twitter
    For Quick Alerts
    ALLOW NOTIFICATIONS  
    For Daily Alerts

    ಸಾವಿಗೂ ಮುನ್ನ ಸುಶಾಂತ್ ಗೂಗಲ್ ಮಾಡಿದ್ದೇನು? ತನಿಖೆಯ ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ಮುಂಬೈ ಪೊಲೀಸರು

    |

    ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ತನಿಖೆಯ ಸಂಪೂರ್ಣ ಮಾಹಿತಿ ಮಾಡಿದ್ದಾರೆ. ಈ ವಿಚಾರವಾಗಿ ಇಂದು ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಪ್ರೇಸ್ ಮೀಟ್ ನಡೆಸಿದ್ದರು.

    Recommended Video

    ಇನ್ಮುಂದೆ ಸೇನೆಯ ಬಗ್ಗೆ ಸಿನಿಮಾ ಮಾಡೋದು ಅಷ್ಟು ಸುಲಭ ಇಲ್ಲ | Filmibeat Kannada

    ಸುಶಾಂತ್ ಸಾವಿಗೂ ಮೊದಲು ಗೂಗಲ್ ನಲ್ಲಿ ಹುಡುಕಿದ್ದೇನು ಎನ್ನುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಸುಶಾಂತ್ ಸಾಯುವ ಕೆಲವು ಕ್ಷಣಗಳ ಮೊದಲು ತಮ್ಮ ಮೊಬೈಲ್ ನಲ್ಲಿ ತನ್ನ ಬಗ್ಗೆಯೇ ಹುಡುಕಿದ್ದಾರಂತೆ. ಅಲ್ಲದೆ ಆತ್ಮಹತ್ಯೆ ಮಾಡಿಕೊಂಡ ದಿಶಾ ಸಾಲಿಯಾನ್ ಬಗ್ಗೆಯುೂ ಸರ್ಚ್ ಮಾಡಿದ್ದಾರಂತೆ. ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್ ಬಗ್ಗೆಯೂ ಸರ್ಚ್ ಮಾಡಿದ್ದಾರಂತೆ. ಜೊತೆಗೆ ಶಾಕಿಂಗ್ ಅಂದರೆ "ನೋವು ರಹಿತ ಸಾವು" ಎನ್ನುವ ಬಗ್ಗೆಯು ಗೂಗಲ್ ನಲ್ಲಿ ಹುಡುಕಾಡಿರುವ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಮುಂದೆ ಓದಿ...

    ನೆಪೋಟಿಸಂ ಆರೋಪ: ಜಾಹ್ನವಿ ಕಪೂರ್ ಸಿನಿಮಾದ ಟ್ರೈಲರ್ ನಲ್ಲಿಲ್ಲ ಕರಣ್ ಜೋಹರ್ ಹೆಸರುನೆಪೋಟಿಸಂ ಆರೋಪ: ಜಾಹ್ನವಿ ಕಪೂರ್ ಸಿನಿಮಾದ ಟ್ರೈಲರ್ ನಲ್ಲಿಲ್ಲ ಕರಣ್ ಜೋಹರ್ ಹೆಸರು

    ಸುಮಾರು 2 ಗಂಟೆಗಳ ಕಾಲ ಸುಶಾಂತ್ ಹೆಸರನ್ನು ಸರ್ಚ್ ಮಾಡಿದ್ದಾರೆ

    ಸುಮಾರು 2 ಗಂಟೆಗಳ ಕಾಲ ಸುಶಾಂತ್ ಹೆಸರನ್ನು ಸರ್ಚ್ ಮಾಡಿದ್ದಾರೆ

    ಸುಶಾಂತ್ ಸಿಂಗ್ ಸಾಯುವ ಹಿಂದಿನ ದಿನ ರಾತ್ರಿ ಅವರ ಹೆಸರನ್ನು ಗೂಗಲ್ ಮಾಡಿದ್ದಾರಂತೆ. ರಾತ್ರಿ ಸುಮಾರು 2 ಗಂಟೆಗಳ ಕಾಲ ಸುಶಾಂತ್ ಹೆಸರನ್ನು ಗೂಲ್ ಮಾಡಿ ನೋಡಿರುವ ಮಾಹಿತಿ ನೀಡಿದ್ದಾರೆ. ಜೊತೆಗೆ ದಿಶಾ ಸಾವಿನ ಬಗ್ಗೆಯೂ ಸುಶಾಂತ್ ಹುಡುಕಿದ್ದಾರಂತೆ. ಸುಶಾಂತ್ ಮಾಜಿ ಮ್ಯಾನೇಜರ್ ದಿಯಾ ಸುಶಾಂತ್ ಸಾಯುವ 5 ದಿನಗಳ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದರು. ದಿಶಾ ಆತ್ಮಹತ್ಯೆ ಪ್ರಕರಣದಲ್ಲಿ ಸುಶಾಂತ್ ಹೆಸರನ್ನು ಎಳೆದು ತರುತ್ತಿರುವ ಬಗ್ಗೆ ಸುಶಾಂತ್ ತಲೆಕೆಡಿಸಿಕೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

    ಆತ್ಮಹತ್ಯೆ ಹಿಂದಿನ ರಾತ್ರಿ ಯಾವುದೆ ಪಾರ್ಟಿ ನಡೆದಿಲ್ಲ

    ಆತ್ಮಹತ್ಯೆ ಹಿಂದಿನ ರಾತ್ರಿ ಯಾವುದೆ ಪಾರ್ಟಿ ನಡೆದಿಲ್ಲ

    ಜೊತೆಗೆ ಸುಶಾಂತ್ ಸಿಂಗ್ ನಿಧನಹೊಂದಿದ ಹಿಂದಿನ ದಿನ ರಾತ್ರಿ ಪಾರ್ಟಿ ನಡೆದಿತ್ತು. ಎನ್ನುವ ಮಾತು ಕೇಳಿಬರುತ್ತಿತ್ತು. ಈ ಬಗ್ಗೆ ಮಾತನಾಡಿದ ಪೊಲೀಸ್ ಆಯುಕ್ತ ಯಾವುದೇ ಪಾರ್ಟಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತನಿಖೆಯಲ್ಲಿ ಯಾವುದೇ ರಾಜಕಾರಣಿಗಳನ್ನು ವಿಚಾರಣೆ ಮಾಡಿಲ್ಲ ಎಂದು ಹೇಳಿದ್ದಾರೆ.

    ಸುಶಾಂತ್ ಜೊತೆಗಿನ ರಕ್ಷಾಬಂಧನದ ನೆನಪನ್ನು ಹಂಚಿಕೊಂಡ ಸಹೋದರಿ ಶ್ವೇತಾ ಸಿಂಗ್ಸುಶಾಂತ್ ಜೊತೆಗಿನ ರಕ್ಷಾಬಂಧನದ ನೆನಪನ್ನು ಹಂಚಿಕೊಂಡ ಸಹೋದರಿ ಶ್ವೇತಾ ಸಿಂಗ್

    ರಿಯಾ ಖಾತೆಗೆ 15 ಕೋಟಿ ವರ್ಗಾವಣೆಯಾಗಿಲ್ಲ

    ರಿಯಾ ಖಾತೆಗೆ 15 ಕೋಟಿ ವರ್ಗಾವಣೆಯಾಗಿಲ್ಲ

    ರಿಯಾ ಚಕ್ರವರ್ತಿ, ಸುಶಾಂತ್ ಖಾತೆಯಿಂದ 15 ಕೋಟಿ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಸುಶಾಂತ್ ಸಿಂಗ್ ತಂದೆ ದೂರು ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ ಆಯುಕ್ತರು ಸುಶಾಂತ್ ಸಿಂಗ್ ಖಾತೆಯಿಂದ ರಿಯಾಗೆ 15 ಕೋಟಿ ವರ್ಗಾವಣೆಯಾಗಿಲ್ಲ ಎಂದಿದ್ದಾರೆ. ಸುಶಾಂತ್ ಖಾತೆಯಲ್ಲಿ 4.5 ಕೋಟಿ ಇದೆ ಎಂದು ಹೇಳಿದ್ದಾರೆ.

    56 ಜನರ ವಿಚಾರಣೆ ಮಾಡಲಾಗಿದೆ

    56 ಜನರ ವಿಚಾರಣೆ ಮಾಡಲಾಗಿದೆ

    ಈಗಾಗಲೆ ರಿಯಾ ಚಕ್ರವರ್ತಿ ಸೇರಿದ್ದಂತೆ ಮುಂಬೈ ಪೊಲೀಸರು 56 ಜನರನ್ನು ವಿಚಾರಣೆ ಮಾಡಿದ್ದಾರೆ. ಚಿತ್ರೋದ್ಯಮದ ತೀವ್ರ ಪೈಪೋಟಿ, ಗುಂಪುಗಾರಿಕೆ ಸುಶಾಂತ್ ಸಿಂಗ್ ಅವರನ್ನು ಆತ್ಮಹತ್ಯೆಗೆ ದೂಡಲಾಗಿದೆ ಎನ್ನುವ ಆರೋಪದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ. ಸುಶಾಂತ್ ಸಿಂಗ್ ಕುಟುಂಬ ಪಾಟ್ನಾದಲ್ಲಿ ದೂರು ದಾಖಲಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಂಬೈ ಪೊಲೀಸ್ ಆಯುಕ್ತ " ಜೂನ್ 16ರಂದು ಸುಶಾಂತ್ ಸಿಂಗ್ ಕುಟುಂಬದವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅವರ ಕುಟುಂಬದವರು ಯಾರ ಮೇಲೂ ಅನುಮಾನವಿಲ್ಲ ಎಂದು ಹೇಳಿಕೆ ನೀಡಿದ್ದಾರೆ" ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

    ರಿಯಾ ಅವರನ್ನು ಎರಡು ಬಾರಿ ವಿಚಾರಣೆ ಮಾಡಿದ್ದಾರೆ

    ರಿಯಾ ಅವರನ್ನು ಎರಡು ಬಾರಿ ವಿಚಾರಣೆ ಮಾಡಿದ್ದಾರೆ

    ಇನ್ನೂ ಪಾಟ್ನಾ ಪೊಲೀಸರು ರಿಯಾ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಮಾತನಾಡಿರುವ ಮುಂಬೈ ಪೊಲೀಸರು ರಿಯಾ ಚಕ್ರವರ್ತಿಯನ್ನು ಎರಡು ಬಾರಿ ವಿಚಾರಣೆ ಮಾಡಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಹಲವು ಬಾರಿ ಪೊಲೀಸ್ ಠಾಣೆಗೆ ಕರೆಯಲಾಗಿದೆ. ರಿಯಾ ಇರುವ ಸ್ಥಳದ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾದ್ಯವಿಲ್ಲ ಎಂದು ಮುಂಬೈ ಪೊಲೀಸ್ ಮುಖ್ಯಸ್ಥ, ಪಾಟ್ನಾ ಪೊಲೀಸ್ ತಂಡದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

    ಎಲ್ಲಾ ಆಂಗಲ್ ನಿಂದನೂ ತನಿಖೆ ನಡೆಯುತ್ತಿದೆ

    ಎಲ್ಲಾ ಆಂಗಲ್ ನಿಂದನೂ ತನಿಖೆ ನಡೆಯುತ್ತಿದೆ

    ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಂಗಲ್ ನಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಚಿತ್ರೋದ್ಯಮದ ಪೈಪೋಟಿ, ಹಣಕಾಸಿನ ವಹಿವಾಟು ಮತ್ತು ಆರೋಗ್ಯ ಎಲ್ಲಾ ವಿಚಾರವಾಗಿ ತನಿಖೆ ನಡೆಯುತ್ತಿದೆ. ಈಗಾಗಲೆ ಸುಶಾಂತ್ ಸಿಂಗ್ ಮೊಬೈಲ್ ಮತ್ತು ಲ್ಯಾಪ್ ಟಾಪ್ ಅನ್ನು ತಾಂತ್ರಿಕ ಸಾಕ್ಷಿಯಾಗಿ ತೆಗೆದುಕೊಂಡಿದ್ದೀವಿ. ನಾವು ಎಲ್ಲವನ್ನೂ ಪರಿಶೀಲಿಸುತ್ತೇವೆ" ಹೇಳಿದ್ದಾರೆ.

    English summary
    Sushant Singh Rajput googled his own name, Dishan Salian link and Painless death.
    Tuesday, August 4, 2020, 9:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X