ಸುಶಾಂತ್ ಸಿಂಗ್ ಅರ್ಧಕ್ಕೆ ಬಿಟ್ಟುಹೋದ ಸಿನಿಮಾಗಳು

ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್‌ನ ಉದಯೋನ್ಮುಖ ಹಾಗೂ ಪ್ರತಿಭಾವಂತ ನಟ. ಆತ ಇಂದು ಮುಂಬೈನ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

Recommended Video

ರೀಲ್ ನಲ್ಲಿ ಪರಿಹಾರ ಕೊಟ್ಟ ಸುಶಾಂತ್ ರಿಯಲ್ ಲೈಫ್ ನಲ್ಲಿ ಸೋತಿದ್ಯಾಕೆ? |Sushant Singh Rajput|FILMIBEAT KANNADA

ಕಿರುತೆರೆಯಿಂದ ಬೆಳೆದು ಬಂದ ಸುಶಾಂತ್ ಸಿಂಗ್ ರಜಪೂತ್, ಬಹು ಎತ್ತರವಿದ್ದ ಬಾಲಿವುಡ್ ನಾಯಕ ಪಟ್ಟವನ್ನು ಕಷ್ಟಪಟ್ಟು ಪಡೆದಿದ್ದರು. ಇನ್ನೂ ಎತ್ತರಕ್ಕೆ ಏರುವ ಸಂದರ್ಭದಲ್ಲಿಯೇ ಹಠಾತ್ತನೆ ಸಾವಿಗೆ ಶರಣಾಗಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ಬಾಲಿವುಡ್‌ಗೆ ಬರಸಿಡಿಲಿನಂತೆ ಎರಗಿದೆ. ಎಲ್ಲಾ ನಟರು, ನಿರ್ದೇಶಕರು ಸುಶಾಂತ್ ಸಾವಿನ ಸುದ್ದಿ ಕೇಳಿ ಆಘಾತಗೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ತಮಗಾದ ಆಘಾತವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಹುಬೇಡಿಕೆಯ ನಟರಲ್ಲಿ ಒಬ್ಬರು ಸುಶಾಂತ್

ಬಹುಬೇಡಿಕೆಯ ನಟರಲ್ಲಿ ಒಬ್ಬರು ಸುಶಾಂತ್

ಅದ್ಭುತ ನಟರಾಗಿದ್ದ ಸುಶಾಂತ್ ಬಾಲಿವುಡ್‌ನಲ್ಲಿ ಬೇಡಿಕೆಯ ಯುವನಟ ಸಹ ಆಗಿದ್ದರು. ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದ ಅವರ ಕೈಲಿ ಈಗಲೂ ಹಲವು ಸಿನಿಮಾಗಳು ಇದ್ದವು.

ಬಿಡುಗಡೆಯಾದ ಕೊನೆಯ ಸಿನಿಮಾ 'ಡ್ರೈವ್'

ಬಿಡುಗಡೆಯಾದ ಕೊನೆಯ ಸಿನಿಮಾ 'ಡ್ರೈವ್'

ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯದಾಗಿ ಬಿಡುಗಡೆ ಆದ ಸಿನಿಮಾ 'ಡ್ರೈವ್'. ನೆಟ್‌ಫ್ಲಿಕ್ಸ್‌ನಲ್ಲಿ ನವೆಂಬರ್ 1 ರಂದು ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಾಯಕಿಯಾಗಿ ನಟಿಸಿದ್ದರು. ಸಿನಿಮಾ ಅಷ್ಟೇನೂ ದೊಡ್ಡ ಖ್ಯಾತಿ ಗಳಿಸಲಿಲ್ಲ.

ದಿಲ್ ಬೇಚಾರ ಬಿಡುಗಡೆ ಆಗುವುದಿತ್ತು

ದಿಲ್ ಬೇಚಾರ ಬಿಡುಗಡೆ ಆಗುವುದಿತ್ತು

ಸುಶಾಂತ್ ಅವರ 'ದಿಲ್ ಬೇಚಾರ' ಸಿನಿಮಾ ಬಿಡುಗಡೆಗೆ ತಯಾರಾಗಿತ್ತು. ಮೇ 8 ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು ಆದರೆ ಲಾಕ್‌ಡೌನ್ ಕಾರಣದಿಂದ ಸಿನಿಮಾ ಬಿಡುಗಡೆ ಆಗಲಿಲ್ಲ. ಇದೊಂದು ಪ್ರೇಮಕತೆಯಾಗಿದ್ದು ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಸಹ ಇದ್ದಾರೆ.

ಮಾತುಕತೆ ಹಂತದಲ್ಲಿದ್ದ ಸಿನಿಮಾಗಳು

ಮಾತುಕತೆ ಹಂತದಲ್ಲಿದ್ದ ಸಿನಿಮಾಗಳು

ಇದರ ಹೊರತಾಗಿ ದಕ್ಷಿಣ ಭಾರತದ ಸಿನಿಮಾವೊಂದರ ರೀಮೇಕ್‌ನಲ್ಲಿ ಸಹ ಸುಶಾಂತ್ ನಟಿಸಲಿದ್ದರು. ಇದರ ಜೊತೆಗೆ ಮಲ್ಟಿಸ್ಟಾರರ್ ಸಿನಿಮಾದಲ್ಲಿಯೂ ಸಹ ಸುಶಾಂತ್ ನಟಿಸುವವರಿದ್ದರು. ನೆಟ್‌ಫ್ಲಿಕ್ಸ್‌ ಒರಿಜಿನಲ್ಸ್‌ ಸಿನಿಮಾಕ್ಕೆ ಮಾತುಕತೆ ಸಹ ನಡೆಯುತ್ತಿತ್ತು.

More from Filmibeat

English summary
Sushant Singh Rajput movies yet to release. Dil Bechara movie sceduled to release on May 8.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X