ಸುಶಾಂತ್ ಕಷ್ಟದಲ್ಲಿದ್ದಾಗ ಯಾರು ಕೇಳಲಿಲ್ಲ: ಬಾಲಿವುಡ್ ವಿರುದ್ಧ ಕೆಂಡಕಾರಿದ ಕೇಶ ವಿನ್ಯಾಸಕಿ
ಸುಶಾಂತ್ ಸಿಂಗ್ ಖಿನ್ನತೆಗೆ ಒಳಗಾಗಿದ್ದರು, ಪ್ರೇಮ ವೈಫಲ್ಯವಾಗಿತ್ತು, ಛೇ ಇಷ್ಟು ಚಿಕ್ಕ ವಯಸ್ಸಿನಲ್ಲಿಯೆ ಹೀಗಾಗಬಾರದಿತ್ತು, ಇಂತಹ ನಿರ್ಧಾರವೇಕೆ ತೆಗೆದುಕೊಂಡರು, ಸುದ್ದಿ ಕೇಳಿ ಆಘಾತವಾಯಿತು, ಮಾತೆ ಬರುತ್ತಿಲ್ಲ ಎಂದು ಸುಶಾಂತ್ ಸಾವಿನ ಸುದ್ದಿ ಕೇಳಿ ಟ್ವೀಟ್ ಮಾಡಿದ ಬಾಲಿವುಡ್ ಮಂದಿಯ ವಿರುದ್ಧ ಖ್ಯಾತ ಕೇಶ ವಿನ್ಯಾಸಕಿ ಸಪ್ನಾ ಭವಾನಿ ಕೆಂಡಕಾರಿದ್ದಾರೆ.
Recommended Video
ಕಳೆದ ಕೆಲವು ತಿಂಗಳಿಂದ ಸುಶಾಂತ್ ಸಿಂಗ್ ಖಿನ್ನತೆಗೆ ಒಳಗಾಗಿದ್ದರು ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಸುಶಾಂತ್ ಯಾಕೆ ಖಿನ್ನತೆಗೆ ಒಳಗಾಗಿದ್ದರು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮುಂದೆ ಓದಿ...

ಕಷ್ಟಪಟ್ಟು ಬೆಳೆದು ಬಂದ ನಟ
ಸುಶಾಂತ್ ಸಿಂಗ್ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗ ಯಾರು ಅವರ ಸಹಾಯಕ್ಕೆ ನಿಲ್ಲಲಿಲ್ಲ ಎಂದು ಕೇಶ ವಿನ್ಯಾಸಕಿ ಸಪ್ನಾ ಭವಾನಿ ಬಹಿರಂಗ ಪಡಿಸಿದ್ದಾರೆ. ಸುಶಾಂತ್ ಸಿಂಗ್ ತುಂಬಾ ಕಷ್ಟಪಟ್ಟು ಬಣ್ಣದ ಲೋಕಕ್ಕೆ ಬಂದಿದ್ದಾರೆ. ಸ್ಟಾರ್ ನಟನಾಗಿ ಗುರುತಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ, ಅವಮಾನಗಳನ್ನು ಎದುರಿಸಿದ್ದಾರೆ. ಆದರೆ ಯಾರು ಸುಶಾಂತ್ ಸಿಂಗ್ ಸಹಾಯಕ್ಕೆ ಬಂದಿರಲಿಲ್ಲ. ಇದೆಲ್ಲವನ್ನೂ ಮೀರಿ ಸುಶಾಂತ್ ಬಾಲಿವುಡ್ ನಲ್ಲಿ ಸ್ಟಾರ್ ಆಗಿ ಖ್ಯಾತಿಗಳಿಸಿದ್ದರು.

ಟ್ವಿಟ್ಟರ್ ನಲ್ಲಿ ಕಣ್ಣೀರು ಹಾಕುವ ನಾಟಕವೇಕೆ
ಇಂದು ಸುಶಾಂತ್ ನಿಧನದ ಸುದ್ದಿ ಕೇಳಿ ಇಡೀ ಬಾಲಿವುಡ್ ಬೇಸರ ವ್ಯಕ್ತಪಡಿಸುತ್ತಿದೆ, ಹೀಗಾಗಬಾರದಿತ್ತು ಎನ್ನುತ್ತಿದೆ. ಸ್ಟಾರ್ ನಟರೆಲ್ಲ ಟ್ವೀಟ್ ಮಾಡಿ ಮಾತುಗಳೆ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಕಷ್ಟದಲ್ಲಿದ್ದಾಗ ಯಾರು ಸಹಾಯಕ್ಕೆ ಬಾರದವರು, ಈಗ ಕಣ್ಣೀರು ಹಾಕುವ ನಾಟಕವೇಕೆ ಎಂದು ಸಪ್ನಾ ಭವಾನಿ ಪ್ರಶ್ನಿಸಿದ್ದಾರೆ.

ಸಪ್ನಾ ಭವಾನಿ ಟ್ವೀಟ್
"ಕಳೆದ ಕೆಲವು ವರ್ಷಗಳಿಂದ ಸುಶಾಂತ್ ತುಂಬಾ ಕಠಿಣ ಸಮಯವನ್ನು ಎದುರಿಸುತ್ತಿದ್ದರು ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಬಾಲಿವುಡ್ ನಲ್ಲಿ ಯಾರು ಅವರ ಪರ ನಿಂತಿಲ್ಲ. ಅಥವಾ ಸಹಾಯ ಹಸ್ತ ನೀಡಲಿಲ್ಲ. ಈಗ ಎಲ್ಲರೂ ಟ್ವೀಟ್ ಮಾಡುತ್ತಿದ್ದಾರೆ. ಇಲ್ಲಿ ಯಾರು ನಿಮ್ಮ ಸ್ನೇಹಿತರಿಲ್ಲ ಸುಶಾಂತ್" ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸುಶಾಂತ್ ಗೆ ಬಾಲಿವುಡ್ ನಲ್ಲಿ ಯಾರೋಬ್ಬರು ಸ್ನೇಹಿತರಿರಲಿಲ್ಲ, ಏಕಾಂಗಿಯಾಗಿದ್ದರು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಅಲಿಯಾ, ಕರಣ್, ದೀಪಿಕಾ ವಿರುದ್ಧ ನೆಟ್ಟಿಗರ ಆಕ್ರೋಶ
ಸುಶಾಂತ್ ಸಿಂಗ್ ಸಾವಿನ ಸುದ್ದಿ ಕೇಳಿ ಅಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಕರಣ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಇವರ ಟ್ವೀಟ್ ವಿರುದ್ಧ ನೆಟ್ಟಿರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅಲಿಯಾ ಸುಶಾಂತ್ ಸಿಂಗ್ ಅಂದರೆ ಯಾರು ಎಂದು ಪ್ರಶ್ನಿಸಿದ್ದರು, ಕರಣ್ ಜೋಹರ್ ಅವಕಾಶನೆ ನೀಡಿರಲಿಲ್ಲ ಇನ್ನೂ ದೀಪಿಕಾ ಮದುವೆಗೆ ಆಹ್ವಾನವೇ ನೀಡದೆ ಅವಮಾನ ಮಾಡಿದ್ದರು. ಪಿಕೆ ಸಿನಿಮಾದಲ್ಲಿ ಸುಶಾಂತ್ ಗೆ ಚುಂಬನ ನೀಡಲು ಅನುಷ್ಕಾ ಶರ್ಮಾ ನಿರಾಕರಿಸಿದ್ದರಂತೆ. ಸುಶಾಂತ್ ಅವರನ್ನು ಬಾಲಿವುಡ್ ಮಂದಿ ಒಪ್ಪಿಕೊಂಡಿರಲಿಲ್ಲ. ಬಾಲಿವುಡ್ ತನ್ನನ್ನು ಸ್ವೀಕರಿಸಿಲ್ಲ ಎನ್ನುವ ಬೇಸರ ಸುಶಾಂತ್ ಅವರನ್ನು ಕಾಡುತ್ತಿತ್ತು.


Click it and Unblock the Notifications











