ಸುಶಾಂತ್ ಡೈರಿ ಬಿಚ್ಚಿಟ್ಟ ಸತ್ಯ: 2020ರಲ್ಲಿ ಅಭಿಮಾನಿಗಳಿಗೆ ಕಾದಿತ್ತು ಸರ್ಪ್ರೈಸ್

ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟು ಎರಡು ತಿಂಗಳು ಕಳೆದು ಹೋಗಿದೆ. ಆದರೆ, ಸುಶಾಂತ್ ಸಾವಿನ ಸುತ್ತ ಹುಟ್ಟಿಕೊಂಡ ಅನುಮಾನಗಳಿಗೆ ಸ್ಪಷ್ಟ ಉತ್ತರ ಮಾತ್ರ ಸಿಗುವ ಲಕ್ಷಣ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ನಟ ಪ್ರಕರಣದಲ್ಲಿ ಹೊಸ ಹೊಸ ಅಂಶಗಳು ಬೆಳಕಿಗೆ ಬರುತ್ತಲೆ ಇದೆ.

Recommended Video

ಎಲ್ಲಾ ನಮಗೆ ಬೇಕು ಅನ್ನೋರಲ್ಲ ನಾವು | ShivaRajKumar | DCM Ashwath Narayan | Filmibeat Kannada

ಆ ಕಡೆ ಸುಪ್ರೀಂಕೋರ್ಟ್‌ನಲ್ಲಿ ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಅರ್ಜಿಯ ವಿಚಾರಣೆಯೂ ನಡೆಯುತ್ತಿದೆ. ಪಾಟ್ನಾ ಪೊಲೀಸರಿಂದ ಮುಂಬೈ ಪೊಲೀಸರಿಗೆ ಕೇಸ್ ರವಾನೆ ಬಗ್ಗೆ ರಿಯಾ ಚಕ್ರವರ್ತಿ ಅರ್ಜಿ ಸಲ್ಲಿಸಿದ್ದರು. ಸಿಬಿಐ ತನಿಖೆಗೆ ಆಗ್ರಹಿಸಿ ಸುಶಾಂತ್ ಪೋಷಕರು ಅರ್ಜಿ ಸಲ್ಲಿಸಿದ್ದರು. ಇಷ್ಟೆಲ್ಲಾ ಬೆಳವಣಿಗೆಯ ಮಧ್ಯೆ ಸುಶಾಂತ್ ಅವರ ಡೈರಿ ಸದ್ದು ಮಾಡ್ತಿದೆ.

2020ರಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದರು ಸುಶಾಂತ್ ಸಿಂಗ್ ಎಂದು ಟೈಮ್ಸ್ ನೌ ವರದಿ ಮಾಡಿದೆ. ಹಾಗಾದ್ರೆ, 2020ರಲ್ಲಿ ಸುಶಾಂತ್ ಮಾಡಬೇಕು ಎಂದುಕೊಂಡಿದ್ದ ಕೆಲಸಗಳೇನು? ಮುಂದೆ ಓದಿ....

ಹಾಲಿವುಡ್ ಎಂಟ್ರಿಗೆ ಸಿದ್ಧತೆ!

ಹಾಲಿವುಡ್ ಎಂಟ್ರಿಗೆ ಸಿದ್ಧತೆ!

ಸುಶಾಂತ್ ಸಿಂಗ್ ರಜಪೂತ್ ಅವರ ಡೈರಿಯಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ, 2020 ತಮ್ಮ ವೃತ್ತಿ ಜೀವನಕ್ಕೆ ಬಹಳ ಪ್ರಾಮುಖ್ಯತೆ ನೀಡಿದ್ದರು. ಹಾಲಿವುಡ್ ಸಿನಿಮಾರಂಗಕ್ಕೆ ಹೋಗಬೇಕು ಎಂಬ ಆಕಾಂಕ್ಷೆ ಹೊಂದಿದ್ದರು ಎಂಬ ವಿಚಾರ ಡೈರಿಯಿಂದ ಬಹಿರಂಗವಾಗಿದೆ. ಅದಕ್ಕಾಗಿ ಸಿದ್ಧತೆ ಸಹ ನಡೆಸಿದ್ದರು ಎನ್ನಲಾಗಿದೆ.

ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ

ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ

2020ರಲ್ಲಿ ತಮ್ಮದೇ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆ ಸ್ಥಾಪಿಸುವ ಬಗ್ಗೆ ಯೋಚಿಸಿದ್ದರು ಎಂಬ ವಿಚಾರ ಹೊರಬಿದ್ದಿದೆ. ಕಂಟೈಂಟ್ ಕ್ರಿಯೇಟರ್ ತಂಡವನ್ನು ನಿರ್ಮಿಸುವುದು, ಎಫ್‌ಟಿಐಐಐ (ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ) ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸುವುದು, ಶಿಕ್ಷಣ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದರು ಎಂಬ ಅಂಶಗಳು ಡೈರಿಯಿಂದ ತಿಳಿದಿದೆ.

ಮದುವೆ ಬಗ್ಗೆಯೂ ಚರ್ಚಿಸಿದ್ದರು

ಮದುವೆ ಬಗ್ಗೆಯೂ ಚರ್ಚಿಸಿದ್ದರು

ಅಂಕಿತಾ ಲೋಖಂಡೆ ಜೊತೆಗೆ ಬ್ರೇಕ್ ಅಪ್ ಆದ ಬಳಿಕ ರಿಯಾ ಚಕ್ರವರ್ತಿ ಜೊತೆ ಲಿವ್ ಇನ್ ರಿಲೇಶನ್ ಷಿಪ್‌ನಲ್ಲಿದ್ದರು ಎಂದು ಹೇಳಲಾಗಿದೆ. ಇಬ್ಬರು ಮದುವೆಯಾಗಲು ಸಹ ಚರ್ಚಿಸಿದ್ದರು ಎಂದು ಆಪ್ತ ಮೂಲಗಳು ಹೇಳಿವೆ. 2020ರಲ್ಲಿ ಈ ನಿರ್ಧಾರವನ್ನು ಘೋಷಿಸುವ ಬಗ್ಗೆಯೂ ಸುಶಾಂತ್ ಯೋಚಿಸಿದ್ದರು.

ಸುಶಾಂತ್ ಸಹೋದರಿ ಸಿಬಿಐ ತನಿಖೆಗೆ ಆಗ್ರಹ!

ಸುಶಾಂತ್ ಸಹೋದರಿ ಸಿಬಿಐ ತನಿಖೆಗೆ ಆಗ್ರಹ!

ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಕೃತಿ ಇಂದು ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. 'ನಮ್ಮ ಅಣ್ಣನ ಸಾವಿಗೆ ನ್ಯಾಯ ಸಿಗಬೇಕು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು' ಎಂದು ಆಗ್ರಹಿಸಿದ್ದಾರೆ. ಸುಪ್ರೀಂಕೋರ್ಟ್ ಸಹ ಸುಶಾಂತ್ ಸಿಂಗ್ ಪ್ರಕರಣವನ್ನು ಯಾರು ತನಿಖೆ ಮಾಡಬೇಕು ಎಂಬ ನಿರ್ಧರವನ್ನು ಇಂದು ಹೇಳುವ ಸಾಧ್ಯತೆ ಇದೆ.

More from Filmibeat

English summary
Sushant singh Rajput Dairy: he was planning to enter hollywood in this year and also start production house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X