'ನೀವು ನೆನಪಾಗುತ್ತೀರಿ' ಎಂದಿದ್ದ ಸುಶಾಂತ್ ಸಿಂಗ್ ತಾವೇ ನೆನಪಾಗಿಬಿಟ್ಟರು

ಪ್ರತಿಭಾವಂತ ಯುವನಟ ಸುಶಾಂತ್ ಸಿಂಗ್ ರಜಪೂತ್ ಇಂದು ತಮ್ಮ ಸ್ವಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. 34 ವಯಸ್ಸಿನ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಬಾಲಿವುಡ್ ಕಂಬನಿ ಮಿಡಿದಿದೆ. ಬಾಲಿವುಡ್ ಸ್ಟಾರ್ ನಟ-ನಟಿಯರು ತಮ್ಮ ಆಘಾತವನ್ನು ಟ್ವಿಟ್ಟರ್‌ ಮೂಲಕ ವ್ಯಕ್ತಪಡಿಸಿದ್ದಾರೆ.

ಸುಶಾಂತ್ ಸಿಂಗ್ ಹೀಗೆ ಅಚಾನಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಘಟನೆ ನಡೆದು ಬಿಟ್ಟಿದೆ. ಸುಶಾಂತ್ ಅವರ ನೆಚ್ಚಿನ ನಟ ನಿಧನಹೊಂದಿದಾಗ, 'ನೀವು ಬಹಳ ನೆನಪಾಗುತ್ತೀರಿ' ಎಂದು ಬರೆದಿದ್ದ ಸುಶಾಂತ್ ಇಂದು ತಾವೇ ನೆನಪಾಗಿಬಿಟ್ಟಿದ್ದಾರೆ.

ನಟ ಇರ್ಫಾನ್ ಖಾನ್ ನಿಧನಕ್ಕೆ ಸಂತಾಪ

ನಟ ಇರ್ಫಾನ್ ಖಾನ್ ನಿಧನಕ್ಕೆ ಸಂತಾಪ

ನಟ ಇರ್ಫಾನ್ ಖಾನ್ ನಿಧನಹೊಂದಿದ ದಿನ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದ ಸುಶಾಂತ್ ಸಿಂಗ್, 'ಸರ್, ನೀವು ಬಹಳ ನೆನಪಾಗುತ್ತಿರಿ' ಎಂದು ಬರೆದುಕೊಂಡಿದ್ದರು. ಆದರೆ ಈ ಪೋಸ್ಟ್‌ ಹಾಕಿದ ಒಂದುವರೆ ತಿಂಗಳಲ್ಲಿ ತಾವೇ ನೆನಪಾಗಿಬಿಟ್ಟಿದ್ದಾರೆ.

ರಿಶಿ ಕಪೂರ್ ತೀರಿಕೊಂಡಾಗ ಪೋಸ್ಟ್

ರಿಶಿ ಕಪೂರ್ ತೀರಿಕೊಂಡಾಗ ಪೋಸ್ಟ್

ರಿಶಿ ಕಪೂರ್ ತೀರಿಕೊಂಡಾಗ ಸಹ ಚಿತ್ರವನ್ನು ಇನ್‌ಸ್ಟಾನಲ್ಲಿ ಪ್ರಕಟಿಸಿದ್ದ ಸುಶಾಂತ್ ಸಿಂಗ್ ರಜಪೂತ್ ಹಿರಿಯ ನಟನೆಗೆ ಗೌರವ ಸಲ್ಲಿಸಿದ್ದರು. ಆದರೆ ಇದಾದ ಆರು ವಾರದಲ್ಲಿ ತಾವೇ ಜೀವ ಬಿಟ್ಟಿದ್ದಾರೆ.

ಕ್ಷಣಿಕ ಜೀವನ ಎಂದಿದ್ದ ಸುಶಾಂತ್

ಕ್ಷಣಿಕ ಜೀವನ ಎಂದಿದ್ದ ಸುಶಾಂತ್

ಕ್ಷಣಿಕ ಜೀವನ ಎಂಬುದು ಸುಶಾಂತ್ ಸಿಂಗ್ ಹಂಚಿಕೊಂಡಿದ್ದ ಕೊನೆಯ ಪೋಸ್ಟ್‌ನ ಸಾರಾಂಶವಾಗಿತ್ತು. ತಮ್ಮ ತಾಯಿಯ ಚಿತ್ರ ಪ್ರಕಟಿಸಿ ಕ್ಷಣಿಕ ಜೀವನ ಎಂದಿದ್ದರು ಸುಶಾಂತ್ ಸಿಂಗ್ ರಜಪೂತ್. ಕೊನೆಯ ಇನ್‌ಸ್ಟಾಗ್ರಾಂ ಪೋಸ್ಟ್ ಅನ್ನು ಜೂನ್ 3 ರಂದು ಮಾಡಿದ್ದರು ಸುಶಾಂತ್.

12 ಸಿನಿಮಾಗಳಲ್ಲಿ ನಟಿಸಿದ್ದ ಸುಶಾಂತ್

12 ಸಿನಿಮಾಗಳಲ್ಲಿ ನಟಿಸಿದ್ದ ಸುಶಾಂತ್

ಸುಶಾಂತ್ ಸಿಂಗ್ ಈವರೆಗೆ 12 ಸಿನಿಮಾಗಳಲ್ಲಿ ನಟಿಸಿದ್ದರು. ನಾಲ್ಕು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಡ್ರೈವ್ ಸಿನಿಮಾ ಕೊನೆಯದಾಗಿ ಬಿಡುಗಡೆ ಆಗಿತ್ತು, ದಿಲ್ ಬೇಚಾರಾ ಬಿಡುಗಡೆಗೆ ತಯಾರಾಗಿದೆ.

More from Filmibeat

English summary
Actor Sushant Singh Instagram post about Irfan Khan. He said you will be remembered.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X