twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಪ್ರಕರಣ: ಮುಂಬೈ ಪೊಲೀಸರನ್ನು ಟ್ರೋಲ್ ಮಾಡಿದವರ ವಿರುದ್ಧ FIR

    |

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆಯಲ್ಲ ಆತ್ಮಹತ್ಯೆ ಎಂದು ಎಂದು ಏಮ್ಸ್ ವೈದ್ಯರು ಸಿಬಿಐಗೆ ವರದಿ ನೀಡಿದೆ. ಏಮ್ಸ್ ವರದಿ ಬಳಿಕ ಮಾತನಾಡಿದ ಮುಂಬೈ ಪೊಲೀಸ್ ಆಯುಕ್ತರು, ಮುಂಬೈ ಪೊಲೀಸರ ವಿರುದ್ಧ ಟ್ರೋಲ್ ಮಾಡಿದ ಹಲವಾರು ಸಾಮಾಜಿಕ ಜಾಲತಾಣಗಳ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

    ಹಲವಾರು ಸಾಮಾಜಿಕ ಮಾಧ್ಯಮ ಖಾತೆದಾರರು, ಟ್ವಿಟ್ಟರ್, ಇನ್ಸ್ಟಾಗ್ರಾಮ್, ಫೇಸ್ ಬುಕ್ ಸೇರಿದಂತೆ ವಿವಿಧ ಪ್ಲಾಟ್ ಫಾರ್ಮ್ ಗಳಲ್ಲಿ ಮುಂಬೈ ಪೊಲೀಸರನ್ನು ಟ್ರೋಲ್ ಮಾಡಲಾಗುತ್ತಿದೆ. ಅಲ್ಲದೆ ಆಯುಕ್ತರನ್ನು ಕೆಳಮಟ್ಟದ ಪದಗಳನ್ನು ಬಳಸಿ ನಿಂದನೆ ಮಾಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಐಟಿ ಕಾಯ್ದೆಯಡಿ ಅವರ ವಿರುದ್ಧ ಅಧಿಕೃತ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

    ಸುಶಾಂತ್ ಸಾವು, ಡ್ರಗ್ಸ್ ತನಿಖೆ ಕುರಿತು ಅಕ್ಷಯ್ ಕುಮಾರ್ ಮೊದಲ ಸಲ ಪ್ರತಿಕ್ರಿಯೆಸುಶಾಂತ್ ಸಾವು, ಡ್ರಗ್ಸ್ ತನಿಖೆ ಕುರಿತು ಅಕ್ಷಯ್ ಕುಮಾರ್ ಮೊದಲ ಸಲ ಪ್ರತಿಕ್ರಿಯೆ

    ಸುಮಾರು 80 ಸಾವಿರಕ್ಕೂ ಅಧಿಕ ನಕಲಿ ಕಾತೆಗಳು ಸೃಷ್ಟಿಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇತ್ತೀಚಿಗೆ ಮುಂಬೈ ಪೊಲೀಸರ ಮಾರ್ಫಡ್ ಇಮೇಜ್ ಬಳಸಿ ಟ್ರೋಲ್ ಮಾಡಲಾಗಿದೆ. ಆ ಖಾತೆಯ ವಿರುದ್ಧ ಮತ್ತೊಂದು ಎಫ್ ಐ ಆರ್ ದಾಖಲಿಸಲಾಗಿದೆ ಎಂದಿದ್ದಾರೆ.

    Sushant Singh Death Case: FIR Registered Against Fake Social Media Accounts For trolling Mumbai Police Commissioner

    ಇನ್ನು ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆ ಎನ್ನುವುದು ಮೊದಲೇ ಗೊತ್ತಿತ್ತು, ಗೊತ್ತಿರುವ ವಿಷಯವನ್ನೇ ವೈದ್ಯರು ಖಚಿತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಸುಶಾಂತ್ ಸಿಂಗ್ ಜೂನ್ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ಮುಂಬೈ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ನಂತರ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು.

    Recommended Video

    ಅಭಿಮಾನಿಗಳು ಕಳುಹಿಸಿದ ಮೇಘನಾ ರಾಜ್ ಫೋಟೋಗೆ ಜೀವ ಕೊಟ್ಟ ಕರಣ್ | Filmibeat Kannada

    ಇದೀಗ ಸಿಬಿಐ ಜೊತೆಗೆ ಮಾದಕ ವಸ್ತು ನಿಯಂತ್ರಣ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಯುತ್ತಿದೆ. ಸುಶಾಂತ್ ಸಿಂಗ್ ಸಾವಿನ ಕುರಿತಾಗಿ ಸಾಕಷ್ಟು ಊಹಾಪೋಹಗಳು ಎದ್ದಿವೆ. ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲ ಕೊಲೆ ಎನ್ನುವ ಅನುಮಾನ ವ್ಯಕ್ತವಾಗಿತ್ತು. ಆದರೆ ಏಮ್ಸ್ ವೈದ್ಯರ ತಂಡ ಆತ್ಮಹತ್ಯೆ ಎಂದು ವರದಿ ನೀಡಿದೆ.

    English summary
    FIR registered Against fake social media users for trolling Mumbai police commissioner in Sushant Singh death case.
    Tuesday, October 6, 2020, 9:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X