For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಕೇಸ್: ದಾವೂದ್ ಇಬ್ರಾಹಿಂ ಬೆಂಬಲಿಗನನ್ನು ಬಂಧಿಸಿದ ಎನ್‌ಸಿಬಿ

  |

  ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಆಯಾಮದಲ್ಲಿ ತನಿಖೆ ಮಾಡುತ್ತಿರುವ ಎನ್‌ಸಿಬಿ ಪೊಲೀಸರು ಪೆಡ್ಲರ್ ಹರೀಶ್ ಖಾನ್‌ರನ್ನು ಬಂಧಿಸಿದೆ.

  ಮುಂಬೈನ ಬಾಂದ್ರಾ, ಅಂಧೇರಿ ಸೇರಿದಂತೆ ಇತರೆ ಪ್ರದೇಶಗಳಲ್ಲಿ ವ್ಯವಸ್ಥಿತ ದಾಳಿ ನಡೆಸಿದ್ದ ಎನ್‌ಸಿಬಿ ಪೊಲೀಸರಿಗೆ ಹರೀಶ್ ಖಾನ್ ಸಿಕ್ಕಿಬಿದ್ದಿದ್ದಾನೆ. ಸುಶಾಂತ್ ಸಾವಿನ ಪ್ರಕರಣದಲ್ಲಿ ಈತನಿಗೂ ಸಂಬಂಧ ಇದೆ ಎಂದು ಶಂಕಿಸಲಾಗಿದೆ.

  ಸುಶಾಂತ್ ಸಿಂಗ್‌ ರಜಪೂತ್ ಮನೆಗೆಲಸದವರಿಗೆ ಎನ್‌ಸಿಬಿ ನೊಟೀಸ್ಸುಶಾಂತ್ ಸಿಂಗ್‌ ರಜಪೂತ್ ಮನೆಗೆಲಸದವರಿಗೆ ಎನ್‌ಸಿಬಿ ನೊಟೀಸ್

  ಹರೀಶ್‌ ಖಾನ್‌ಗೆ ಚಿಂಕು ಪಠಾಣ್ ಜೊತೆ ಸಂಬಂಧವಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಚಿಂಕು ಪಠಾಣೆ ಹೆಸರು ಈಗಾಗಲೇ ಸುಶಾಂತ್ ಸಾವಿನ ಪ್ರಕರಣದಲ್ಲಿ ಕೇಳಿ ಬಂದಿದೆ. ಹಾಗಾಗಿ, ಹರೀಶ್‌ ಖಾನ್‌ಗೂ ನಂಟು ಇರಬಹುದು ಎಂಬ ಅನುಮಾನ ಉಂಟಾಗಿದೆ.

  ಬಂಧಿತ ಹರೀಶ್ ಖಾನ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬೆಂಬಲಿಗ ಎಂದು ವರದಿಯಾಗಿದೆ.

  ಮೇ 26 ರಂದು ಹೈದರಾಬಾದ್‌ನಲ್ಲಿ ಸುಶಾಂತ್ ಸಿಂಗ್ ಸ್ನೇಹಿತ ಸಿದ್ಧಾರ್ಥ್ ಪಿಥಾಣಿಯನ್ನು ಅರೆಸ್ಟ್ ಮಾಡಿ ಎನ್‌ಸಿಬಿ ವಶಕ್ಕೆ ಪಡೆದಿದ್ದರು. ಅದಾದ ಬಳಿಕ ಸುಶಾಂತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಸಮನ್ಸ್ ನೀಡಲಾಗಿತ್ತು.

  ಸುಶಾಂತ್ ಸಿಂಗ್ ಫ್ಲ್ಯಾಟ್ ಸ್ನೇಹಿತ ಸಿದ್ಧಾರ್ಥ್ ಬಂಧಿಸಿದ ಎನ್‌ಸಿಬಿ ಸುಶಾಂತ್ ಸಿಂಗ್ ಫ್ಲ್ಯಾಟ್ ಸ್ನೇಹಿತ ಸಿದ್ಧಾರ್ಥ್ ಬಂಧಿಸಿದ ಎನ್‌ಸಿಬಿ

  ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ, ಶೌವಿಕ್ ಚಕ್ರವರ್ತಿ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ನಂತರ ಜಾಮೀನು ಪಡೆದು ಹೊರಬಂದಿದ್ದರು. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ಸಂಜಯ್ ಲೀಲಾ ಬನ್ಸಾಲಿ, ಮಹೇಶ್ ಭಟ್, ಅರ್ಜುನ್ ರಾಂಪಾಲ್ ಸೇರಿದಂತೆ ಹಲವರನ್ನು ತನಿಖೆಗೆ ಒಳಪಡಿಸಲಾಗಿತ್ತು.

  Sonu Sood ಈಗ ಕೆಲವರ ಪಾಲಿನ ದೇವರು | Filmibeat Kannada

  ಜೂನ್ 14, 2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ್ದರು. ಸದ್ಯ, ಸಿಬಿಐ ಅಧಿಕಾರಿಗಳು ಈ ಕೇಸ್ ತನಿಖೆ ಮಾಡುತ್ತಿದ್ದಾರೆ.

  English summary
  NCB arrested one Harish Khan, a drug peddler in Bandra in the drugs case linked to late Bollywood actor Sushant Singh Rajput.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X