For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಜ್ಯೂಸ್ ಕುಡಿದ ಗ್ಲಾಸನ್ನು ಪೊಲೀಸರು ಯಾಕೆ ಸಂಗ್ರಹಿಸಿಲ್ಲ? ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

  |

  ಸುಶಾಂತ್ ಸಿಂಗ್ ಸಾವಿನ ಪ್ರಕರಣ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದೆ. ಜೂನ್ 15ರಂದು ಸುಶಾಂತ್ ಸಿಂಗ್ ಮುಂಬೈನ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ನಿಧನ ಹೊಂದಿ 4 ಇದೀಗ ತಿಂಗಳಾಗಿದೆ. ಇನ್ನೂ ಸುಶಾಂತ್ ಸಿಂಗ್ ಸಾವಿನ ಹಿಂದಿನ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ. ಸುಶಾಂತ್ ಸಿಂಗ್ ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದೆ.

  ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆನಾ ಅಥವಾ ಕೊಲೆನಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಇತ್ತೀಚಿಗೆ ಏಮ್ಸ್ ವೈದ್ಯರು ನೀಡಿರುವ ವರದಿಯಲ್ಲಿ ಸುಶಾಂತ್ ಸಿಂಗ್ ಕೊಲೆ ಎನ್ನುವುದನ್ನು ತಳ್ಳಿಹಾಕಿದೆ. ಸುಶಾಂತ್ ಸಿಂಗ್ ನೇಣು ಹಾಕಿಕೊಂಡು ನಿಧನಹೊಂದಿರುವುದಾಗಿ ವರದಿ ನೀಡಿದೆ.

  ಸುಶಾಂತ್ ಸಿಂಗ್ ಸ್ನೇಹಿತನಿಗೆ ಪ್ರಾಣ ಬೆದರಿಕೆ: ಹುಡುಗಿಯೊಬ್ಬಳು ರಹಸ್ಯವಾಗಿ ಭೇಟಿಯಾಗಿ ಹೇಳಿದ್ದೇನು?

  ಭಾರತೀಯ ಜನತಾ ಪಕ್ಷದ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಮೊದಲಿನಿಂದಲೂ ಸುಶಾಂತ್ ಪ್ರಕರಣದ ಬಗ್ಗೆ ಪ್ರಶ್ನೆ ಮಾಡುತ್ತಲೇ ಬಂದಿದ್ದಾರೆ. ಇದೀಗ ಸುಬ್ರಮಣಿಯನ್ ಸ್ವಾಮಿ ಪೊಲೀಸರ ಮುಂದೆ ಮತ್ತೊಂದು ಪ್ರಶ್ನೆ ಇಟ್ಟಿದ್ದಾರೆ. ಸುಶಾಂತ್ ಸಿಂಗ್ ನಿಧನಹೊಂದಿದ ದಿನದ ಬೆಳಗ್ಗೆ ಕಿತ್ತಾಳೆ ಜ್ಯೂಸ್ ಕುಡಿದ ಗ್ಲಾಸ್ ಅನ್ನು ಪೊಲೀಸರು ಯಾಕೆ ಸಂಗ್ರಹಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

  ಅಲ್ಲದೆ 'ಸುಶಾಂತ್ ಸಿಂಗ್ ನಿಧನದ ಬಳಿಕ ಮುಂಬೈ ಪೊಲೀಸರು ಅಪಾರ್ಟ್ಮೆಂಟ್ ಯಾಕೆ ಸೀಲ್ ಮಾಡಿಲ್ಲ' ಎಂದು ಕೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ 'ಬೆಳಗ್ಗೆ ಆರೆಂಜ್ ಜ್ಯೂಸ್. ಹಾಗಾದರೆ ಸುಶಾಂತ್ ಆರೆಂಜ್ ಜ್ಯೂಸ್ ಕುಡಿದ ಗ್ಲಾಸ್ ಅನ್ನು ಯಾಕೆ ಸಂಗ್ರಹಿಸಿಲ್ಲ. ಮುಂಬೈ ಪೊಲೀಸರು ಸುಶಾಂತ್ ವಾಸವಾಗಿದ್ದ ಅಪಾರ್ಟ್ಮೆಂಟ್ ಅನ್ನು ಯಾಕೆ ಸೀಲ್ ಮಾಡಿಲ್ಲ. ಇಂಥ ಅಸಹಜ ಸಾವಿನ ಪ್ರಕಣದಲ್ಲಿ ಪೊಲೀಸರು ಅದನ್ನು ಕಡ್ಡಾಯವಾಗಿ ಮಾಡಬೇಕಿತ್ತು' ಎಂದು ಟ್ವೀಟ್ ಮಾಡಿದ್ದಾರೆ.

  ಇದು Darshan ಪತ್ನಿ ಮಾಡಿದ ಸಾಧನೆ | Filmibeat Kannada

  ಸುಶಾಂತ್ ಸಿಂಗ್ ಸಾವಿನ ಬಗ್ಗೆ ಏಮ್ಸ್ ನೀಡಿದ ವರದಿ ಬಗ್ಗೆ ಸುಶಾಂತ್ ಸಿಂಗ್ ತಂದೆಯ ಪರ ವಕೀಲರಾದ ವಿಕಾಸ್ ಸಿಂಗ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನದಲ್ಲಿದ್ದರು. ಇದೀಗ ಜಾಮೀನು ಪಡೆದು ಹೊರ ಬಂದಿದ್ದಾರೆ.

  English summary
  Sushant Singh Case: BJP's Swamy asks Why was the glass from which actor drank juice not preserved.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X