ಸುಶಾಂತ್ ಸಿಂಗ್ ಆತ್ಮಹತ್ಯೆ ಪೂರ್ವನಿರ್ಧಾರಿತವೇ? ಅನುಮಾನಕ್ಕೆ ಕಾರಣವಾದ ಸಿಬ್ಬಂದಿ ಹೇಳಿಕೆ

ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ಭಾನುವಾರ ಮುಂಬೈನ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ.

Recommended Video

ಸುದೀಪ್ ಕೈಯಲ್ಲಿ ಇದೊಂದು ಕೆಲಸ ಮಾತ್ರ ಆಗಲ್ಲ | Kiccha Sudeep | Filmibeat Kannada

ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಆ ಕ್ಷಣದ ಹತಾಶೆಯೇ ಕಾರಣ ಎಂದೇ ಎಲ್ಲರೂ ಭಾವಿಸಿದ್ದಾರು. ಆದರೆ ಆತ್ಮಹತ್ಯೆಯ ನಿರ್ಧಾರವನ್ನು ಎರಡು ದಿನ ಮೊದಲೇ ಮಾಡಿದ್ದರಾ ಸುಶಾಂತ್ ಎಂಬ ಅನುಮಾನ ಈಗ ಶುರುವಾಗಿದೆ.

ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಸುಶಾಂತ್‌ ಸಿಂಗ್‌ ಗೆ ಸಂಬಂಧಪಟ್ಟ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಅದರಲ್ಲಿ ಸುಶಾಂತ್‌ ಸಿಂಗ್ ಮನೆಗೆಲಸ ಹಾಗೂ ಇತರ ಸಿಬ್ಬಂದಿಗಳೂ ಸೇರಿದ್ದಾರೆ.

ಸುಶಾಂತ್ ಸಿಂಗ್ ಸಿಬ್ಬಂದಿ ಪೊಲೀಸರಿಗೆ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಸುಶಾಂತ್‌ ಸಿಂಗ್‌ ಸಾಯುವ ನಿರ್ಧಾರವನ್ನು ಮೊದಲೇ ಮಾಡಿದ್ದರೆ ಎಂಬ ಅನುಮಾನ ಬರುತ್ತದೆ.

ಆತ್ಮಹತ್ಯೆಯ ಸುಳಿವು ನೀಡಿದ್ದರು ಸುಶಾಂತ್

ಆತ್ಮಹತ್ಯೆಯ ಸುಳಿವು ನೀಡಿದ್ದರು ಸುಶಾಂತ್

ಸುಶಾಂತ್‌ ಸಿಂಗ್ ನೇಣಿಗೆ ಕೊರಳೊಡ್ಡುವ ಮೂರು ದಿನ ಮುನ್ನಾ ಎಲ್ಲರಿಗೂ ಸಂಬಳ ನೀಡಿದ್ದರಂತೆ. ಅದೇ ದಿನ ಸಿಬ್ಬಂದಿಯೊಂದಿಗೆ ಮಾತನಾಡುತ್ತಾ ಆತ್ಮಹತ್ಯೆಯ ಸಣ್ಣ ಸುಳಿವನ್ನೂ ನೀಡಿದ್ದಾರೆ.

'ಇದೇ ಕೊನೆಯ ಸಂಬಳ ಆಗಬಹುದು ಎಂದಿದ್ದರು'

'ಇದೇ ಕೊನೆಯ ಸಂಬಳ ಆಗಬಹುದು ಎಂದಿದ್ದರು'

ಸಿಬ್ಬಂದಿಗೆ ಸಂಬಳ ಬಟವಾಡೆ ಮಾಡಿ, 'ಮುಂದೆ ನನ್ನಿಂದ ನಿಮಗೆ ಸಂಬಳ ನೀಡಲು ಸಾಧ್ಯವಾಗದೇ ಇರಬಹುದು. ಬಹುಷಃ ಇದು ನಾನು ನೀಡುತ್ತಿರುವ ಕೊನೆಯ ಸಂಬಳ' ಎಂದಿದ್ದರಂತೆ ಸುಶಾಂತ್ ಸಿಂಗ್ ರಜಪೂತ್. ಕೊರೊನಾ ತಂದ ಸಂಕಷ್ಟದಿಂದ ಅವರು ಹೀಗೆ ಹೇಳಿರಬಹುದು ಎಂದುಕೊಂಡರಂತೆ ಸಿಬ್ಬಂದಿ.

'ಕೊರೊನಾ ಸಮಯದಲ್ಲೂ ಪೂರ್ಣ ಸಂಬಳ ಕೊಟ್ಟಿದ್ದರು'

'ಕೊರೊನಾ ಸಮಯದಲ್ಲೂ ಪೂರ್ಣ ಸಂಬಳ ಕೊಟ್ಟಿದ್ದರು'

'ಕೊರೊನಾ ಸಂಕಷ್ಟದ ಸಮಯದಲ್ಲೂ ಸಹ ಪೂರ್ಣ ಸಂಬಳವನ್ನೇ ಸುಶಾಂತ್ ನಮಗೆ ನೀಡಿದರು. ಯಾರನ್ನೂ ಕೆಲಸದಿಂದಲೂ ತೆಗೆಯಲಿಲ್ಲ, ನಮಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡರು' ಎಂದು ಸಿಬ್ಬಂದಿ ಪೊಲೀಸರ ಬಳಿ ಹೇಳಿದ್ದಾರೆ.

ಕಣ್ಣೀರಿಟ್ಟ ಮನೆಗೆಲಸದ ಸಿಬ್ಬಂದಿ

ಕಣ್ಣೀರಿಟ್ಟ ಮನೆಗೆಲಸದ ಸಿಬ್ಬಂದಿ

'ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ನಾವು ಎಣಿಸಿರಲೇ ಇಲ್ಲ. ಅವರು ಬಹಳ ಒಳ್ಳೆಯವರಾಗಿದ್ದರು, ನಮಗೆ ಕಷ್ಟದ ಸಮಯದಲ್ಲಿ ಹಣಕಾಸಿನ ನೆರವನ್ನೂ ನೀಡಿದ್ದರು. ನೀವು ಸಂಬಳ ಕೊಡದೇ ಇದ್ದರು ನಾವು ಬಂದು ಕೆಲಸ ಮಾಡಿಕೊಡುವುದಾಗಿ ನಾವು ಹೇಳಿದ್ದೆವು' ಎಂದು ಸಿಬ್ಬಂದಿ ಕಣ್ಣೀರಿಡುತ್ತಾ ಪೊಲೀಸರ ಬಳಿ ಹೇಳಿದ್ದಾರೆ.

More from Filmibeat

English summary
Actor Sushant Singh Rajput paid salaries of his employees three days before his death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X