ದಕ್ಷಿಣ ಭಾರತೀಯ ಚಿತ್ರರಂಗದವರಿಗೆ ಎಲ್ಲಾ ದಪ್ಪಗಿರಬೇಕು, ನಿಂದೇನು ಬೌನ್ಸ್ ಆಗ್ತಿಲ್ಲ ಅಂತಾರೆ ಎಂದ ಶಿವಣ್ಣ ನಾಯಕಿ..!

ದೇಹದ ಗಾತ್ರದ ಕುರಿತು ಬಣ್ಣದ ಪ್ರಪಂಚದಲ್ಲಿ ಆಗಾಗ ಮಾತು ಕೇಳಿ ಬರುತ್ತಲೇ ಇರುತ್ತೆ. ಅನೇಕ ನಾಯಕಿಯರು ಈ ಬಾಡಿ ಶೇಮಿಂಗ್‌ಗೆ ಚಿತ್ರರಂಗದಲ್ಲಿ ಗುರಿಯಾಗಿದ್ದು ಇದೆ. ದಪ್ಪಗಿದ್ದರೆ ದಪ್ಪ .. ತೆಳ್ಳಗಿದ್ದರೆ ಕಡ್ಡಿ .. ಎಂದು ಅನೇಕ ನಾಯಕಿಯರನ್ನು ಇಲ್ಲಿ ಕೇವಲ ದೇಹದಾಕಾರದ ಮೇಲೆ ಅಳೆಯಲಾಗಿದೆ. ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯದ ಕುರಿತು ಮಾತನಾಡುವ

ಮೂಲಕ ಅನೇಕರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳು ಇಲ್ಲಾಗಿವೆ. ಹೀಗಾಗಿಯೇ ಲಿಂಗ, ಬಣ್ಣ, ಜನಾಂಗದಂತೆ ದೇಹದ ಗಾತ್ರ ಪರಿಗಣಿಸಿ ಮಾಡಲಾಗುವ ಈ ತಾರತಮ್ಯದ ಕುರಿತು ಇಲ್ಲಿಯವರೆಗೆ ಹಲವರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ದೇಹ ರಚನೆಯ ಕುರಿತು ಎದುರಾದ ಟೀಕೆಗಳ ಕುರಿತು ಹಲವರು ಮಾತನಾಡಿದ್ದಾರೆ. ಉದಾಹರಣೆಗೆ ಸುರ್ವೀನ್ ಚಾವ್ಲಾ.

Surveen Chawla Reveals She Was Told to Gain Weight for South Films Nothing Will Bounce

ಹೌದು, ಸುರ್ವೀನ್ ಚಾವ್ಲಾ.. ಡಾ.ಶಿವರಾಜ್ ಕುಮಾರ್ ಅಭಿನಯದ 'ಪರಮೇಶ ಪಾನವಾಲಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ಆ ನಂತರ ತೆಲುಗಿನ 'ರಾಜು ಮಹಾರಾಜು' ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದ ಸುರ್ವೀನ್ ಪಂಜಾಬಿ ಮತ್ತು ಹಿಂದಿ ಭಾಷೆಯಲ್ಲಿ ಮಿಂಚಿದ್ದೇ ಹೆಚ್ಚು. ಅದರಲ್ಲಿಯೂ ಹೇಟ್ ಸ್ಟೋರಿ 2 ಇವರಿಗೆ ಒಳ್ಳೆಯ ಹೆಸರು ತಂದು ಕೊಡ್ತು.

ಇನ್ನು ಕೇವಲ ಬೆಳ್ಳಿತೆರೆ ಮಾತ್ರವಲ್ಲ ಕಸೌತಿ ಜಿಂದಗಿ ಕೇ, ಕಹಿನ್ ತೋ ಹೋಗಾ, ಹೀಗೆ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿರುವ ಸುರ್ವೀನ್ ಚಾವ್ಲಾ ವೆಬ್ ಸರಣಿಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಸೇಕ್ರೆಡ್ ಗೇಮ್ಸ್ , ಡಿ ಕಪಲ್ಡ್, ರಾಣಾ ನಾಯ್ಡು ಅಂತಹ ವೆಬ್ ಸೀರಿಸ್‌ನ ಭಾಗವಾಗಿದ್ದಾರೆ. ಸದ್ಯ ಇವರು ಅಭಿನಯಿಸಿರುವ ಕ್ರಿಮಿನಲ್ ಜಸ್ಟಿಸ್ ಸೀಸನ್ 4 ಇತ್ತೀಚೆಗಷ್ಟೇ ಓಟಿಟಿಯಲ್ಲಿ ಬಿಡುಗಡೆಯಾಗಿದೆ.

ಇಂಥಾ ಸುರ್ವೀನ್ ಚಾವ್ಲಾ ಸದ್ಯ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮಗಾದ ಅನುಭವದ ಕುರಿತು ಮಾತನಾಡಿದ್ದಾರೆ. ಸೌತ್ ಇಂಡಸ್ಟ್ರೀಯಲ್ಲಿ ಮಿಂಚಬೇಕು ಅಂದರೆ ಎಲ್ಲ ದಪ್ಪಗಿರಬೇಕು ಎಂದು ಹೇಳಿದ್ದಾರೆ. ಹೌಟರ್‌ ಪ್ಲೈಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸುರ್ವೀನ್ ಚಾವ್ಲಾ ದಕ್ಷಿಣ ಭಾರತೀಯ ಚಿತ್ರರಂಗದವರಿಗೆ ದಪ್ಪ ಇರಬೇಕು ಎಂದು ಹೇಳಿದ್ದಾರೆ.

ಸಂದರ್ಶನದಲ್ಲಿ ನೀವು ತುಂಬಾ ತೆಳ್ಳಗಿದ್ದೀರಿ, ನಿಮ್ಮ ದೇಹದ ಯಾವ ಭಾಗ ಕೂಡ ಪುಟಿಯುವುದಿಲ್ಲ ಎಂದು ನನಗೆ ಹೇಳಿದ್ದರು ಎಂದಿರುವ ಸುರ್ವೀನ್ ಈಗ ಆದರೆ ಈ ರೀತಿ ಮಾತನಾಡಲು ಸ್ವಲ್ಪ ಯೋಚನೆ ಮಾಡ್ತಾರೆ, ಆದರೆ.. ನಾನು ಸೌತ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ನನ್ನ ದೇಹದ ಕುರಿತು ನನ್ನ ಮುಖಕ್ಕೆ ಹೊಡೆದಂತೆ ಕಾಮೆಂಟ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ನನ್ನ ದೇಹಾಕೃತಿಯನ್ನು ಟೀಕಿಸಿದ್ದಕ್ಕೆ ನಾನು ಹಲವು ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದೇನೆ ಎಂದು ಕೂಡ ಹೇಳಿದ್ದಾರೆ.

ಇನ್ನು ಇದೇ ಸಂದರ್ಶನದಲ್ಲಿ ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಕೂಡ ಸುರ್ವೀನ್ ಚಾವ್ಲಾ ಹಂಚಿಕೊಂಡಿದ್ದು ಅವಕಾಶ ನೀಡುವ ನೆಪದಲ್ಲಿ ಮದುವೆಯ ನಂತರ ಖ್ಯಾತ ನಿರ್ದೇಶಕರೊಬ್ಬರು ನನಗೆ ಕಿಸ್ ಮಾಡಲು ಮುಂದಾಗಿದ್ದರು ಎಂದು ಹೇಳಿದ್ಧಾರೆ. ಬಹುತೇಕ ನನ್ನನ್ನೂ ಅವರು ಚುಂಬಿಸಿಯೇ ಬಿಟ್ಟಿದ್ದರು. ಆದರೆ ನಾನು ಆ ನಿರ್ದೇಶಕನನ್ನು ಹಿಂದಕ್ಕೆ ತಳ್ಳಿದೆ. ಅವರ ಈ ನಡುವಳಿಕೆಯಿಂದ ನನಗೆ ಆಘಾತವಾಗಿತ್ತು ಎಂದು ಸುರ್ವೀನ್ ಹೇಳಿದ್ದಾರೆ.

ಸದ್ಯ ಸುರ್ವಿನ್ ಚಾವ್ಲಾ ದೇಹದ ಕುರಿತು ಮಾತನಾಡಿರುವ ಮಾತುಗಳ ಕುರಿತು ಚಿತ್ರರಂಗದಲ್ಲಿ ಮತ್ತು ಚಿತ್ರಪ್ರೇಮಿಗಳ ನಡುವೆ ಚರ್ಚೆಯಾಗುತ್ತಿದೆ. ಸುರ್ವಿನ್ ಚಾವ್ಲಾ ಅವರಿಗೆ ಮುತ್ತು ಕೊಡಲು ಬಂದ ಆ ನಿರ್ದೇಶಕ ಯಾರಿರಬಹುದು ಎಂದು ಕೂಡ ಒಂದು ವರ್ಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದೆ.

More from Filmibeat

English summary
Surveen Chawla recently revealed that during her early days in the South Indian film industry, she was asked to gain weight to fit a certain beauty standard. She recalled being told that "nothing will bounce" if she didn't put on weight, highlighting the industry's stereotypical expectations of actresses' bodies.
Read more about: body actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X