ಸುಶಾಂತ್ ಸಿಂಗ್‌ರಂತೆ ಕಾಣಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದ ನಟ ಸಚಿನ್ ತಿವಾರಿ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ. ಸುಶಾಂತ್ ಸಿಂಗ್ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಸುಶಾಂತ್ ಸಿಂಗ್ ಅವರಂತೆ ಕಾಣಿಸಿಕೊಂಡು ನಟ ಸಚಿನ್ ತಿವಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
Recommended Video
ಸಚಿನ್ ಗೆ ನಿರ್ಮಾಪಕ ಮಾರುತ್ ಸಿಂಗ್ ಮತ್ತು ನಿರ್ದೇಶಕ ಸನೋಜ್ ಮಿಶ್ರಾ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನಲ್ಲಿ 'ಸುಸೈಡ್ ಆರ್ ಮರ್ಡರ್' ಎನ್ನುವ ಹೆಸರಿನ ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾದಲ್ಲಿ ಸಚಿನ್ ತಿವಾರಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಸುಶಾಂತ್ ಸಿಂಗ್ ಸಾವು ಮತ್ತು ಸ್ವಜನಪಕ್ಷಪಾತವನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್ ನಲ್ಲಿ ನಟ ಸಚಿನ್, ಸುಶಾಂತ್ ಹಾಗೆ ಕಾಣಿಸಿಕೊಂಡಿದ್ದಾರೆ. ಮುಂದೆ ಓದಿ..

'ಶಶಾಂಕ್' ಸಿನಿಮಾತಂಡಕ್ಕೆ ನಟ ಸಚಿನ್ ಮೋಸ
ವಿಷಯ ಅಂದರೆ ನಟ ಸಚಿನ್ 'ಸುಸೈಡ್ ಆರ್ ಮರ್ಡರ್' ಸಿನಿಮಾ ಮಾಡುವ ಮೊದಲು 'ಶಶಾಂಕ್' ಎನ್ನುವ ಸಿನಿಮಾಗೆ ಸಹಿ ಮಾಡಿದ್ದರಂತೆ. ಈ ಸಿನಿಮಾ ನಿರ್ಮಾಪಕ ಮಾರುತ್ ಸಿಂಗ್ ಮತ್ತು ನಿರ್ದೇಶಕ ಸನೋಜ್ ಮಿಶ್ರಾ ಕಾಂಬಿನೇಷನ್ ನಲ್ಲಿ ಮೂಡಿಬರಲು ಸಿದ್ಧವಾಗಿತ್ತು. ಈ ಸಿನಿಮಾ ಸಹ ಸುಶಾಂತ್ ಸಿಂಗ್ ಮತ್ತು ಸ್ವಜನಪಕ್ಷಪಾತದ ಬಗ್ಗೆ ಇರುವ ಚಿತ್ರವಾಗಿತ್ತು.

ಕಥೆ ಲೀಕ್ ಮಾಡಿದ ಆರೋಪ
ಆದರೆ ನಟ ಸಚಿನ್ 'ಶಶಾಂಕ್' ಸಿನಿಮಾವನ್ನು ಕೈ ಬಿಟ್ಟು, ಈ ಕಥೆಯನ್ನು ಮತ್ತೊಬ್ಬ ನಿರ್ಮಾಪಕರ ಬಳಿ ಹೇಳಿದ್ದಾರೆ. ಅದೆ ಕಥೆಯನ್ನು ಇಟ್ಟುಕೊಂಡು 'ಸುಸೈಡ್ ಆರ್ ಮರ್ಡರ್' ಸಿನಿಮಾ ಮಾಡುತ್ತಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಾರುತ್ ಸಿಂಗ್ ಮತ್ತು ನಿರ್ದೇಶಕ ಸನೋಜ್ ಮಿಶ್ರಾ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ರಿಯಾ ಚಕ್ರವರ್ತಿ ವಿರುದ್ಧ ಡ್ರಗ್ ಸೇವನೆಯ ಆರೋಪ: ರಕ್ತ ಪರೀಕ್ಷೆಗೆ ಸಿದ್ಧ ಎಂದ ನಟಿ

ಸಚಿನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆವಿಲ್ಲ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಮಾರುತ್ ಸಿಂಗ್ "ಲೀಗಲ್ ನೋಟಿಸ್ ಕಳಿಹಿಸಿದ್ದೇವೆ. ಆದರೆ ಸಚಿನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ. ಸಚಿನ್ ನಮ್ಮ ಸಿನಿಮಾದ ಕಥೆಯನ್ನು ಬೇರೊಬ್ಬ ನಿರ್ದೇಶಕರೊಂದಿಗೆ ಹಂಚಿಕೊಂಡಿದ್ದಾರೆ ಎನ್ನುವುದು ಇತ್ತೀಚಿಗೆ ಗೊತ್ತಾಗಿದೆ." ಎಂದು ಹೇಳಿದ್ದಾರೆ.

ಸುಶಾಂತ್ ಬಗ್ಗೆ ಸಿನಿಮಾ ಮಾಡುವ ಕನಸು ಭಗ್ನ
ಸಿಂಗ್ ಮತ್ತು ಮಿಶ್ರಾ ಇಬ್ಬರು ನಿರ್ದೇಶಕರ ಹೆಸರನ್ನು ಬಹಿರಂಗ ಪಡಿಸಿಲ್ಲ. ಆದರೆ 'ಸುಸೈಡ್ ಆರ್ ಮರ್ಡರ್' ಸಿನಿಮಾ ಶೇಖರ್ ಗುಪ್ತಾ ನಿರ್ದೇಶನ ಮಾಡುತ್ತಿದ್ದಾರೆ. 'ಸುಶಾಂತ್ ಸಿಂಗ್ ಅವರ ಹಠಾತ್ ನಿಧನ ಮತ್ತು ಸ್ವಜನ ಪಕ್ಷಪಾತದ ಬಗ್ಗೆ ಸಿನಿಮಾ ಮಾಡುವುದು ನಮ್ಮ ಕನಸಾಗಿತ್ತು. ಕಥೆಯನ್ನು ಮತ್ತು ಸಿನಿಮಾದ ಬಗ್ಗೆ ಎಲ್ಲಾ ವಿವರಗಳನ್ನು ಸಚಿನ್ ಬಳಿ ಹಂಚಿಕೊಂಡಿದ್ದೆವು. ಆದರೆ ನಮ್ಮ ಆಸೆಗೆ ತಣ್ಣೀರು ಎರೆಚಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











