ಸುಶಾಂತ್ ಸಿಂಗ್ ಪ್ರಕರಣ: ಪರಾರಿಯಾಗಿದ್ದ ನೆರೆಮನೆಯವನ ಬಂಧನ

ನಟ ಸುಶಾಂತ್ ಸಿಂಗ್ ನಿಧನ ಹೊಂದಿ ಎರಡು ವರ್ಷಗಳಾಗುತ್ತಾ ಬಂದಿದ್ದು ಈಗಲೂ ನಟನ ಸಾವಿನ ಕುರಿತು ತನಿಖೆ ಜಾರಿಯಲ್ಲಿದೆ.

ಸುಶಾಂತ್ ಪ್ರಕರಣದಿಂದಾಗಿ ಹೊರಬಂದ ಡ್ರಗ್ಸ್‌ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಸಾಹಿಲ್ ಎಂಬಾತನನ್ನು ಎನ್‌ಸಿಬಿಯು ಇಂದು ಬಂಧಿಸಿದೆ. ಸಾಹಿತ್, ಸುಶಾಂತ್ ಸಿಂಗ್ ರಜಪೂತ್‌ರ ನೆರೆ ಮನೆಯವನೇ ಆಗಿದ್ದ ಎನ್ನಲಾಗಿದೆ.

ಸುಶಾಂತ್ ಸಿಂಗ್ ಪ್ರಕರಣದಲ್ಲಿ ಸಾಹಿಲ್ ಹೆಸರು ಈ ಮೊದಲು ಕೇಳಿ ಬಂದಿತ್ತು. 2021 ರಲ್ಲಿ ತನ್ನ ಹೆಸರು ಪ್ರಕರಣದಲ್ಲಿ ಹೊರಗೆ ಬರುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗೆ ಸಾಹಿಲ್ ಅರ್ಜಿ ಹಾಕಿದ್ದ, ಆದರೆ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ರದ್ದು ಮಾಡಿತು. ಬಂಧನದಿಂದ ತಪ್ಪಿಸಿಕೊಳ್ಳಲು ಸಾಹಿಲ್ ದುಬೈಗೆ ಪರಾರಿಯಾಗಿದ್ದ.

Sushant Singh Death Case: Accused Sahil Arrested By NCB Today
ಇದೀಗ ಒಂಬತ್ತು ತಿಂಗಳ ಬಳಿಕ ಮತ್ತೆ ಮುಂಬೈಗೆ ಸಾಹಿಲ್ ಬಂದಿದ್ದ ಆತನನ್ನು ಎನ್‌ಸಿಬಿ ಬಂಧಿಸಿದೆ. ಸಾಹಿಲ್ ಅನ್ನು ಕಳೆದ ವರ್ಷ ಸೀಜ್ ಮಾಡಲಾದ ಗಾಂಜಾ ಪ್ರಕರಣ ಹಾಗೂ ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಎನ್‌ಸಿಬಿ, ಸಿಬಿಐ ಹಾಗೂ ಮುಂಬೈ ಪೊಲೀಸ್ ವಿಚಾರಣೆ ನಡೆಸಲಿದೆ.

ಸಾಹಿಲ್‌ ಈ ಮೊದಲು ಕರಣ್ ಅರೋರ ಹಾಗೂ ಅಬ್ಬಾಸ್ ಲಖಾನಿಗೆ ಡ್ರಗ್ಸ್ ಮಾರಾಟ ಮಾಡಿದ್ದ. ಅವರಿಬ್ಬರು ಸುಶಾಂತ್ ಸಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಅದೇ ಪ್ರಕರಣದಲ್ಲಿ ಸಾಹಿಲ್‌ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಎನ್‌ಸಿಬಿಯ ಆಗಿನ ಅಧಿಕಾರಿ ಸಮೀರ್ ವಾಂಖೆಡೆ ಹೇಳಿದ್ದರು. ಆಗ ಸಾಹಿಲ್ ಬಂಧನಕ್ಕೆ ಹೆದರಿ ದುಬೈಗೆ ಪರಾರಿಯಾಗಿದ್ದ.

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಬಾಲಿವುಡ್‌ನ ಹಲವರಿಗೆ ಕಂಟಕ ತಂದೊಡ್ಡಿತು. ಬಾಲಿವುಡ್‌ ಬಗ್ಗೆ ಸಿನಿಮಾ ಪ್ರೇಕ್ಷಕರಿಗಿದ್ದ ಭ್ರಮೆಗಳನ್ನು ಕೆಡವಿಬಿಟ್ಟಿತ್ತು. ಸುಶಾಂತ್ ಪ್ರಕರಣದ ತನಿಖೆಯ ವೇಳೆ ಹಲವರನ್ನು ಎನ್‌ಸಿಬಿ ಬಂಧಿಸಿತು. ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ಮಹೇಶ್ ಭಟ್ ಸೇರಿದಂತೆ ಹಲವು ಘಟಾನುಘಟಿ ಬಾಲಿವುಡ್ಡಿಗರನ್ನು ತನಿಖೆಗೆ ಒಳಪಡಿಸಿತು.

2020 ರ ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ತಮ್ಮ ನಿವಾಸದಲ್ಲಿ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದ್ದರು. ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯೋ ಕೊಲೆಯೊ ಎಂಬ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆದವು. ಬಿಹಾರ ಚುನಾವಣೆ ವಿಷಯದಲ್ಲಿಯೂ ಸುಶಾಂತ್ ಸಿಂಗ್ ಸಾವು ಚರ್ಚೆಯ ವಿಷಯವಾಗಿತ್ತು.

ಸುಶಾಂತ್ ಸಾವಿನ ಬಳಿಕ ಹೊರಬಿದ್ದ ಡ್ರಗ್ಸ್ ಪ್ರಕರಣದಲ್ಲಿ ಸುಶಾಂತ್‌ರ ಪ್ರೇಯಸಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್, ಸುಶಾಂತ್‌ರ ಮ್ಯಾನೇಜರ್ ಸೇರಿದಂತೆ ಹಲವರ ಬಂಧನ ಆಗಿತ್ತು. ರಿಯಾ ಚಕ್ರವರ್ತಿ ಒಂದು ತಿಂಗಳು ಜೈಲಿನಲ್ಲಿದ್ದರೆ, ಶೋವಿಕ್ ಸತತ ಮೂರು ತಿಂಗಳು ಜೈಲಿನಲ್ಲಿರಬೇಕಾಗಿತ್ತು.

More from Filmibeat

English summary
Sushanth Singh death case: NCB arrest Sahil today. He was absconding from last 9 months. He was Sushanth's nighbor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X