ಸುಶಾಂತ್ ಸಿಂಗ್ ಕನಸುಗಳ ವಿಡಿಯೋ ಹಂಚಿಕೊಂಡ ಸಹೋದರಿ
ಇದು ಜನವರಿ 21 ಬಾಲಿವುಡ್ ನಟ ಸುಶಾಂತ್ ಸಿಂಗ್ ಅಭಿಮಾನಿಗಳಿಗೆ ತುಂಬಾ ವಿಶೇಷವಾದ ದಿನ. ಇಂದು ಸುಶಾಂತ್ ಸಿಂಗ್ ಹುಟ್ಟು ಹಬ್ಬ. ಸುಶಾಂತ್ ಸಿಂಗ್ ಅಗಲಿ ಒಂದು ವರ್ಷ ಕಳೆದಿದೆ. ಆದರೆ ಅರ ಮೇಲಿನ ಅಭಿಮಾನಿಗಳ ಪ್ರೀತಿ ಅಭಿಮಾನಿ ಮಾತ್ರ ಒಂದಿಷ್ಟು ಕಡಿಮೆ ಆಗಿಲ್ಲ.
ಸುಶಾಂತ್ ಸಿಂಗ್ ಸಾವಿನ ಸುದ್ದಿ ಅಭಿಮಾನಿ ಮತ್ತು ಪ್ರೇಕ್ಷಕ ಬಳಗಕ್ಕೆ ದೊಡ್ಡ ಶಾಕ್ ನೀಡಿತ್ತು. ಅವರ ಸಾವನ್ನು ಯಾರೂ ಕೂಡ ಅಷ್ಟು ಸುಲಭವಾಗಿ ಒಪ್ಪಿ ಕೊಂಡಿರಲಿಲ್ಲ. ಸುಶಾಂತ್ ತಮ್ಮ ಆಫ್ ಸ್ಕ್ರೀನ್ ಸರಳ ವ್ಯಕ್ತಿತ್ವದಿಂದ ಜನ ಮನ ಗೆದ್ದಿದ್ದರು. ಹಾಗಾಗಿ ಅವರ ಹುಟ್ಟು ಹಬ್ಬವನ್ನು ಸವಿ ನೆನಪಿನೊಂದಿಗೆ ಆಚರಿಸುತ್ತಾರೆ. ಸಾಮಾಜಿಕ ಜಾತಾಣದಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಸುಶಾಂತ್ ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿಸಿದ್ದಾರೆ.
ಸುಶಾಂತ್ ಸಿಂಗ್ ಹುಟ್ಟು ಹಬ್ಬದ ಪ್ರಯುಕ್ತ ಅವರ ಸಹೋದರಿ ವಿಶೇಷವಾದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸುಶಾಂತ್ ಕನಸುಗಳನ್ನು ಸಾಕಾರ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ ಅನಾವಾರಣ ಆಯ್ತು ಸುಶಾಂತ್ ಕನಸುಗಳು!
ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಶೇಷವಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಪುಟ್ಟ ವಿಡಿಯೋದಲ್ಲಿ ಸುಶಾಂತ್ ಸಿಂಗ್ ಅವರ ಸಂಪೂರ್ಣ ಜೀವನವನ್ನು ಸೆರೆ ಹಿಡಿಯಲಾಗಿದೆ. ಸುಶಾಂತ್ ಹೇಗೆ ಬದುಕುತ್ತಿದ್ದರು, ಅವರ ಧ್ಯೇಯ, ಕನಸುಗಳು ಏನಾಗಿದ್ದವು ಎನ್ನುವ ಬಗ್ಗೆಯೂ ಈ ವಿಡಿಯೋ ಹೇಳುತ್ತಿದೆ.

ನಿನ್ನ ಕನಸುಗನ್ನು ನನಸು ಸಾಕಾರ ಗೊಳಿಸಲು ಪ್ರಯತ್ನಿಸುವೆ: ಶ್ವೇತಾ
ಸಹೋದರ ಹುಟ್ಟುಹಬ್ಬದಂದು ಈ ವಿಡಿಯೋ ಹಂಚಿಕೊಂಡು. " ಓ ಮೈ ಗಾಡ್ ಎಷ್ಟು ಸುಂದರವಾದ ಸಂಕಲನ ಇದು. ಸಹೋದರನಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಎಲ್ಲಾ ಕನಸುಗಳನ್ನು ಈಡೇರಿಸಲು ಪ್ರಯತ್ನಿಸುತ್ತೇವೆ ಮತ್ತು ಈಡೇರಿಸುತ್ತೇವೆ, ನಿಮ್ಮ ಪರಂಪರೆಯು ಜೀವಂತವಾಗಿರುತ್ತದೆ. ಅವರ ಈ ಸುಂದರ ಕ್ಷಣಗನ್ನು ಒಂದೆಡೆ ಸೇರಿಸಿದ ತಂಡಕ್ಕೆ ಧನ್ಯವಾದಗಳು, ನೀವು ಉತ್ತಮ ಕೆಲಸವನ್ನು ಮಾಡಿದ್ದೀರಿ". ಎಂದು ಬರೆದು ಕೊಂಡಿದ್ದಾರೆ. ಈ ಮೂಲಕ ಸುಶಾಂತ್ ಕಂಡಿದ್ದು ಕನಸು, ಮಾಡಬೇಕು ಎಂದುಕೊಂಡಿದ್ದ ಕೆಲಸಗಳನ್ನು ಮಾಡಲು ಪ್ರಯತ್ನ ಮಾಡುವುದಾಗಿ ಸಹೋದರಿ ಶ್ವೇತಾ ಸಿಂಗ್ ಬರೆದುಕೊಂಡಿದ್ದಾರೆ.

ಅಭಿಮಾನಿಗಳಿಂದ ಭಾವುಕ ಸಂದೇಶಗಳು!
ಶ್ವೇತಾ ಅವರು ಈ ವಿಡಿಯೋವನ್ನು ಶೇರ್ ಮಾಡಿದ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಜನರು ಈ ವಿಡಿಯೋ ಕಂಡು ಭಾವುಕರಾಗಿದ್ದಾರೆ. ಸುಶಾಂತ್ ಸಿಂಗ್‌ಗೆ ತಮ್ಮ ಶುಭಾಶಯ ಹೇಳುತ್ತಿದ್ದಾರೆ. ಕೆಲವು ಕಮೆಂಟ್ಸ್‌ಗಳು ಹೀಗೆ ಇವೆ. 'ನಿಮ್ಮ ಸುಂದರ ಸಹೋದರ ಜನ್ಮದಿನದ ಶುಭಾಶಯಗಳು. ಅವರು ನಮಗೆಲ್ಲರಿಗೂ ಧನ್ಯವಾದ ಹೇಳುತ್ತಾ ನಮ್ಮನ್ನು ನೋಡಿ ನಗುತ್ತಿದ್ದಾರೆ' ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಮತ್ತೊಬ್ಬ "ಹುಟ್ಟುಹಬ್ಬದ ಶುಭಾಶಯಗಳು ಸುಶಾಂತ್, ನಾವು ನಿಮ್ಮನ್ನು ಯಾವಾಗಲೂ ಮಿಸ್ ಮಾಡಿಕೊಂಡಿದ್ದೇವೆ, ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇವೆ, ನಮ್ಮ ಸ್ಮಾರ್ಟೆಸ್ಟ್ ನಾಯಕ ನೀವೂ, ನಿನ್ನನ್ನು ಪ್ರಾರ್ಥಿಸದೆ ಮತ್ತು ನೆನಪಿಸಿಕೊಳ್ಳದೆ ಒಂದು ದಿನವೂ ಹೋಗುವುದಿಲ್ಲ, ಜನ್ಮ ದಿನದ ಶುಭಾಶಯಗಳು. ನೀವು ಎಲ್ಲಿದ್ದರೂ ನೀವು ರಾಕಿಂಗ್. ಎನ್ನು ಕಮೆಂಟ್‌ಗಳು ಬಂದಿವೆ.

ಪ್ರೇಕ್ಷಕರ ಅಚ್ಚು ಮೆಚ್ಚಿನ ನಟ ಆಗಿದ್ದ ಸುಶಾಂತ್ ಸಿಂಗ್!
34 ವರ್ಷ ವಯಸ್ಸಿಗೆ ಆತ್ಮಹತ್ಯೆಗೆ ಶರಣಾಗಿರುವ ಸುಶಾಂತ್ ಅವರು ಕಿರುತೆರೆಯಲ್ಲಿ ಮಿಂಚಿ ನಂತರ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದವರು. ಪವಿತ್ರಾ ರಿಸ್ತಾ ಸೀರಿಯಲ್‌ನಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡು ಮನೆ ಮಾತಾಗಿದ್ದರು. ಮೊದಲಿಗೆ ಅಭಿಶೇಕ್ ಕಪೂರ್ ಅವರ ಕಾಯ್ ಪೋ ಚೇ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚೇತನ್ ಭಗತ್ ಕಾದಂಬರಿ ದಿ ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್ ಆಧಾರಿತ ಚಿತ್ರ ಇದಾಗಿದೆ. ಝಲಕ್ ದಿಕ್ಲಾ ಜಾ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಮಿಂಚಿದ್ದ ಸುಶಾಂತ್ ತಮ್ಮದೇ ಅಭಿಮಾನಿ ವರ್ಗ ಹೊಂದಿದ್ದರು.


Click it and Unblock the Notifications











