, ಕಹಿ ಅನುಭವ ಹಂಚಿಕೊಂಡ ಶಿವಣ್ಣನ ನಾಯಕಿ..!
ಬಣ್ಣದ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತದೆ. ಇನ್ನೂ ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ.
ಒಂದರ್ಥದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಸಮಯ ಸಂದರ್ಭ ಬಂದಾದ ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಾರೆ. ಉದಾಹರಣೆಗೆ ಸುರ್ವೀನ್ ಚಾವ್ಲಾ.

ಹೌದು ಸುರ್ವೀನ್ ಚಾವ್ಲಾ.. ಡಾ.ಶಿವರಾಜ್ ಕುಮಾರ್ ಅಭಿನಯದ 'ಪರಮೇಶ ಪಾನವಾಲಾ' ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಚೆಲುವೆ. ಕನ್ನಡದ ನಂತರ ತೆಲುಗಿನತ್ತ ಕೂಡ ಮುಖ ಮಾಡಿದ್ದ ಸುರ್ವೀನ್ ಚಾವ್ಲಾ ಅವರಿಗೆ ಆ ನಂತರ ಕೈ ಹಿಡಿದಿದ್ದು ಪಂಜಾಬಿ ಚಿತ್ರರಂಗ. ಪಂಜಾಬಿಯಲ್ಲಿ ಒಂದಾದ ಮೇಲೊಂದು ಚಿತ್ರ ಮಾಡಿದ ಸುರ್ವೀನ್ ಹೇಟ್ ಸ್ಟೋರಿ 2 ಸೇರಿ ಹಿಂದಿಯಲ್ಲಿ ಕೂಡ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಕೇವಲ ಬೆಳ್ಳಿತೆರೆ ಮಾತ್ರವಲ್ಲ ಕಸೌತಿ ಜಿಂದಗಿ ಕೇ, ಕಹಿನ್ ತೋ ಹೋಗಾ, ಹೀಗೆ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿರುವ ಸುರ್ವೀನ್ ಚಾವ್ಲಾ ವೆಬ್ ಸರಣಿಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಸೇಕ್ರೆಡ್ ಗೇಮ್ಸ್ , ಡಿ ಕಪಲ್ಡ್, ರಾಣಾ ನಾಯ್ಡು ಅಂತಹ ವೆಬ್ ಸೀರಿಸ್‌ನ ಭಾಗವಾಗಿದ್ದಾರೆ. ಸದ್ಯ ಇವರು ಅಭಿನಯಿಸಿರುವ ಕ್ರಿಮಿನಲ್ ಜಸ್ಟಿಸ್ ಸೀಸನ್ 4 ಇತ್ತೀಚೆಗಷ್ಟೇ ಓಟಿಟಿಯಲ್ಲಿ ಬಿಡುಗಡೆಯಾಗಿದೆ.
ಇಂಥಾ ಸುರ್ವೀನ್ ಚಾವ್ಲಾ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹೌಟರ್ ಪ್ಲೈಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸುರ್ವೀನ್ ಚಾವ್ಲಾ ಹಿಂದಿ ಬಾರದ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕನೊಬ್ಬ ನನ್ನ ಜೊತೆ ಮಲಗಲು ಬಯಸಿದ್ದ ಎಂದು ಹೇಳಿದ್ದಾರೆ.
ಆ ನಿರ್ದೇಶಕರಿಗೆ ಹಿಂದಿ ಮತ್ತು ಇಂಗ್ಲೀಷ ಕಾರಣ ಮೂರನೇ ವ್ಯಕ್ತಿಯನ್ನು ಮಧ್ಯವರ್ತಿಯನ್ನಾಗಿ ನನ್ನ ಬಳಿ ಕಳುಹಿಸಿದ್ದರು ಎಂದಿರುವ ಸುರ್ವೀನ್ ಚಾವ್ಲಾ ಆ ಮೂರನೇ ಕೂಡ ಹೇಳಲು ಧೈರ್ಯ ಸಾಲದೇ ಸಂಜ್ಞೆಯ ಮೂಲಕ ಸಂವಹನ ನಡೆಸುವ ಪ್ರಯತ್ನ ಮಾಡಿದರು ಎಂದು ಹೇಳಿದ್ದಾರೆ.
ಆ ವ್ಯಕ್ತಿಯ ಹಾವ ಭಾವದಿಂದ ನನಗೆ ಅನುಮಾನ ಬಂತು ಆಗ ನಾನು ನಿರ್ದೇಶಕರಿಗೆ ನನ್ನ ಜೊತೆ ಮಲಗುವ ಆಸೆಯಾಗಿದೆಯಾ ಎಂದು ಕೇಳಿದೆ ಆಗ ಆ ವ್ಯಕ್ತಿ ತಲೆಯಾಡಿಸಿದ ಆಗ ನೀವು ತಪ್ಪಾದ ಮನೆಯ ಬಾಗಿಲು ಬಡಿಯುತ್ತಿರುವುದಕ್ಕೆ ನನಗೆ ವಿಷಾದ ಇದೆ ಎಂದು ಹೇಳಿದೆ, ಕೆಲಸಕ್ಕೋಸ್ಕರ ನಾನು ರಾಜಿಯಾಗುವುದಿಲ್ಲ ಎಂದು ಹೇಳಿ ಕಳುಹಿಸಿದ್ದೇ ಎಂದಿದ್ದಾರೆ.
ಅಂದ್ಹಾಗೇ ತಮ್ಮ ಈ ಅನುಭವವನ್ನು ಸುರ್ವೀನ್ ಚಾವ್ಲಾ ಈ ಹಿಂದೆಯೂ ಹಂಚಿಕೊಂಡಿದ್ದರು. ಈಗ ಇನ್ನೊಮ್ಮೆ ಹೌಟರ್ ಪ್ಲೈಗೆ ನೀಡಿದ ಸಂದರ್ಶನದಲ್ಲಿ ಆ ದಿನವನ್ನು ನೆನಪಿಸಿಕೊಂಡಿದ್ದಾರೆ. ಈ ಮೂಲಕ ತಮಿಳು ಚಿತ್ರರಂಗದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಯಾಕೆಂದರೆ ಆ ರಾಷ್ಟ್ರ ಪ್ರಶಸ್ತಿ ನಿರ್ದೇಶಕ ತಮಿಳು ಚಿತ್ರರಂಗದಲ್ಲಿರುವುದು ಎಂದು ಸುರ್ವೀನ್ ಹೇಳಿದ್ದಾರೆ. ಹೀಗಾಗಿ ಆ ನಿರ್ದೇಶಕ ಯಾರು ಎನ್ನುವ ಪ್ರಶ್ನೆ ಈಗ ಮತ್ತೊಮ್ಮೆ ಎಲ್ಲರನ್ನು ಕಾಡುತ್ತಿದೆ. ಕೆಲವರ ಮೇಲೆ ತಮಿಳು ಚಿತ್ರಪ್ರೇಮಿಗಳಿಗೆ ಅನುಮಾನ ಕೂಡ ಬಂದಿದೆ.


Click it and Unblock the Notifications











