ದಕ್ಷಿಣ ಭಾರತದ ಸೂಪರ್ ಹಿಟ್ ಸಿನಿಮಾವನ್ನು ರಿಮೇಕ್ ಮಾಡುವ ಕನಸುಕಂಡಿದ್ದರು ಸುಶಾಂತ್ ಸಿಂಗ್

ಬಾಲಿವುಡ್ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ನೆನಪು ಮಾತ್ರ. ಸುಶಾಂತ್ ಇಲ್ಲವಾದರು ಅವರ ಸಿನಿಮಾಗಳು ಅಭಿಮಾನಿಗಳನ್ನು ರಂಜಿಸುತ್ತಿವೆ. ಸುಶಾಂತ್ ಅಭಿನಯಿಸಿದ ಸಿನಿಮಾಗಳ ಸಂಖ್ಯೆ ಕಡಿಮೆಯಾದರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದೊಡ್ಡ ದೊಡ್ಡ ಕನಸುಗಳನ್ನು ಕಂಡಿದ್ದ ಸುಶಾಂತ್ ಆ ಎಲ್ಲಾ ಕನಸುಗಳನ್ನು ಬಿಟ್ಟು, ಬದುಕನ್ನು ಅರ್ಧಕ್ಕೆ ನಿಲ್ಲಿಸಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.

Recommended Video

ಸುಧಾರಾಣಿ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡ ಅಪೋಲೋ ಆಸ್ಪತ್ರೆ.

ಸುಶಾಂತ್ ಸಿಂಗ್ ಮಲಯಾಳಂನ ಸೂಪರ್ ಹಿಟ್ ಸಿನಿಮಾವನ್ನು ಬಾಲಿವುಡ್ ಗೆ ರಿಮೇಕ್ ಮಾಡುವ ಕನಸುಕಂಡಿದ್ದರು. ಮಲಯಾಳಂನಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿದ್ದ ಬೆಂಗಳೂರು ಡೇಸ್ ಸಿನಿಮಾವನ್ನು ಬಾಲಿವುಡ್ ಗೆ ರಿಮೇಕ್ ಮಾಡುವ ತಯಾರಿಯಲ್ಲಿದ್ದರಂತೆ. ಬೆಂಗಳೂರು ಡೇಸ್ ಸಿನಿಮಾ ನೋಡಿ ಸುಶಾಂತ್ ತುಂಬಾ ಇಷ್ಟ ಪಟ್ಟಿದ್ದರಂತೆ. ಮುಂದೆ ಓದಿ...

ನಿವಿನ್ ಪೌಲಿ ಪಾತ್ರದಲ್ಲಿ ಮಾಡುವ ಆಸೆಹೊಂದಿದ್ದರು

ನಿವಿನ್ ಪೌಲಿ ಪಾತ್ರದಲ್ಲಿ ಮಾಡುವ ಆಸೆಹೊಂದಿದ್ದರು

ಸುಶಾಂತ್ ಬೆಂಗಳೂರು ಡೇಸ್ ಸಿನಿಮಾದ ನಿವಿನ್ ಪೌಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸುಶಾಂತ್ ಆಸೆ ಪಟ್ಟಿದ್ದರಂತೆ. ಚಿತ್ರದಲ್ಲಿ ನಿವೀನ್ ಎಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಶಾಂತ್ ಸಹ ಎಂಜಿನಿಯರ್ ಪಾತ್ರದಲ್ಲಿ ಮಿಂಚಲು ತಯಾರಿ ಮಾಡುತ್ತಿದ್ದರಂತೆ. ಅಲ್ಲದೆ ಹಿಂದಿ ರಿಮೇಕ್ ಹಕ್ಕು ಹೊಂದಿದ್ದ ನಿರ್ಮಾಪಕ ವಿವೇಕ್ ರಂಗಾಚಾರಿ ಅವರೊಂದಿಗೆ ಸುಶಾಂತ್ ಮಾತುಕತೆ ನಡೆಸಿದ್ದರಂತೆ.

ದೊಡ್ಡ ತಾರಾಬಳಗವಿದ್ದ ಸಿನಿಮಾ

ದೊಡ್ಡ ತಾರಾಬಳಗವಿದ್ದ ಸಿನಿಮಾ

ಬೆಂಗಳೂರು ಡೇಸ್ ಸಿನಿಮಾದಲ್ಲಿ ನಿವಿನ್ ಪೌಲಿ, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್, ನಜ್ರಿಯಾ ಪಾರ್ವತಿ, ಇಶಾ ತಲ್ವಾರ್ ಮತ್ತು ನಿತ್ಯಾ ಮೆನನ್ ಅಭಿನಯಿಸಿದ್ದಾರೆ. ದುಲ್ಕರ್ ಸಲ್ಮಾನ್, ನಿವೀನ್ ಪೌಲಿ ಮತ್ತು ನಜ್ರಿಯಾ ಸೋದರಸಂಬಂಧಿಗಳಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದ ಈ ಸಿನಿಮಾ ಮಲಯಾಳಂ ಮಾತ್ರವಲ್ಲದೆ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು.

ದಿಲ್ ಬೆಚಾರ ರಿಲೀಸ್ ಆಗಿದೆ

ದಿಲ್ ಬೆಚಾರ ರಿಲೀಸ್ ಆಗಿದೆ

ಸುಶಾಂತ್ ಮನ ಕದ್ದಿದ್ದ ಬೆಂಗಳೂರು ಡೇಸ್ ಸಿನಿಮಾವನ್ನು ಬಾಲಿವುಡ್ ಗೆ ರಿಮೇಕ್ ಮಾಡುವ ಕನಸನ್ನು ಹಾಗೆಯೆ ಬಿಟ್ಟು ಬಾಲರ ಲೋಕಕ್ಕೆ ಹೊರಟು ಹೋಗಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಸುಶಾಂತ್ ಅಭಿನಯದ ದಿಲ್ ಬೆಚಾರ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದಾಖಲೆ ನಿರ್ಮಿಸಿದ ಸುಶಾಂತ್ ಕೊನೆಯ ಸಿನಿಮಾ

ದಾಖಲೆ ನಿರ್ಮಿಸಿದ ಸುಶಾಂತ್ ಕೊನೆಯ ಸಿನಿಮಾ

ದಿಲ್ ಬೆಚಾರ ಚಿತ್ರದ ಟ್ರೈಲರ್ ಮತ್ತು ಹಾಡುಗಳು ರಿಲೀಸ್ ಆಗಿ 24 ಗಂಟೆಯ ಒಳಗೆ ಯೂಟ್ಯೂಬ್ ದಾಖಲೆ ನಿರ್ಮಿಸಿದೆ. ಹಾಲಿವುಡ್ ಸಿನಿಮಾಗಳ ದಾಖಲೆಯನ್ನು ಬ್ರೇಕ್ ಮಾಡಿ ಟ್ರೆಂಡಿಂಗ್ ನಲ್ಲಿತ್ತು. ಸಿನಿಮಾ ರಿಲೀಸ್ ಆದ ಮೇಲೆಯೂ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ವೀಕ್ಷಣೆಯಲ್ಲಿಯೂ ದಿಲ್ ಬೆಚಾರ ದಾಖಲೆ ನಿರ್ಮಿಸಿದೆ.

More from Filmibeat

English summary
Actor Sushant Singh dream of Remaking super hit Malayalam Bangalore Days movie. Dulquer Salman, Nivin Pauly and Nazriya starrer Bangalore Days has been huge success in Malayalam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X