twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಕೇಸ್: ಸುಪ್ರೀಂಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಕೆ

    |

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಹೊಸ ಬೆಳವಣಿಗೆಯೊಂದು ನಡೆದಿದೆ. ಸುಶಾಂತ್ ಜಿಮ್ ಪಾಟ್ನರ್ ಸುನಿಲ್ ಶುಕ್ಲಾ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸುಪ್ರೀಂಕೋರ್ಟ್ನಲ್ಲಿ ಹಸ್ತಕ್ಷೇಪ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

    Recommended Video

    Upendra ತೆಲುಗು, ತಮಿಳಿನಲ್ಲಿ ಹೆಚ್ಚಾಗಿ ಸಿನಿಮಾ ಮಾಡದಿರಲು ಇದೇ ಕಾರಣ

    ಸುಶಾಂತ್ ಸಿಂಗ್ ಅವರ ಸಿನಿ ವೃತ್ತಿ ಜೀವನವನ್ನು ಅಂತ್ಯಗೊಳಿಸಲು ಯಾರೋ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿರುವ ಶುಕ್ಲಾ, ಮುಂಬೈ ಪೊಲೀಸರ ಬದಲು ಸಿಬಿಐ ತನಿಖೆ ನಡೆಸುವಂತೆ ಸೂಚನೆ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ.

    ಬಾಲಿವುಡ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಶುಕ್ಲಾ 'ಸುಶಾಂತ್ ಸಿಂಗ್ ಅವರ ಡ್ರೈವ್ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿಲ್ಲ, ಆನ್‌ಲೈನ್ ಫ್ಲಾಟ್‌ಫಾರಂನಲ್ಲಿ ತೆರೆಕಂಡಿತ್ತು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಮಕಾವುದಲ್ಲಿ ನಡೆದ ಐಫಾ ಪ್ರಶಸ್ತಿ ಸಮಾರಂಭದಲ್ಲಿ ಸುಶಾಂತ್ ಅವರನ್ನು ಉದ್ದೇಶಪೂರ್ವಕವಾಗಿ ಅಪಹಾಸ್ಯ ಮಾಡಲಾಗಿದೆ ಎಂದು ದೂರಿದ್ದಾರೆ.

    ಮಾಜಿ ಪ್ರೇಯಸಿ ಅಂಕಿತಾ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ EMI ಕಟ್ಟುತ್ತಿದ್ರಾ ಸುಶಾಂತ್ ಸಿಂಗ್?ಮಾಜಿ ಪ್ರೇಯಸಿ ಅಂಕಿತಾ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ EMI ಕಟ್ಟುತ್ತಿದ್ರಾ ಸುಶಾಂತ್ ಸಿಂಗ್?

    Sushant Singh Rajputs gym partner files intervention application in supreme court

    ಸುಶಾಂತ್ ಸಿಂಗ್ ಅವರ ಬಗ್ಗೆ ನನ್ನ ಬಳಿಕ ಇನ್ನು ಹೆಚ್ಚಿನ ಮಾಹಿತಿ ಇದೆ ಎಂದು ಹೇಳಿಕೊಂಡಿರುವ ಶುಕ್ಲಾ, ಪೊಲೀಸರ ಮುಂದೆ ಹೇಳಿಕೆ ನೀಡಲು ಇಷ್ಟಪಡುತ್ತೇನೆ ಎಂದಿದ್ದಾರೆ. ಶುಕ್ಲಾ ಅವರ ದೂರಿನ ಬಳಿಕವೂ ವಿಚಾರಣೆ ಅಥವಾ ಹೇಳಿಕೆ ಪಡೆಯಲು ಸಂಪರ್ಕಿಸಿಲ್ಲ. ಹಾಗಾಗಿ, ಸುಪ್ರೀಂಕೋರ್ಟ್‌ನಲ್ಲಿ ಹಸ್ತಕ್ಷೇಪ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

    ಅಂದ್ಹಾಗೆ, ಜೂನ್ 14 ರಂದು ಬಾಲಿವುಡ್ ನಟ ಸುಶಾಂತ್ ಮುಂಬೈನ ಬಾಂದ್ರಾದಲ್ಲಿರುವ ಫ್ಲ್ಯಾಟ್‌ನಲ್ಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದರು. ಈ ಸಾವಿಗೆ ಸಂಬಂಧಿಸಿದಂತೆ ಮುಂಬೈ ಹಾಗೂ ಪಾಟ್ನಾದಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಬಿಹಾರ ಸರ್ಕಾರ ಸಿಬಿಐಗೆ ಕೇಸ್ ನೀಡಿದೆ. ಜಾರಿ ನಿರ್ದೇಶನಾಲಯ ಇಲಾಖೆಯೂ ಮನಿ ಲ್ಯಾಂಡರಿಂಗ್ ಕೇಸ್ ನಮೂದಿಸಿದೆ.

    English summary
    Sushant Singh Rajputs gym partner files intervention application in SC, alleged that attempts were made by certain people to end Sushant's movie career.
    Saturday, August 15, 2020, 20:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X