ಸುಶಾಂತ್ ಸಿಂಗ್ ಅಗಲಿ 2 ವರ್ಷ: ಟ್ರೆಂಡಿಂಗ್‌ನಲ್ಲಿ ಬಾಯ್‌ಕಾಟ್ ಬಾಲಿವುಡ್!

ಹಿಂದಿ ಚಿತ್ರರಂಗದ ಸ್ಫುರದ್ರೂಪಿ ನಟ. ಸುಶಾಂತ್ ಸಿಂಗ್ ಕಿರುತೆರೆಯಿಂದ ಬಾಲಿವುಡ್ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟು ಸಹಸ್ರಾರು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಬಾಲಿವುಡ್‌ನಲ್ಲಿ ಅತ್ಯಂತ ಸ್ಫುರದ್ರೂಪಿ ನಟರಲ್ಲಿ ಒಬ್ಬರಾಗಿದ್ದರು. ಆದರೆ ಇಹಲೋಕ ತ್ಯಜಿಸಿ ಕೇವಲ ನೆನಪಾಗಿ ಉಳಿಸಿದ್ದರೆ ಸುಶಾಂತ್ ಸಿಂಗ್.

ಸುಶಾಂತ್ ಸಿಂಗ್ ರಜಪೂತ್ ಅಗಲಿ ಇಂದಿಗೆ ಎರಡು ವರ್ಷ ಕಳೆದಿದೆ. 2020 ಜೂನ್ 14ರಂದು ನಟ ಸುಶಾಂತ್ ಸಿಂಗ್ ಕೊನೆಯುಸಿರೆಳೆದಿದ್ದಾರೆ. ಸುಶಾಂತ್ ಸಿಂಗ್ ಈ ಪುಣ್ಯ ಸ್ಮರಣೆಯ ದಿನವನ್ನು ಅಭಿಮಾನಿಗಳು ಕಹಿ ನೆನಪಿನಿಂದಲೇ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಸಿಂಗ್ ಬಗ್ಗೆ ಸಾಕಷ್ಟು ಪೋಸ್ಟ್‌ಗಳನ್ನು ಹಂಚಿಕೊಂಡು, ತಮ್ಮ ನೆಚ್ಚಿನ ನಟನನ್ನು ನೆನಪಿಸಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಅಭಿಮಾನಿಗಳ ಸಂತಾಪದ ಜೊತೆಗೆ ಆಕ್ರೋಶವೂ ಮತ್ತೊಮ್ಮೆ ಭುಗಿಲೆದ್ದಿದೆ.

ಸುಶಾಂತ್ ಸಿಂಗ್ 2ನೇ ಪುಣ್ಯ ಸ್ಮರಣೆ!

ಸುಶಾಂತ್ ಸಿಂಗ್ 2ನೇ ಪುಣ್ಯ ಸ್ಮರಣೆ!

ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಪತ್ತೆ ಆಗಿದ್ದರು. ಹಾಗಾಗಿ ಸುಶಾಂತ್ ಸಿಂಗ್ ಸಾವು ನ್ಯಾಯವಾದುದಲ್ಲ. ಇದು ಅಸಹಜ ಸಾವು ಎಂದು ಹಲವರು ಹೋರಾಟಕ್ಕಿಳಿದಿದ್ದರು. ಅದೇನೆ ಇದ್ರೂ, ಒಬ್ಬರ ಅದ್ಭುತ ಕಲಾವಿದ, ಸ್ಟಾರ್‌ನನ್ನು ಎಲ್ಲರೂ ಕಳೆದುಕೊಂಡಿದ್ದಾರೆ. ಇನ್ನು ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಒಂದು ತಿಂಗಳುಗಳ ಕಾಲ ಜೈಲು ವಾಸದಲ್ಲಿದ್ದರು.

ಸುಶಾಂತ್ ಸಿಂಗ್ ನಿಗೂಢ ಸಾವು!

ಸುಶಾಂತ್ ಸಿಂಗ್ ನಿಗೂಢ ಸಾವು!

ಜೂನ್ 14, 2020ರಂದು 34 ವರ್ಷ ವಯಸ್ಸಿನ ಸುಶಾಂತ್, ತಮ್ಮ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಿಆರ್‌ಪಿಸಿ ಸೆಕ್ಷನ್ ಅಡಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು ಸ್ಥಳೀಯ ಪೊಲೀಸರು. ಬಳಿಕ ಈ ಪ್ರಕರಣ ನಂತರ ಸಿಬಿಐ ತನಿಖೆಗೆ ವರ್ಗಾಯಿಸಲಾಯಿತು. ಆದರೆ, ಸಿಂಗ್ ಸಾವಿಗೆ ಸೂಕ್ತ ನ್ಯಾಯ ಸಿಗಬೇಕು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ಪೋಸ್ಟ್‌ ಹಾಕುತ್ತಲೇ ಇರುತ್ತಾರೆ.

ಬಾಯ್‌ಕಾಟ್ ಬಾಲಿವುಡ್ ಟ್ರೆಂಡಿಂಗ್!

ಬಾಯ್‌ಕಾಟ್ ಬಾಲಿವುಡ್ ಟ್ರೆಂಡಿಂಗ್!

ಇನ್ನು ಸಾಕಷ್ಟು ಅಭಿಮಾನಿಗಳು ಸುಶಾಂತ್ ಸಿಂಗ್ ಸಾವಿಗೆ, ಬಾಲಿವುಡ್‌ನಲ್ಲಿ ಇರುವ ನೆಪೊಟಿಸಮ್ ಕಾರಣ ಎಂದು ಹೇಳುತ್ತಿದ್ದಾರೆ. ಬಾಲಿವುಡ್‌ನಲ್ಲಿ ಸ್ವತಂತ್ರವಾಗಿ ಒಬ್ಬ ನಟನನ್ನು ಬೆಳೆಯಲು ಬಿಡುವುದಿಲ್ಲ. ನೆಪೋಟಿಸಂ, ಅಂದರೆ ಕೌಟುಂಬಿಕ ಹಿನ್ನೆಲೆ ಇರೋರಿಗೆ ಮಾತ್ರ ಆದ್ಯತೆ ಹೆಚ್ಚು. ಹಾಗಾಗಿ ಸುಶಾಂತ್ ಅಂತಹ ನಟರನ್ನು ಟಾರ್ಗೆಟ್ ಮಾಡಲಾಗುತ್ತದೆ ಎಂದು ಹಲವು ಕಿಡಿ ಕಾರಿದ್ದಾರೆ. ಹಾಗಾಗಿ ಮತ್ತೆ ಬಾಯ್‌ಕಾಟ್ ಬಾಲಿವುಡ್ ಟ್ರೆಂಡಿಂಗ್‌ನಲ್ಲಿ ಇದೆ.

ಪ್ರೇಕ್ಷಕರ ಅಚ್ಚು ಮೆಚ್ಚಿನ ನಟ ಆಗಿದ್ದ ಸುಶಾಂತ್ ಸಿಂಗ್!

ಪ್ರೇಕ್ಷಕರ ಅಚ್ಚು ಮೆಚ್ಚಿನ ನಟ ಆಗಿದ್ದ ಸುಶಾಂತ್ ಸಿಂಗ್!

34 ವರ್ಷ ವಯಸ್ಸಿಗೆ ಆತ್ಮಹತ್ಯೆಗೆ ಶರಣಾಗಿರುವ ಸುಶಾಂತ್ ಕಿರುತೆರೆಯಲ್ಲಿ ಮಿಂಚಿ ನಂತರ ಬಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಿದವರು. ಪವಿತ್ರಾ ರಿಶ್ತಾ ಸೀರಿಯಲ್‌ನಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡು ಮನೆ ಮಾತಾಗಿದ್ದರು. ಮೊದಲಿಗೆ ಅಭಿಷೇಕ್ ಕಪೂರ್ ನಿರ್ದೇಶಕ 'ಕಾಯ್ ಪೋ ಚೇ' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚೇತನ್ ಭಗತ್ ಕಾದಂಬರಿ 'ದಿ ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್' ಆಧಾರಿತ ಚಿತ್ರ ಇದಾಗಿತ್ತು. 'ಝಲಕ್ ದಿಕ್ಲಾ ಜಾ ಡ್ಯಾನ್ಸ್' ರಿಯಾಲಿಟಿ ಶೋನಲ್ಲೂ ಮಿಂಚಿದ್ದ ಸುಶಾಂತ್ ತಮ್ಮದೇ ಅಭಿಮಾನಿ ವರ್ಗ ಹೊಂದಿದ್ದರು.

More from Filmibeat

English summary
Sushant Singh Death 2nd Anniversary: Boycott Bollywood Is Trending Again, KNow More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X