ಸುಶಾಂತ್ ಸಿಂಗ್ ಅಂತ್ಯಕ್ರಿಯೆ: ಕುಟುಂಬಸ್ಥರು, ಸ್ನೇಹಿತರಿಂದ ಕಣ್ಣೀರಿನ ವಿದಾಯ

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅಂತ್ಯ ಕ್ರಿಯೆ ಮುಂಬೈನ ಪವನ್ ಹ್ಯಾನ್ಸ್ ಚಿತಾಗಾರದಲ್ಲಿ ನಡೆಯಿತು. ಸುಶಾಂತ್ ಸಿಂಗ್ ಜೂನ್ 14 ಭಾನುವಾರ ಮುಂಬೈನ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

Recommended Video

Sushanth Singh Rajput's dad collapsed after hearing his son's news | Filmibeat Kannada

ಇಂದು (ಜೂನ್ 15) ಸಂಜೆ 5 ಗಂಟೆಗೆ ಸುಶಾಂತ್ ಸಿಂಗ್ ಅವರ ಅಂತ್ಯಕ್ರಿಯೆ ನೆರವೇರಿತು. ಸುಶಾಂತ್ ಸಿಂಗ್ ತಂದೆ ಮತ್ತು ಇಬ್ಬರು ಸಹೋದರಿಯರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಅಂತ್ಯಕ್ರಿಯೆ ವೇಳೆ ಕುಟುಂಬದವರು, ಸ್ನೇಹಿತರು ಮತ್ತು ಬಾಲಿವುಡ್ ನ ಕೆಲವೇ ಕೆಲವು ಗಣ್ಯರು ಮಾತ್ರ ಬಾಗಿಯಾಗಿ ಅಂತಿಮ ವಿದಾಯ ಹೇಳಿದರು.

ಅಂತ್ಯಕ್ರಿಯೆ ವೇಳೆ ಮುಂಬೈನಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಮಳೆಯನ್ನು ಲೆಕ್ಕಿಸದೆ ಬಾಲಿವುಡ್ ಗಣ್ಯರು ಸುಶಾಂತ್ ಸಿಂಗ್ ಅಂತಿಮ ದರ್ಶನ ಪಡೆದರು. ಸುಶಾಂತ್ ಜೊತೆ ಅಭಿನಯಿಸಿದ್ದ, ನಟಿ ಕೃತಿ ಸನೂನ್, ಶ್ರದ್ಧಾ ಕಪೂರ್, ವರುಣ್ ಶರ್ಮಾ, ನಟ ವಿವೇಕ್ ಒಬೆರಾಯ್, ವರುಣ್ ಶರ್ಮಾ, ಅಭಿಷೇಕ್ ಕಪೂರ್ ಹಾಜರಿದ್ದರು. ಸುಶಾಂತ್ ಸಿಂಗ್ ರೂಮರ್ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್ ಅಂತಿಮ ದರ್ಶನ ಪಡೆದರು.

Sushant Singh Rajput Crimination At Vile Parle In Mumbai

ಅಂತಿಮ ದರ್ಶನ ಪಡೆದು ಮಾಧ್ಯಮದ ಜೊತೆ ಮಾತನಾಡಿದ ವಿವೇಕ್ ಒಬೆರಾಯ್, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ, ಖಿನ್ನತೆ ಬರಲು ಬಿಡಬೇಡಿ. ಸರಿಯಾದ ಸಮಯದಲ್ಲಿ ಸಹಾಯ ಪಡೆಯಿರಿ ಎಂದು ಹೇಳಿದ್ದಾರೆ.

ನಿನ್ನೆ ನಿಧನರಾಗಿದ್ದ ಸುಶಾಂತ್ ಸಿಂಗ್ ಅವರ ಮೃತ ದೇಹವನ್ನು ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ನಿನ್ನ ರಾತ್ರಿ ಮರಣೋತ್ತರ ಪರೀಕ್ಷೆ ನಂತರ, ಸುಶಾಂತ್ ನೇಣು ಬಿಗಿದುಕೊಂಡು ಸಾವನ್ನಪ್ದಿರುವುದಾಗಿ ದೃಢಪಡಿಸಿದ್ದಾರೆ.

More from Filmibeat

English summary
Sushant Singh Rajput crimination at Vile Parle In Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X