ಲ್ಯಾಪ್ ಟಾಪ್, ಚಿನ್ನ, ಹಣ ಎಲ್ಲವನ್ನೂ ರಿಯಾ ದೋಚಿಕೊಂಡು ಹೋಗಿದ್ದಾರೆ: ಸುಶಾಂತ್ ಕುಟುಂಬ ಸ್ನೇಹಿತನ ಆರೋಪ

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ಇನ್ನೂ ಮುಕ್ತಾಯವಾಗಿಲ್ಲ. ದಿನಕ್ಕೊಂದು ತಿರುವು ಪಡೆಯುತ್ತಿರುವ ಸುಶಾಂತ್ ಸಾವಿನ ಪ್ರಕರಣ ಇದೀಗ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಸುತ್ತಿಕೊಂಡಿದೆ. ಸುಶಾಂತ್ ನಿಧನಹೊಂದಿ ತಿಂಗಳಾದ ಮೇಲೆ ತಂದೆ ಕೆಕೆ ಸಿಂಗ್ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

Recommended Video

ಡಿಬಾಸ್ ದರ್ಶನ್ ಮುಂದಿನ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ | Filmibeat Kannada

ಸುಶಾಂತ್ ತಂದೆ ರಿಯಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವುದು ಮತ್ತಷ್ಟು ಅನುಮಾನ ಮೂಡಿಸುವಂತೆ ಮಾಡಿದೆ. ತಂದೆಯ ದೂರಿನ ಆಧಾರದ ಮೇಲೆ ರಿಯಾ ಚಕ್ರವರ್ತಿಯನ್ನು ವಿಚಾರಣೆ ಮಾಡಲಾಗುತ್ತಿದೆ. ಇದರೆ ಬೆನ್ನಲ್ಲೆ ಈಗ ಸುಶಾಂತ್ ಕುಟುಂಬದ ಸ್ನೇಹಿತರಾದ ನಿಲೋತ್ಪಾಲ್ ಮೃಣಾಲ್ ದೂರನ್ನು ಬೆಂಬಲಿಸಿ ರಿಯಾ ವಿರುದ್ಧ ಮತ್ತಷ್ಟು ಆರೋಪ ಮಾಡಿದ್ದಾರೆ.

ರಿಯಾ ಚಕ್ರವರ್ತಿ ಸುಶಾಂತ್ ಮನೆಯಲ್ಲಿದ್ದ ಎಲ್ಲವನ್ನೂ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. "ಲ್ಯಾಪ್ ಟಾಪ್, ಆಭರಣ, ಮತ್ತು ಹಣವನ್ನು ರಿಯಾ ತೆಗೆದುಕೊಂಡು ಹೋಗಿದ್ದಾರೆ. ನಂತರ ಸುಶಾಂತ್ ನಂಬರ್ ಬ್ಲಾಕ್ ಮಾಡಿದ್ದಾರೆ. ಮ್ಯಾನೇಜರ್ ದಿಶಾ ಸಾವಿನ ಬಳಿಕ ಸುಶಾಂತ್, ರಿಯಾಗೆ ಎಷ್ಟು ಕರೆ ಮಾಡಿದರು ಸಂಪರ್ಕಿಸಲು ಸಾಧ್ಯವಾಗಿಲ್ಲ. ಮನೆಯಿಂದ ಎಲ್ಲವನ್ನು ತೆಗೆದುಕೊಂಡು ಹೋಗಿದ್ದಾರೆ." ಎಂದಿದ್ದಾರೆ.

Sushant Singh Family Friend Alleges That Rhea Chakraborty Take Everything From Sushant House

"ಅವಳಿಗೆ ಸ್ವಲ್ಪವಾದರು ಜ್ಞಾನ ಇಲ್ಲವೆ. ಬೇರೆಯವರ ಲ್ಯಾಪ್ ಟಾಪ್ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ. ಅಲ್ಲದೆ ಸುಶಾಂತ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ." ಎಂದು ಆರೋಪ ಮಾಡಿದ್ದಾರೆ.

ಈ ಮೊದಲು ರಿಯಾ ಚಕ್ರವರ್ತಿ ಕಳೆದ 11 ತಿಂಗಳಿಂದ ಸುಶಾಂತ್ ಸಿಂಗ್ ಡೆಬಿಟ್ ಮತ್ತು ಕ್ರೆಡಿಟ್ ಅನ್ನು ಬಳಸುತ್ತಿದ್ದರು ಆರೋಪ ಕೇಳಿಬಂದಿದೆ. ಚಿತ್ರೀಕರಣಕ್ಕೆ ಯೂರೋಪ್ ಗೆ ಹೋದ ವಿವಾನ ಟಿಕೆಟ್ ಗೆ ಹಣ ಸುಶಾಂತ್ ಖಾತೆಯಿಂದ ಕಟ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ವಿಚಾರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

More from Filmibeat

English summary
Sushant Singh family friend alleges Rhea Chakraborty to take laptop, Jewellery and cash from Sushant home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X