ಉಗ್ರ ಕಸಬ್ ಸಿನಿಮಾ: ಸುಶಾಂತ್ ಸಾವಿನ ಹಿಂದಿನ ದಿನ ಮಾತುಕತೆ ಆಗಿತ್ತು!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಐದು ತಿಂಗಳು ಕಳೆದಿದೆ. ಆದರೆ, ಸುಶಾಂತ್‌ಗೆ ಸಂಬಂಧಿಸಿದಂತೆ ವಿಚಾರಗಳು ಸದಾ ಸುದ್ದಿಯಲ್ಲಿದೆ. ನಟನ ಸಾವಿನ ಕುರಿತು ಸಿಬಿಐ ತನಿಖೆ ಮಾಡುತ್ತಿದ್ದು, ಅಂತಿಮ ವರದಿ ಇನ್ನೂ ನೀಡಿಲ್ಲ.

ಮತ್ತೊಂದೆಡೆ ಡ್ರಗ್ಸ್ ಪ್ರಕರಣದಲ್ಲಿ ಹಲವು ನಟ-ನಟಿಯರು ತನಿಖೆ ಎದುರಿಸುತ್ತಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆಯಾದರೂ ಈ ಸಾವಿನ ಸುತ್ತ ಉಳಿದುಕೊಂಡಿರುವ ಅನುಮಾನಗಳಿಗೆ ಸ್ಪಷ್ಟನೆ ಸಿಕ್ಕಿಲ್ಲ. ಈ ನಡುವೆ ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದಿದ್ದ ಉಗ್ರ ಅಜ್ಮಲ್ ಕಸಬ್ ಕುರಿತು ಸಿನಿಮಾ ಮಾಡುವ ಬಗ್ಗೆ ಚರ್ಚಿಸಿದ್ದರಂತೆ. ಮುಂದೆ ಓದಿ...

ಮುಂಬೈ ದಾಳಿ ಕುರಿತು ಸಿನಿಮಾ

ಮುಂಬೈ ದಾಳಿ ಕುರಿತು ಸಿನಿಮಾ

2008ರಲ್ಲಿ ನಡೆದ ಮುಂಬೈ ಅಟ್ಯಾಕ್ ಕುರಿತು ಸಿನಿಮಾ ಮಾಡಲು ನಟ ಸುಶಾಂತ್ ಸಿಂಗ್ ರಜಪೂತ್ ನಿರ್ಮಾಪಕರೊಬ್ಬರ ಜೊತೆ ಚರ್ಚಿಸಿದ್ದರಂತೆ. ಸಾಯುವುದಕ್ಕೂ ಒಂದು ದಿನ ಮುಂಚಿತವಾಗಿ ಈ ಪ್ರಾಜೆಕ್ಟ್ ಕುರಿತು ಮಾತನಾಡಿದ್ದರು ಎಂದು ವರದಿಗಳು ಹೇಳಿವೆ.

ಅಧಿಕಾರಿಗಳ ಮುಂದೆ ಮಾಹಿತಿ

ಅಧಿಕಾರಿಗಳ ಮುಂದೆ ಮಾಹಿತಿ

ಇಂಡಿಯಾ ಟುಡೇ ವರದಿ ಮಾಡಿರುವಂತೆ, ಸುಶಾಂತ್ ಸಿಂಗ್ ಟ್ಯಾಲೆಂಟ್ ಏಜೆಂಟ್ ಉದಯ್ ಸಿಂಗ್ ಗೌರಿ ಮುಂಬೈ ಪೊಲೀಸ್, ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳಿಗೆ ಹೇಳಿಕೆ ನೀಡಿರುವ ಹೇಳಿಕೆಯಲ್ಲಿ, 'ದಿವಂಗತ ನಟ ಐಎಸ್‌ಐ ಮತ್ತು ಅಜ್ಮಲ್ ಕಸಬ್ ಕುರಿತು ಚಿತ್ರ ಮಾಡಲು ಚರ್ಚಿಸುತ್ತಿದ್ದರು' ಎಂದು ಹೇಳಿದ್ದಾರಂತೆ.

ನಿರ್ಮಾಪಕನ ಜೊತೆ ಚರ್ಚೆ

ನಿರ್ಮಾಪಕನ ಜೊತೆ ಚರ್ಚೆ

ಸುಶಾಂತ್ ಸಿಂಗ್ ಸಾಯುವ ಹಿಂದಿನ ದಿನ ನಿರ್ಮಾಪಕ ನಿಖಿಲ್ ಅಡ್ವಾಣಿ ಮತ್ತು ನಿರ್ಮಾಪಕ ರಮೇಶ್ ಟೌರಾನಿ ಜೊತೆ ಹೊಸ ಪ್ರಾಜೆಕ್ಟ್‌ ಕುರಿತು ದೂರವಾಣಿ ಮೂಲಕ ಮಾತನಾಡಿದ್ದರು. ಜೂನ್ 13 ರಂದು ಸುಮಾರು ಏಳು ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು. ಈ ಸಂಬಂಧ ಜೂನ್ 15 ತಾರೀಖು ವಿಡಿಯೋ ಕಾನ್ಸೆರೆನ್ಸ್ ಮೂಲಕ ಮಾತನಾಡುವ ಪ್ಲಾನ್ ಸಹ ಆಗಿತ್ತು ಎಂದು ಉದಯ್ ಸಿಂಗ್ ಗೌರಿ ತಿಳಿಸಿದ್ದಾರೆ.

Recommended Video

ಇವರ ಧೈರ್ಯವನ್ನು ನಾವು ಮೆಚ್ಚಲೇ ಬೇಕು | Neethu Shetty | Filmibeat Kannada
ನಿರ್ಮಾಪಕರು ಹೇಳಿದ್ದರು

ನಿರ್ಮಾಪಕರು ಹೇಳಿದ್ದರು

ಈ ಹಿಂದೆ ಸುಶಾಂತ್ ಸಿಂಗ್ ಕುರಿತು ಮಾತನಾಡಿದ ಸಂದರ್ಭದಲ್ಲೂ ನಿರ್ಮಾಪಕ ರಮೇಶ್ ಟೌರಾನಿ ಹೊಸ ಪ್ರಾಜೆಕ್ಟ್ ಬಗ್ಗೆ ಹೇಳಿಕೊಂಡಿದ್ದರು. ಸುಶಾಂತ್ ಜೊತೆ ಹೊಸ ಚಿತ್ರ ಮಾಡಲು ತಯಾರಿ ನಡೆಸುತ್ತಿದ್ದೇವೆ. ಜೂನ್ 13 ರಂದು ಫೋನ್‌ನಲ್ಲಿ ಮಾತುಕತೆ ಸಹ ಆಗಿತ್ತು ಎಂದು ತಿಳಿಸಿದ್ದರು. ಆದ್ರೆ, ಅದು ಯಾವ ಕಥೆ ಎಂದು ಬಹಿರಂಗಪಡಿಸಿರಲಿಲ್ಲ.

More from Filmibeat

English summary
Bollywood late actor Sushant Singh rajput had discussed a film on Ajmal Kasab a day before his death said source.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X