For Quick Alerts
  ALLOW NOTIFICATIONS  
  For Daily Alerts

  ಬಹಳ ದಿನದಿಂದ ತಲೆಮರೆಸಿಕೊಂಡಿದ್ದ ಸುಶಾಂತ್ ಸಿಂಗ್ ಸ್ನೇಹಿತ ಅರೆಸ್ಟ್

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯ ಬಂಧನವಾಗಿದೆ. ಬಹಳ ದಿನಗಳಿಂದ ತಲೆಮರೆಸಿಕೊಂಡಿದ್ದ ಸುಶಾಂತ್ ಸಿಂಗ್ ಸ್ನೇಹಿತ ಕುನಾಲ್ ಜಾನಿಯನ್ನು ಎನ್‌ಸಿಬಿ ಅಧಿಕಾರಿಗಳು ಮುಂಬೈನ್ ಖಾರ್ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

  ''ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿವಂಗತ ನಟ ಸುಶಾಂತ್ ಸಿಂಗ್ ಗೆಳಯ ಕುನಾಲ್ ಜಾನಿಯನ್ನು ಮುಂಬೈ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ'' ಎಂದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

  ಸುಶಾಂತ್ ಸಿಂಗ್ ಫ್ಲ್ಯಾಟ್ ಸ್ನೇಹಿತ ಸಿದ್ಧಾರ್ಥ್ ಬಂಧಿಸಿದ ಎನ್‌ಸಿಬಿಸುಶಾಂತ್ ಸಿಂಗ್ ಫ್ಲ್ಯಾಟ್ ಸ್ನೇಹಿತ ಸಿದ್ಧಾರ್ಥ್ ಬಂಧಿಸಿದ ಎನ್‌ಸಿಬಿ

  ಕುನಾಲ್ ಜಾನಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಇಂಡಿಯಾ ಟುಡೇಗೆ ಪ್ರತಿಕ್ರಿಯಿಸಿದ್ದು, "ಡ್ರಗ್ ಪೆಡ್ಲರ್‌ಗಳೊಂದಿಗಿನ ಸಂಪರ್ಕ ಮತ್ತು ಕಳೆದ ವರ್ಷ ಎನ್‌ಸಿಬಿ ಭೇದಿಸಿದ ಡ್ರಗ್ ಸಿಂಡಿಕೇಟ್ ಬಗ್ಗೆ ಕುನಾಲ್ ಜಾನಿಯನ್ನು ತನಿಖೆ ನಡೆಸಲಾಗುತ್ತಿದೆ'' ಎಂದು ಮಾಹಿತಿ ನೀಡಿದ್ದಾರೆ.

  ಕುನಾಲ್ ಜಾನಿ ಮಾದಕ ದ್ರವ್ಯ ಮಾರಾಟ ಮತ್ತು ಗ್ರಾಹಕರಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

  ಸಿದ್ಧಾರ್ಥ್ ಪಿತಾನಿಗೆ ಜಾಮೀನು ತಿರಸ್ಕಾರ

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮತ್ತೊಬ್ಬ ಸ್ನೇಹಿತ ಹಾಗೂ ಫ್ಲ್ಯಾಟ್‌ಮೆಟ್ ಸಿದ್ಧಾರ್ಥ್ ಪಿಥಾನಿಯನ್ನು ಎನ್‌ಸಿಬಿ ಪೊಲೀಸರು ಬಂಧಿಸಿದ್ದರು. ಸಿದ್ಧಾರ್ಥ್ ಪರ ವಕೀಲರು ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಆದರೆ, ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಮೇ 26 ರಂದು ಹೈದರಾಬಾದ್‌ನಲ್ಲಿ ಮುಂಬೈ ಮೂಲದ ಎನ್‌ಸಿಬಿ ಪೊಲೀಸರು ಸಿದ್ದಾರ್ಥ್‌ರನ್ನು ಬಂಧಿಸಿದ್ದರು. ಸುಶಾಂತ್ ಸಿಂಗ್ ಸಾವಿಗೂ ಮುನ್ನ ಫ್ಲ್ಯಾಟ್‌ನಲ್ಲಿ ನಾಲ್ಕು ಜನರು ಇದ್ದರು ಎಂಬ ಮಾಹಿತಿ ಇದೆ. ಅದರಲ್ಲಿ ಸಿದ್ಧಾರ್ಥ್ ಪಿಥಾನಿ ಸಹ ಒಬ್ಬರು.

  ಸುಶಾಂತ್ ಸಿಂಗ್ ಆತ್ಮಹತ್ಯೆ?

  ಜೂನ್ 14, 2020ರಲ್ಲಿ ಮುಂಬೈನ ಫ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಶವ ಪತ್ತೆಯಾಗಿತ್ತು. ಅನುಮಾನಸ್ಪಾದ ಸಾವು ಎಂಬ ಕಾರಣಕ್ಕೆ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಸ್ನೇಹಿತರು, ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದರು. ಬಳಿಕ, ಈ ಕೇಸ್‌ ಸಿಬಿಐಗೆ ವರ್ಗಾವಣೆ ಆಯಿತು. ಇದೇ ಪ್ರಕರಣದಲ್ಲಿ ಎನ್‌ಸಿಬಿ ಅಧಿಕಾರಿಗಳು ಸಹ ತನಿಖೆ ನಡೆಸಿದ್ದು, ಹಲವು ಸೆಲೆಬ್ರಿಟಿಗಳು ಹಾಗೂ ಅವರ ಜೊತೆ ಸಂಪರ್ಕದಲ್ಲಿದ್ದ ಆಪ್ತರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ಕೇಸ್‌ನಲ್ಲಿ ಸುಶಾಂತ್ ಸಿಂಗ್ ಗೆಳತಿ, ನಟಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್ ಮತ್ತು ಸ್ಯಾಮುಯೆಲ್ ಮಿರಾಂಡಾ ಮತ್ತು ದೀಪೇಶ್ ಸಾವಂತ್ ಸೇರಿದಂತೆ ಹಲವರನ್ನು ಎನ್‌ಸಿಬಿ ಬಂಧಿಸಿತ್ತು. ನಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

  English summary
  Sushant Singh Rajput Drugs cases: NCB arrested hotelier Kunal Jani. He was a close friend of Rajput and was absconding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X