ಕೇವಲ ಅರ್ಧ ಸಂಭಾವನೆ ಪಡೆದು 'ದಿಲ್ ಬೆಚರಾ' ಚಿತ್ರ ಮಾಡಿದ್ದರು ಸುಶಾಂತ್ ಸಿಂಗ್, ಏಕೆ?
ಏಳು ವರ್ಷ, ಹನ್ನೆರಡು ಸಿನಿಮಾ, ಕೆಲವು ಪ್ರಶಸ್ತಿಗಳು.....ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗುವ ಎಲ್ಲ ಭರವಸೆ ಮೂಡಿಸಿದ್ದ ನಟ ಸುಶಾಂತ್ ಸಿಂಗ್ ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದರು. ಸದ್ಯ, ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದು ಸಹಜ ಸಾವು ಅಥವಾ ಕೊಲೆಯೋ ಎಂಬ ಚರ್ಚೆಯ ಮಧ್ಯೆ ಸಿಬಿಐ ತನಿಖೆ ಪ್ರಗತಿಯಲ್ಲಿದೆ.
Recommended Video
ಸುಶಾಂತ್ ಮೃತಪಟ್ಟ ಬಳಿಕ ಅವರ ಕೊನೆಯ ಸಿನಿಮಾ 'ದಿಲ್ ಬೆಚರಾ' ತೆರೆಕಂಡಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು 'ಒಳ್ಳೆಯ ಚಿತ್ರ' ಎಂದರು. ಸುಶಾಂತ್ ಅಭಿನಯದ ಕಂಡು ಮನಸಾರೆ ಮೆಚ್ಚಿಕೊಂಡರು. ಈ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳ ನಂತರ ಮತ್ತೆ ಸುದ್ದಿಯಾಗಿದೆ. ಯಾಕಂದ್ರೆ, ಸುಶಾಂತ್ ಈ ಚಿತ್ರಕ್ಕೆ ಕೇವಲ ಅರ್ಧ ಸಂಭಾವನೆ ಪಡೆದಿದ್ದರು ಎಂಬ ವಿಷಯ ಬಹಿರಂಗವಾಗಿದೆ. ಅರ್ಧ ಸಂಭಾವನೆಗೆ ನಟಿಸಲು ಕಾರಣವೇನು? ಮುಂದೆ ಓದಿ....

ಕೊನೆಯ ಚಿತ್ರಕ್ಕೆ ಸುಶಾಂತ್ ಪಡೆದಿದ್ದು ಅರ್ಧ ಸಂಭಾವನೆ!
ಸುಶಾಂತ್ ಸಿಂಗ್ ರಜಪೂತ್ ಸಾಮಾನ್ಯವಾಗಿ ಒಂದು ಸಿನಿಮಾ 6-8 ಕೋಟಿವರೆಗೂ ಸಂಭಾವನೆ ಪಡೆಯುತ್ತಿದ್ದರು. ಆದರೆ, 'ದಿಲ್ ಬೆಚರಾ' ಚಿತ್ರಕ್ಕೆ ಕೇವಲ 3 ಕೋಟಿ ಸಂಭಾವನೆ ಪಡೆದು ಸಿನಿಮಾ ಮಾಡಿದ್ದರು ಎಂದು ದಿಲ್ ಬೆಚರಾ ಸಿನಿಮಾದ ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲಿ ಸುಶಾಂತ್ ಜೊತೆಯಿದ್ದ ಆಪ್ತ ಸ್ನೇಹಿತರೊಬ್ಬರು ಬಹಿರಂಗಪಡಿಸಿದ್ದಾರೆ. ಈ ಕುರಿತು ಪಿಂಕ್‌ವಿಲ್ಲ ವೆಬ್‌ಸೈಟ್ ವರದಿ ಮಾಡಿದೆ.

ಸ್ನೇಹಕ್ಕಾಗಿ ಈ ನಿರ್ಧಾರ
ಕಾಸ್ಟಿಂಗ್ ನಿರ್ದೇಶಕರಾಗಿದ್ದ ಮುಖೇಶ್ ಚಬ್ರಾ ಅವರು ಚೊಚ್ಚಲ ಸಿನಿಮಾ ದಿಲ್ ಬೆಚರಾ. ಸುಶಾಂತ್ ಅವರಿಗೆ ಆರಂಭಿಕ ದಿನಗಳಲ್ಲಿ ಸಹಾಯ ಮಾಡಿದ್ದ ಮುಖೇಶ್ ಉತ್ತಮ ಸ್ನೇಹಿತರು ಸಹ ಹೌದು. ಹಾಗಾಗಿ, ಮುಖೇಶ್ ಮೊದಲ ಚಿತ್ರದಲ್ಲಿ ನಾನು ನಟಿಸುತ್ತೇನೆ ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಮಾಡಿದ್ದರು ಮತ್ತು ಸಂಭಾವನೆಯನ್ನು ಕಡಿತಗೊಳಿಸಿದ್ದರು ಎಂದು ತಿಳಿದು ಬಂದಿದೆ.

ಕಷ್ಟದಲ್ಲಿದ್ದ ಚಿತ್ರತಂಡ
ಸುಶಾಂತ್ ಸಿಂಗ್ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಾಗ ಚಿತ್ರತಂಡ ಕಷ್ಟದಲ್ಲಿತ್ತು. ನಿರ್ಮಾಪಕ ಸವಾಲುಗಳನ್ನು ಕಣ್ಣಾರೆ ಕಂಡ ಸುಶಾಂತ್ ಸಂಭಾವನೆ ಕಡಿಮೆ ಪಡೆಯಲು ನಿರ್ಧರಿಸಿದ್ದರು. ಈ ಸಿನಿಮಾ ನಿರ್ಮಿಸಿದ್ದ ಫಾಕ್ಸ್ ಸ್ಟಾರ್ ಸ್ಟುಡಿಯೋ ಜೊತೆ ಉತ್ತಮ ಬಾಂಧವ್ಯ ಸಂಪಾದಿಸಿದ್ದರು. ಭವಿಷ್ಯದಲ್ಲೀ ಫಾಕ್ಸ್ ಸ್ಟಾರ್ ಸ್ಟುಡಿಯೋ ಚಿತ್ರಗಳಲ್ಲಿ ನಟಿಸುವ ಬಗ್ಗೆ ಮಾತುಕತೆ ಸಹ ನಡೆದಿತ್ತು ಎಂದು ಸುಶಾಂತ್ ಆಪ್ತ ಮಾಹಿತಿ ನೀಡಿದ್ದಾರೆ.

ಯಶಸ್ಸು ಕಂಡ ದಿಲ್ ಬೆಚರಾ
ಮುಖೇಶ್ ಚಬ್ರಾಗೆ ಇದು ಚೊಚ್ಚಲ ಸಿನಿಮಾ. ಸುಶಾಂತ್ ಸಿಂಗ್ ಜೋಡಿಯಾಗಿ ನಟಿಸಿದ್ದ ಸಂಜನಾ ಸಂಘಿ ಅವರಿಗೂ ಈ ಸಿನಿಮಾ ನೇಮೂ ಫೇಮೂ ತಂದು ಕೊಡ್ತು. ಸುಶಾಂತ್ ಕೊನೆಯ ಚಿತ್ರ ಎಂಬ ಎಮೋಷನ್ ಹಾಗು ಸಿನಿಮಾ ಅದ್ಭುತವಾಗಿ ಮೂಡಿಬಂದಿದ್ದ ಹಿನ್ನೆಲೆ ಹಲವು ದಾಖಲೆಗಳನ್ನು ಸಹ ಮಾಡಿದೆ. ವಿಶೇಷ ಅಂದ್ರೆ ಈ ಸಿನಿಮಾ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿದೆ.


Click it and Unblock the Notifications











