ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ಸಾವು: ಕುಟುಂಬದಿಂದ ಮನವಿ

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಳ್ಳುವ ದಿನಕ್ಕೆ ಐದು ದಿನದ ಹಿಂದೆ ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ಇದು ಆತ್ಮಹತ್ಯೆ ಎನ್ನಲಾಗಿತ್ತು.

Recommended Video

ಅಂಬರೀಷ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ | Sumalatha Ambareesh | Filmibeat Kannada

ಜೂನ್ 9 ರಂದು ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ ಮುಂಬೈನ ಮಲಾಡ್ ನಲ್ಲಿನ ಕಟ್ಟಡವೊಂದರ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದರು. ಇದಾದ ಐದು ದಿನಗಳ ನಂತರ ಅಂದರೆ ಜೂನ್ 14 ಕ್ಕೆ ಸುಶಾಂತ್ ತಮ್ಮ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು.

ಈ ಎರಡೂ ಸಾವುಗಳಿಗೆ ಸಂಬಂಧ ಕಲ್ಪಿಸಿ ಕೆಲವು ಸುದ್ದಿಗಳು ಹರಿದಾಡಿದವು. ದಿಶಾ ಸಾಲಿಯಾನ ಸಾವಿನಿಂದಲೇ ಸುಶಾಂತ್ ಖಿನ್ನತೆಗೆ ಒಳಪಟ್ಟಿದ್ದರು, ದಿಶಾ ಸತ್ತಿದ್ದರಿಂದಲೇ ಸುಶಾಂತ್ ಸಿಂಗ್ ಸಾವನ್ನಪ್ಪಿದರು ಎಂದು ಹೇಳಲಾಗುತ್ತಿತ್ತು. ಆದರೆ ಈ ರೀತಿಯ ಸುದ್ದಿಗಳಿಗೆ ದಿಶಾ ಸಾಲಿಯಾನ ಕುಟುಂಬ ಪೂರ್ಣ ವಿರಾಮವಿಡಲು ಹೇಳಿಕೆ ನೀಡಿದೆ.

ಸುಶಾಂತ್ ಸಿಂಗ್-ದಿಶಾ ಬಗ್ಗೆ ಸುಳ್ಳು ಸುದ್ದಿ

ಸುಶಾಂತ್ ಸಿಂಗ್-ದಿಶಾ ಬಗ್ಗೆ ಸುಳ್ಳು ಸುದ್ದಿ

ಸುಶಾಂತ್ ಸಿಂಗ್ ರಜಪೂತ್ ಹಾಗೂ ದಿಶಾ ಸಾಲಿಯಾನ ಮಧ್ಯೆ ಸಂಬಂಧವಿತ್ತು, ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಸುಶಾಂತ್ ಮಾತಿನಿಂದ ನೊಂದು ದಿಶಾ ಆತ್ಮಹತ್ಯೆ ಮಾಡಿಕೊಂಡಳು, ಇದರಿಂದ ಮನನೊಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರು ಎಂದು ಕೆಲವು ಪತ್ರಿಕೆಗಳು, ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡಿದವು. ಆದರೆ ಇವು ಸತ್ಯವಲ್ಲ.

ಸ್ಪಷ್ಟನೆ ನೀಡಿರುವ ದಿಶಾ ಕುಟುಂಬ

ಸ್ಪಷ್ಟನೆ ನೀಡಿರುವ ದಿಶಾ ಕುಟುಂಬ

ಈ ಬಗ್ಗೆ ಸ್ಪಷ್ಟನೆ ನೀಡಿರುವ ದಿಶಾ ಸಾಲಿಯಾನ ಕುಟುಂಬ ಮತ್ತು ಗೆಳೆಯರು ಬಹಿರಂಗ ಪತ್ರವೊಂದನ್ನು ಬರೆದು, ದಯವಿಟ್ಟು ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಮನವಿ ಮಾಡಿದ್ದಾರೆ. ದಿಶಾ ಸಾವಿನ ಲಾಭ ತೆಗೆದುಕೊಳ್ಳುವ ಪ್ರಯತ್ನ ಕ್ರೂರ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ನಾವೆಲ್ಲಾ ಆಘಾತದಲ್ಲಿದ್ದೇವೆ: ದಿಶಾ ಕುಟುಂಬ

ನಾವೆಲ್ಲಾ ಆಘಾತದಲ್ಲಿದ್ದೇವೆ: ದಿಶಾ ಕುಟುಂಬ

ನಾವೆಲ್ಲಾ ತೀವ್ರ ಆಘಾತದಲ್ಲಿದ್ದೇವೆ, ದುಖಃದಿಂದ ಹೊರಬರುವ ಪ್ರಯತ್ನದಲ್ಲಿದ್ದೇವೆ. ಇಂಥಹಾ ಸನ್ನಿವೇಶದಲ್ಲಿ ನಮಗೆ ಬೆಂಬಲ ನೀಡದಿದ್ದರೂ ಪರವಾಗಿಲ್ಲ, ನಮ್ಮನ್ನು ಇನ್ನಷ್ಟು ನೋಯಿಸಬೇಡಿ ಎಂದು ದಿಶಾ ಕುಟುಂಬ ಸದಸ್ಯರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ವಿಚಾರಣೆ

ಸಂಜಯ್ ಲೀಲಾ ಬನ್ಸಾಲಿ ವಿಚಾರಣೆ

ಸುಶಾಂತ್ ಸಿಂಗ್ ಆತ್ಮಹತ್ಯೆ ತನಿಖೆಯನ್ನು ಮುಂಬೈ ಪೊಲೀಸರು ನಡೆಸುತ್ತಿದ್ದು, ಇಂದು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಸುಮಾರು ಮೂರು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದಾರೆ.

More from Filmibeat

English summary
Sushant Singh's former manager Disha Salian's family request people to do not spread fake news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X