twitter
    For Quick Alerts
    ALLOW NOTIFICATIONS  
    For Daily Alerts

    'ಸುಶಾಂತ್ ಸಾವು ಕೊಲೆಯಲ್ಲ, ಆತ್ಮಹತ್ಯೆ': ಏಮ್ಸ್ ವಿಧಿವಿಜ್ಞಾನ ತಂಡದ ವರದಿ

    |

    'ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಕೊಲೆಯಲ್ಲ, ಅದು ಆತ್ಮಹತ್ಯೆ' ಎಂದು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನ ವಿಧಿವಿಜ್ಞಾನ ತಜ್ಞರ ತಂಡದ ಮುಖ್ಯಸ್ಥರಾದ ಡಾ. ಸುಧೀರ್ ಗುಪ್ತಾ ಸಿಬಿಐಗೆ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ಸುಶಾಂತ್ ಸಿಂಗ್ ರಜಪೂತ್‌ಗೆ ವಿಷ ನೀಡಲಾಗಿದೆ ಹಾಗೂ ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದನ್ನ ಏಮ್ಸ್ ವರದಿ ತಳ್ಳಿ ಹಾಕಿದೆ. ಏಮ್ಸ್ ವರದಿ ಸಿಬಿಐ ಅಧಿಕಾರಿಗಳ ಕೈಸೇರಿದ್ದು, ಸುಶಾಂತ್ ಪ್ರಕರಣ ಬಹುತೇಕ ಅಂತ್ಯವಾದಂತೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

    ಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ಗೆ ಅಭಿಪ್ರಾಯ ಸಲ್ಲಿಸಿದ ಏಮ್ಸ್ ವೈದ್ಯರುಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ಗೆ ಅಭಿಪ್ರಾಯ ಸಲ್ಲಿಸಿದ ಏಮ್ಸ್ ವೈದ್ಯರು

    ಮರಣೋತ್ತರ ಪರೀಕ್ಷೆಯಲ್ಲೂ ಆತ್ಮಹತ್ಯೆ

    ಮರಣೋತ್ತರ ಪರೀಕ್ಷೆಯಲ್ಲೂ ಆತ್ಮಹತ್ಯೆ

    ಈ ಹಿಂದೆ ಮರಣೋತ್ತರ ಪರೀಕ್ಷೆಯಲ್ಲೂ ಸುಶಾಂತ್ ಅವರ ಸಾವು ಆತ್ಮಹತ್ಯೆ ಎಂದು ವರದಿ ಬಂದಿತ್ತು. ಸುಶಾಂತ್ ಸಾವಿನ ಮೇಲೆ ಅನುಮಾನ ಹೆಚ್ಚಾಗಿದ್ದ ಕಾರಣ ಹಾಗೂ ಕುಟುಂಬಸ್ಥರ ದೂರಿನ ಹಿನ್ನೆಲೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ.

    ಮಾನಸಿಕ ಖಿನ್ನತೆ ಪ್ರಮುಖ ಕಾರಣ

    ಮಾನಸಿಕ ಖಿನ್ನತೆ ಪ್ರಮುಖ ಕಾರಣ

    ಅಂದ್ಹಾಗೆ, ಜೂನ್ 14 ರಂದು ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ದೇಹ ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಿತ್ತು.

    ಡ್ರಗ್ಸ್ ಪ್ರಕರಣ ಪ್ರಗತಿಯಲ್ಲಿದೆ

    ಡ್ರಗ್ಸ್ ಪ್ರಕರಣ ಪ್ರಗತಿಯಲ್ಲಿದೆ

    ಆದ್ರೆ, ಸುಶಾಂತ್ ಅವರ ಕುಟುಂಬ ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ ಏಳು ಜನರ ವಿರುದ್ಧ ದೂರು ದಾಖಲಿಸಿದ್ದರು. ತನಿಖೆ ವೇಳೆ ಡ್ರಗ್ಸ್ ಆಯಾಮ ಬೆಳಕಿಗೆ ಬಂದ ಕಾರಣ ಎನ್‌ಸಿಬಿ ಮಧ್ಯಪ್ರವೇಶಿಸಿದೆ. ಈ ನಿಟ್ಟಿನಲ್ಲಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರನ್ನು ಎನ್‌ಸಿಬಿ ಬಂಧಿಸಿ ಜೈಲಿಗೆ ಕಳುಹಿಸಿದೆ.

    Recommended Video

    Abhishek Ambarish ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಟ್ಟ ದುನಿಯಾ ಸೂರಿ | Bad Manners | Oneindia Kannada
    ಸಿಬಿಐ ತನಿಖೆ ಮುಗಿದಿಲ್ಲ

    ಸಿಬಿಐ ತನಿಖೆ ಮುಗಿದಿಲ್ಲ

    ಏಮ್ಸ್ ವರದಿಯಂತೆ ಸುಶಾಂತ್ ಸಿಂಗ್ ಸಾವು ಕೊಲೆಯಲ್ಲ ಎಂದು ತಿಳಿದು ಬಂದಿದೆ. ಆದರೆ, ಸಿಬಿಐ ಅಧಿಕಾರಿಗಳು ಇನ್ನೂ ತನಿಖೆ ಮುಗಿಸಿಲ್ಲ. ಏಮ್ಸ್ ವರದಿ ಬಗ್ಗೆ ಸಹ ಸಿಬಿಐ ಮಾಹಿತಿ ನೀಡಿಲ್ಲ. ಸಿಬಿಐ ವರದಿ ಮೇಲೆ ಹೆಚ್ಚಿನ ಕುತೂಹಲವಿದ್ದು, ಬೇರೆ ಏನಾದರೂ ವಿಷಯಗಳು ಬೆಳಕಿಗೆ ಬರಬಹುದಾ ಎಂದು ನಿರೀಕ್ಷಿಸಲಾಗಿದೆ.

    English summary
    SSR death probe: AIIMS forensic panel rules out murder in the findings submitted to the CBI.
    Saturday, October 3, 2020, 14:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X