twitter
    For Quick Alerts
    ALLOW NOTIFICATIONS  
    For Daily Alerts

    'ಸುಶಾಂತ್ ಸಾವಿಗೆ ಕಾರಣರಾದ ಕರಣ್, ಯಶ್ ರಾಜ್, ಸಲ್ಮಾನ್ ಖಾನ್ ಚಿತ್ರಗಳನ್ನು ಬಹಿಷ್ಕರಿಸಿ'

    |

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಬಾಲಿವುಡ್‌ಅನ್ನು ತಮ್ಮ ಕಪಿಮುಷ್ಟಿಯಲ್ಲಿ ಇರಿಸಿಕೊಂಡಿರುವ ಕುಟುಂಬಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸುಶಾಂತ್ ಅವರಂತಹ ಪ್ರತಿಭಾವಂತ ನಟನನ್ನು ಬಲಿತೆಗೆದುಕೊಳ್ಳಲು ಬಾಲಿವುಡ್‌ನ ಈ ಕುಟುಂಬಗಳು ಮತ್ತು ಅವರ ದುರ್ವರ್ತನೆಯೇ ಕಾರಣ ಎಂಬ ಆರೋಪ ಕೇಳಿಬರುತ್ತಿದೆ.

    Recommended Video

    ಸುಶಾಂತ್ ಸಾವಿನ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಮಾಜಿ ಗೆಳತಿ | Kriti Sanon Emotional Post | Sushanth singh

    ಸುಶಾಂತ್ ಅವರನ್ನು ಬಹಿರಂಗವಾಗಿ ಅವಮಾನಿಸಿದ್ದ, ಅವರೊಬ್ಬ ಪ್ರತಿಭಾನ್ವಿತ ನಟ ಹಾಗೂ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಎನ್ನುವುದು ತಿಳಿದಿದ್ದರೂ ಅವರಿಗೆ ಅವಕಾಶ ನೀಡುವುದಾಗಿ ಹೇಳಿ ಅದನ್ನು ಕಿತ್ತುಕೊಂಡಿದ್ದ ನಿರ್ಮಾಣ ಸಂಸ್ಥೆಗಳ ವಿರುದ್ಧ ಅನೇಕರು ಸಿಡಿದೆದ್ದಿದ್ದಾರೆ. ಅದಕ್ಕಾಗಿ ಕರಣ್ ಜೋಹರ್, ಯಶ್ ರಾಜ್ ಫಿಲಂಸ್ ಮತ್ತು ಸಲ್ಮಾನ್ ಖಾನ್ ಅವರನ್ನು ಬಹಿಷ್ಕರಿಸುವಂತೆ ಸಹಿ ಸಂಗ್ರಹ ಆಂದೋಲನ ಆರಂಭಿಸಲಾಗಿದೆ. ಜಯಶ್ರೀ ಶ್ರೀಕಾಂತ್ ಎಂಬುವವರು ಆರಂಭಿಸಿರುವ ಈ ಆಂದೋಲನದಲ್ಲಿ ಸುಮಾರು ಹತ್ತು ಲಕ್ಷ ಸಹಿಯ ಗುರಿ ಹೊಂದಲಾಗಿದೆ. ಈ ಆಂದೋಲನದ ಅರ್ಜಿಯಲ್ಲಿ ಏನಿದೆ? ಮುಂದೆ ಓದಿ...

    ಮತ್ತೊಂದು ದುರ್ಘಟನೆ ನಡೆಯಬಾರದು

    ಮತ್ತೊಂದು ದುರ್ಘಟನೆ ನಡೆಯಬಾರದು

    ಈ ಅರ್ಜಿಯಿಂದ ನಾವು ಏನನ್ನು ಸಾಧಿಸಲು ಬಯಸಿದ್ದೇವೆ ಎಂದರೆ, ಈ ಮೇಲೆ ಉಲ್ಲೇಖಿಸಿರುವ ನಿರ್ಮಾಣ ಸಂಸ್ಥೆಗಳ ಸಿನಿಮಾಗಳನ್ನು ಪ್ರಚಾರ ಮಾಡದಂತೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಹಾಟ್‌ಸ್ಟಾರ್‌ಗಳಿಗೆ ಮನವಿ ಮಾಡುತ್ತಿದ್ದೇವೆ. ಈ ದುರ್ಘಟನೆ ಮತ್ತೆ ಸಂಭವಿಸುವುದಕ್ಕೆ ನಾವು ಅವಕಾಶ ನೀಡುವಂತಾಗಬಾರದು. ತುಳಿಯುವುದನ್ನು ನಿಲ್ಲಿಸಿ ಮತ್ತು ಪರದಾಡುತ್ತಿರುವ ನಟರಿಗೆ ಸಹಾಯ ಮಾಡಿ.

    ಸುಶಾಂತ್ ಸಿಂಗ್ ಖಿನ್ನತೆ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದ ತಂದೆಸುಶಾಂತ್ ಸಿಂಗ್ ಖಿನ್ನತೆ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದ ತಂದೆ

    ನಟನೆಗಾಗಿ ಓದು ಬಿಟ್ಟಿದ್ದರು

    ನಟನೆಗಾಗಿ ಓದು ಬಿಟ್ಟಿದ್ದರು

    ಸುಶಾಂತ್ ಒಬ್ಬ ಅದ್ಭುತ ವಿದ್ಯಾರ್ಥಿ. ಭೌತಶಾಸ್ತ್ರದ ಒಲಿಂಪಿಯಾಡ್ ವಿನ್ನರ್ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಟಾಪರ್ ಆಗಿದ್ದವರು. ನಟನಾಗುವ ಸಲುವಾಗಿ ಎಂಜಿನಿಯರಿಂಗ್ ಪದವಿಯನ್ನು ತ್ಯಜಿಸಿದರು. 34ನೇ ವಯಸ್ಸಿನಲ್ಲಿ ಅವರ ನಟನೆಯ ಕನಸು ಸತ್ತು ಹೋಯಿತು.

    ಸುಶಾಂತ್ ಸಿಂಗ್‌ಗೆ ಅವಮಾನ ಮಾಡಿದ್ದ ಶಾರುಖ್ ಖಾನ್: ವಿಡಿಯೋ ವೈರಲ್ಸುಶಾಂತ್ ಸಿಂಗ್‌ಗೆ ಅವಮಾನ ಮಾಡಿದ್ದ ಶಾರುಖ್ ಖಾನ್: ವಿಡಿಯೋ ವೈರಲ್

    ಕರಣ್ ಒಬ್ಬ ಮಾನ್‌ಸ್ಟರ್

    ಕರಣ್ ಒಬ್ಬ ಮಾನ್‌ಸ್ಟರ್

    ಕರಣ್ ಜೋಹರ್ ಒಬ್ಬ ಮಾನ್‌ಸ್ಟರ್. ತಾವು ಇಷ್ಟಪಡದವರನ್ನು ನಾಶಪಡಿಸುವ ಕ್ರೂರಿ. ಅವರ ಶೋದಲ್ಲಿ ನೀವು ಗೆಸ್ಟ್ ಆಗಿದ್ದರೆ ಅವರ ಬಾಲಿಶ ಯಾತನಾಮಯ ಕಳಪೆ ಹಾಸ್ಯಗಳಿಗೆ ನಗಬೇಕಾಗುತ್ತದೆ. ಆತನ ದಬ್ಬಾಳಿಕೆಯ ಹಾಸ್ಯಗಳನ್ನು ಸಹಿಸಿಕೊಳ್ಳಬೇಕು. ಇಲ್ಲದಿದ್ದರೆ ಆತ ಕೆಟ್ಟದಾಗಿ ಬೇಟೆಯಾಡುತ್ತಾನೆ.

    ನಾಚಿಕೆಗೇಡಿನ ಸಂಗತಿ

    ನಾಚಿಕೆಗೇಡಿನ ಸಂಗತಿ

    ಕರಣ್, ಯಶ್ ರಾಜ್, ಶಾರುಖ್ ಖಾನ್, ಭನ್ಸಾಲಿ ಮುಂತಾದವರು ಈ ಗ್ಯಾಂಗ್ ಭಾಗ. ಅವರ ಆಶೀರ್ವಾದವಿಲ್ಲದೆ ನೀವು ಬಾಲಿವುಡ್‌ನಲ್ಲಿ ಉಳಿಯಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಎರಡನೇ ಅತಿ ಹೆಚ್ಚು ಸಿನಿಮಾಗಳನ್ನು ನಿರ್ಮಿಸುವ ಭಾರತದ ದೊಡ್ಡ ಸಿನಿಮಾ ಉದ್ಯಮ ಅರ್ಧ ಡಜನ್ ಕುಟುಂಬಗಳಿಂದ ನಿಯಂತ್ರಿಸಲ್ಪಡುತ್ತಿರುವುದು ನಾಚಿಕೆಗೇಡು ಎಂದು ಅರ್ಜಿಯಲ್ಲಿ ಬರೆಯಲಾಗಿದೆ.

    ಪ್ರೀತಿಸಿದವರನ್ನು ದೂರ ತಳ್ಳಬಾರದಿತ್ತು ನೀನು: ಕಣ್ಣೀರು ತರಿಸುವ ಸುಶಾಂತ್ ಮಾಜಿ ಗೆಳತಿಯ ಪತ್ರಪ್ರೀತಿಸಿದವರನ್ನು ದೂರ ತಳ್ಳಬಾರದಿತ್ತು ನೀನು: ಕಣ್ಣೀರು ತರಿಸುವ ಸುಶಾಂತ್ ಮಾಜಿ ಗೆಳತಿಯ ಪತ್ರ

    ಸುಶಾಂತ್ ಶೋಷಣೆ ನಡೆದಿತ್ತು

    ಸುಶಾಂತ್ ಶೋಷಣೆ ನಡೆದಿತ್ತು

    ಇಲ್ಲಿ ಕುಟುಂಬದ ಮಕ್ಕಳ ಹೊರತಾಗಿ ಗುರುತಿಸಿಕೊಳ್ಳಬೇಕೆಂದರೆ ಕೆಲವು ನಿರ್ದಿಷ್ಟ ಸರ್‌ ನೇಮ್‌ಗಳಿರಬೇಕು. ಇಲ್ಲದಿದ್ದರೆ ನಿಮ್ಮನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಹೊರಗಿನವರಾಗಿಯೇ ಇರುತ್ತೀರಿ. ಸುಶಾಂತ್ ಅವರನ್ನು ಹೀನಾಯವಾಗಿ ಟ್ರೋಲ್ ಮಾಡಲಾಗಿತ್ತು, ಶೋಷಿಸಲಾಗಿತ್ತು. ಅವರು ಕರಣ್ ಜೋಹರ್, ಅಲಿಯಾ ಭಟ್, ಕಪೂರ್ ಕುಟುಂಬದ ಮಕ್ಕಳಂತೆ ಶಾಲೆ ಬಿಟ್ಟವರಲ್ಲ. ಬಹಳ ಬುದ್ಧಿವಂತ, ವಿಚಾರವಾದಿ.

    English summary
    Sushant Singh Rajput's death: People have started a sign petition to boycott Karan Johar, Yashraj films, Salman Khan and others against nepotism in bollywood.
    Friday, June 19, 2020, 16:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X