ಸುಶಾಂತ್ ಸಿಂಗ್ ಪುಣ್ಯತಿಥಿ; 'ಕಾಯ್ ಪೋ ಚೆ'ಯಿಂದ 'ದಿಲ್ ಬೇಚಾರ'ವರೆಗಿನ ಸುಶಾಂತ್ ಸಿನಿ ಪಯಣ
ಬಾಲಿವುಡ್ ನ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ನಿಧನಹೊಂದಿ ಇವತ್ತಿಗೆ ಸರಿಯಾಗಿ ಒಂದು ವರ್ಷ. 2020 ಜೂನ್ 14 ಭಾರತೀಯ ಸಿನಿಮಾರಂಗದ ಪಾಲಿಗೆ ಕರಾಳ ದಿನ. ಅಪಾರ ಕನಸುಗಳನ್ನು ಕಟ್ಟಿಕೊಂಡು ಬಾಲಿವುಡ್ ಎನ್ನುವ ಮಾಯಾಲೋಕದಲ್ಲಿ ಬದುಕು ಸಾಗಿಸುತ್ತಿದ್ದ ಅದ್ಭುತ ಪ್ರತಿಭೆ ಸುಶಾಂತ್ ಬಾಂದ್ರಾದ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.
ಸುಶಾಂತ್ ಹಠಾತ್ ಸಾವು ಕುಟುಂಬಕ್ಕೆ, ಅಭಿಮಾನಿಗಳಿಗೆ ಭಾರತೀಯ ಸಿನಿಮಾರಂಗಕ್ಕೆ ದೊಡ್ಡ ಶಾಕ್ ನೀಡಿತ್ತು. ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಅನುಮಾನಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಒಂದು ವರ್ಷವಾದರೂ ಸುಶಾಂತ್ ಸಾವಿನ ಹಿಂದಿನ ರಹಸ್ಯದ ಕಾರಣ ಬಹಿರಂಗವಾಗಿಲ್ಲ.
ಸಿಬಿಐ ತನಿಖೆ ನಡೆಸುತ್ತಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮಾಡುತ್ತಿದೆ. ಇಂದು ಸುಶಾಂತ್ ಸಿಂಗ್ ಪಣ್ಯತಿಥಿ, ಅಭಿಮಾನಿಗಳು, ಕುಟುಂಬದವರು ಸ್ನೇಹಿತರು ಸುಶಾಂತ್ ನೆನಪಿಸಿಕೊಳ್ಳುತ್ತಿದ್ದಾರೆ. ಸುಶಾಂತ್ ಫೋಟೋ ಶೇರ್ ಮಾಡಿ ಭಾವುಕರಾಗಿದ್ದಾರೆ.

ಕಿರುತೆರೆ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭ ಮಾಡಿದ ಬಿಹಾರ್ ಮೂಲದ ಸುಶಾಂತ್ ಸಿಂಗ್ ಬಳಿಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. 2013ರಲ್ಲಿ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಸುಶಾಂತ್ 'ಕಾಯ್ ಪೋ ಚೆ' ಸಿನಿಮಾ ಮೂಲಕ ಮೊದಲ ಬಾರಿಗೆ ಬೆಳ್ಳಿಪರದೆ ಮೇಲೆ ಮಿಂಚಿದರು. ಆದರೆ ಈ ಸಿನಿಮಾ ಹೇಳುವಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ.
2014ರಲ್ಲಿ ಬಿಡುಗಡೆಯಾದ ಆಮೀರ್ ಖಾನ್ ನಟನೆಯ ಸೂಪರ್ ಹಿಟ್ ಪಿಕೆ ಸಿನಿಮಾದಲ್ಲಿ ಸುಶಾಂತ್ ನಟಿಸಿದ್ದರು. ಈ ಸಿನಿಮಾ ಬಳಿಕ ಬಾಲಿವುಡ್ ನಲ್ಲಿ ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದರು. ಬಳಿಕ 2016ರಲ್ಲಿ ಬಿಡುಗಡೆಯಾದ ಎಂ.ಎಸ್ ಧೋನಿ; ಅನ್ ಟೋಲ್ಡ್ ಸ್ಟೋರಿ ಚಿತ್ರ ಸುಶಾಂತ್ ವೃತ್ತಿ ಜೀವನವನ್ನೇ ಬದಲಾಯಿಸಿತು.
ಧೋನಿ ಸಿನಿಮಾದ ಸಕ್ಸಸ್ ಸುಶಾಂತ್ ನನ್ನು ಸ್ಟಾರ್ ಆಗಿ ಮಾಡಿತ್ತು. ಕ್ರಿಕೆಟಿಗ ಎಂ.ಎಸ್ ಧೋನಿ ಜೀವನಾಧಾರಿತ ಚಿತ್ರದಲ್ಲಿ ಸುಶಾಂತ್ ಅದ್ಭುತವಾಗಿ ನಟಿಸಿದ್ದರು. ಸುಶಾಂತ್ ಅಭಿನಯಕ್ಕೆ ಫಿದಾ ಆಗದವರೇ ಇರಿಲಿಲ್ಲ. ಈ ಸಿನಿಮಾ ಸಾಲು ಸಾಲು ಸಿನಿಮಾಗಳಲ್ಲಿ ಸುಶಾಂತ್ ಬ್ಯುಸಿಯಾದರು. ರಾಬ್ತ, ಕೇದಾರನಾಥ್, ಚಿಚೋರೆ, ದಿಲ್ ಬೆೇಚಾರ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ.
Recommended Video
ಸುಶಾಂತ್ ನಟಿಸಿದ್ದು ಕಡಿಮೆ ಸಿನಿಮಾಗಳಾದರೂ ಅದ್ಭುತ ಚಿತ್ರಗಳನ್ನು ನೀಡಿದ್ದಾರೆ. ಕೊನೆಯದಾಗಿ ಸುಶಾಂತ್ ದಿಲ್ ಬೇಚಾರ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಸುಶಾಂತ್ ನಿಧನದ ಬಳಿಕ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಟಿಟಿಯಲ್ಲಿ ಬಿಡುಗಡೆಯಾದ ಈ ಸಿನಿಮಾ ಅತೀ ಹೆಚ್ಚು ವೀಕ್ಷಣೆ ಪಡೆದು ದಾಖಲೆ ನಿರ್ಮಿಸಿತ್ತು.


Click it and Unblock the Notifications











