ಸುಶಾಂತ್ ಸಿಂಗ್ ಆತ್ಮಹತ್ಯೆ ಹಿಂದೆ ಪ್ರೇಯಸಿ ರಿಯಾ ಕೈವಾಡ: ಬಾಡಿಗಾರ್ಡ್ ಆರೋಪ

ಸುಶಾಂತ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆ ಜೋರಾಗಿ ನಡೆಯುತ್ತಿದೆ. ಈ ಪ್ರಕರಣದಲ್ಲಿ ಬಾಲಿವುಡ್ ನ ಸಾಕಷ್ಟು ಮಂದಿಯನ್ನು ವಿಚಾರಣೆ ಮಾಡಲಾಗಿದೆ. ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಸಿಂಗ್ ತಂದೆ ದೂರು ದಾಖಲಿಸಿದ ಬಳಿಕ ಪ್ರಕರಣ ಮತ್ತಷ್ಟು ಬೆಳವಣಿಗೆ ಪಡೆದುಕೊಂಡಿದೆ.

ಈಗ ಸುಶಾಂತ್ ಸಿಂಗ್ ಬಾಡಿ ಗಾರ್ಡ್ ರಿಯಾ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಕೆ ಸಿಂಗ್, ರಿಯಾ ವಿರುದ್ಧ ಮಾಡಿರುವ ಆರೋಪ ಸರಿಯಾಗೆ ಇದೆ ಎಂದು ಹೇಳಿದ್ದಾರೆ. ಸುಶಾಂತ್ ಆತ್ಮಹತ್ಯೆ ಹಿಂದೆ ರಿಯಾ ಕೈವಾಡವಿದೆ ಎಂದು ಬಾಡಿಗಾರ್ಡ್ ಹೇಳಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿ ಜೊತೆ ಮಾತನಾಡಿದ ಸುಶಾಂತ್ ಬಾಡಿಗಾರ್ಡ್ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

ಸುಶಾಂತ್ ಯಾವಾಗಲು ನಿದ್ರಿಸುತ್ತಿದ್ದರು

ಸುಶಾಂತ್ ಯಾವಾಗಲು ನಿದ್ರಿಸುತ್ತಿದ್ದರು

ರಿಯಾ ಮತ್ತು ಅವರ ಆಪ್ತರು ಸುಶಾಂತ್ ಸಿಂಗ್ ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ಮಾಡುತ್ತಿದ್ದರು. ಆದರೆ ಸುಶಾಂತ್ ಯಾವಾಗಲು ನಿದ್ರಿಸುತ್ತಿದ್ದರು ಎಂದು ಹೇಳಿದ್ದಾರೆ. ಸುಶಾಂತ್ ಅಪಾರ್ಟ್ ಮೆಂಟ್ ಅನ್ನು ರಿಯಾ ಮತ್ತು ಅವರು ಕುಟುಂಬದವರು ಹೇಗೆ ಪಾರ್ಟಿಗಳಿಗೆ ಬಳಸುತ್ತಿದ್ದರು ಎಂದು ಹೇಳಿದ್ದಾರೆ.

ಮನೆಯ ಕೆಲಸದವರನ್ನು ಬದಲಾಯಾಸಿದ್ದಾರೆ

ಮನೆಯ ಕೆಲಸದವರನ್ನು ಬದಲಾಯಾಸಿದ್ದಾರೆ

ರಿಯಾ ಬಂದ ಬಳಿಕ ಸುಶಾಂತ್ ಮನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಿದ್ದಾರೆ. ನನ್ನನ್ನು ಬಿಟ್ಟು ಉಳಿದ ಎಲ್ಲಾ ಸಿಬ್ಬಂದಿಯನ್ನು ಬದಲಾಯಿಸಿದ್ದಾರೆ. ಸುಶಾಂತ್ ಆತ್ಮಹತ್ಯೆ ಹಿಂದೆ ರಿಯಾ ಕೈವಾಡವಿದೆ ಎಂದು ಎನಿಸುತ್ತಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಬಾಡಿಗಾರ್ಡ್ ಹೇಳಿದ್ದಾರೆ.

ಯೂರೋಪ್ ಗೆ ಹೋಗಿಬಂದ ಬಳಿಕ ಅನಾರೋಗ್ಯ ತುತ್ತಾಗಿದ್ದರು

ಯೂರೋಪ್ ಗೆ ಹೋಗಿಬಂದ ಬಳಿಕ ಅನಾರೋಗ್ಯ ತುತ್ತಾಗಿದ್ದರು

ಸುಶಾಂತ್ ಹೆಚ್ಚಿನ ಸಮಯ ನಿದ್ರಿಸುತ್ತಿದ್ದರು. ಔಷಧಿ ತೆಗೆದುಕೊಂಡ ಬಳಿಕ ನಿದ್ರೆಮಾಡುತ್ತಿದ್ದರು. ಆದರೆ ಮಿತಿಮೀರಿದ ಸೇವನೆಯ ಬಗ್ಗೆ ಗೊತ್ತಿಲ್ಲ. ಯೂರೋಪ್ ಪ್ರವಾಸ ಹೋಗಿ ಬಂದ ಬಳಿಕ ಸುಶಾಂತ್ ಆರೋಗ್ಯ ಹಾಳಾಗಿತ್ತು. ಯಾವಾಗಲು ಹಾಸಿಗೆಯ ಮೇಲೆ ಇರುತ್ತಿದ್ದರು. ರಿಯಾ ಚಕ್ರವರ್ತಿ ಪರಿಚಯವಾಗುವ ಮೊದಲು ಸುಶಾಂತ್ ಸದಾ ಸಕ್ರೀಯರಾಗುತ್ತಿದ್ದರು. ಈಜುವುದು, ರನ್ನಿಂಗ್, ಜಿಮ್ ಅಂತ ಸದಾ ಬ್ಯುಸಿ ಇರುತ್ತಿದ್ದರು. ಎಂದು ಸುಶಾಂತ್ ಬಾಡಿಗಾರ್ಡ್ ಹೇಳಿದ್ದಾರೆ.

ಸುಶಾಂತ್ ಮನೆಯನ್ನು ರಿಯಾ ನೋಡಿಕೊಳ್ಳುತ್ತಿದ್ದರು

ಸುಶಾಂತ್ ಮನೆಯನ್ನು ರಿಯಾ ನೋಡಿಕೊಳ್ಳುತ್ತಿದ್ದರು

ರಿಯಾ, ಸುಶಾಂತ್ ಮನೆಗೆ ಬರುವ ಮೊದಲು ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್ ಸುಶಾಂತ್ ಮನೆಯಲ್ಲಿ ಇದ್ದರು. ರಿಯಾ ಬಂದ ಬಳಿಕ ಸುಶಾಂತ್ ಮನೆಯಲ್ಲಿ ರಿಯಾ ಸ್ನೇಹಿತರು ಮಾತ್ರ ಬರುತ್ತಿದ್ದರು. ಸುಶಾಂತ್ ಆನಾರೋಗ್ಯದಿಂದ ಬಳಲುತ್ತಿದ್ದಿದ್ದರಿಂದ ಎಲ್ಲವೂ ರಿಯಾ ಕೈಯಲ್ಲಿತ್ತು.

ಮಹೇಶ್ ಭಟ್ ಮನೆಗೆ ಡ್ರಾಪ್ ಮಾಡಿದ್ದೀನಿ

ಮಹೇಶ್ ಭಟ್ ಮನೆಗೆ ಡ್ರಾಪ್ ಮಾಡಿದ್ದೀನಿ

ಸುಶಾಂತ್ ಮನೆಯಲ್ಲಿಯೆ ಹೆಚ್ಚಾಗಿ ಇರುತ್ತಿದ್ದರು. ತುಂಬಾ ಸರಳ ವ್ಯಕ್ತಿ. ಮನೆಯ ಊಟವನ್ನೆ ಹೆಚ್ಚಾಗಿ ಮಾಡುತ್ತಿದ್ದರು. ಹೊರಗಡೆಯ ಊಟ ತಿನ್ನುತ್ತಿರಲಿಲ್ಲ. ಸುಶಾಂತ್ ಗೆ ಔಷಧಿಯನ್ನು ರಿಯಾ ಸಾಕಷ್ಟು ಬಾರಿ ಲೋಕಲ್ ಸ್ಟೋರ್ ಗಳಲ್ಲಿ ಖರೀದಿಸಿದ್ದಾರೆ. ನಾನು ರಿಯಾ ಅವರನ್ನು ಒಮ್ಮೆ ನಿರ್ಮಾಪಕ ಮಹೇಶ್ ಭಟ್ ಕಚೇರಿಗೆ ಕಾರಿನಲ್ಲಿ ಡ್ರಾಪ್ ಮಾಡಿದ್ದೇನೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಸುಶಾಂತ್ ಬಾಡಿಗಾರ್ಡ್ ಹೇಳಿದ್ದಾರೆ.

More from Filmibeat

English summary
Sushant Singh Rajput bodyguard allegations against Rhea Chakraborty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X