twitter
    For Quick Alerts
    ALLOW NOTIFICATIONS  
    For Daily Alerts

    ಮುಂಬೈನಲ್ಲಿ ಬಲವಂತದ ಕ್ವಾರೆಂಟೈನ್: ಐಪಿಎಸ್ ಅಧಿಕಾರಿ ಬಿಡುಗಡೆ

    |

    ಮುಂಬೈನಲ್ಲಿ ಬಲವಂತವಾಗಿ ಕ್ವಾರೆಂಟೈನ್‌ಗೆ ಒಳಗಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖಾ ತಂಡದ ಮುಖ್ಯಸ್ಥ ವಿನಯ್ ತಿವಾರಿ ಅವರನ್ನು ಮುಂಬೈ ಮಹಾನಗರ ಪಾಲಿಕೆ ಕೊನೆಗೂ ಬಿಡುಗಡೆ ಮಾಡಿದೆ.

    Recommended Video

    Kushee Ravi Alias Dia Soup Photoshoot | Filmibeat Kannada

    ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ರಿಯಾ ಚಕ್ರವರ್ತಿ ಮತ್ತು ಇತರರು ಕಾರಣ ಎಂದು ಸುಶಾಂತ್ ತಂದೆ ಕೆ.ಕೆ. ಸಿಂಗ್ ಪಟ್ನಾ ಪೊಲೀಸರಿಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಅದರ ತನಿಖೆಗೆಂದು ಮುಂಬೈಗೆ ತೆರಳಿದ್ದರು. ನಾಲ್ವರು ಪೊಲೀಸರ ತಂಡ ಮೊದಲೇ ಮುಂಬೈಗೆ ತೆರಳಿ ಸುಶಾಂತ್ ಬ್ಯಾಂಕ್ ಖಾತೆಗಳ ವ್ಯವಹಾರಗಳನ್ನು ಪರಿಶೀಲನೆ ಮಾಡಿತ್ತು. ಹಾಗೆಯೇ ಕೆಲವರಿಂದ ಹೇಳಿಕೆಗಳನ್ನೂ ದಾಖಲಿಸಿಕೊಂಡಿತ್ತು.

    ಇದೇನು ಗೂಂಡಾ ರಾಜ್? ಮುಂಬೈ ಅಧಿಕಾರಿಗಳ ವಿರುದ್ಧ ಕಂಗನಾ ರಣಾವತ್ ಕಿಡಿಇದೇನು ಗೂಂಡಾ ರಾಜ್? ಮುಂಬೈ ಅಧಿಕಾರಿಗಳ ವಿರುದ್ಧ ಕಂಗನಾ ರಣಾವತ್ ಕಿಡಿ

    ಆದರೆ ಕೆಲವು ದಿನಗಳ ಬಳಿಕ ತಂಡವನ್ನು ಸೇರಿಕೊಳ್ಳಲು ತೆರಳಿದ್ದ ತಂಡ ಮುಖ್ಯಸ್ಥ, ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಮಾತ್ರ ಮುಂಬೈ ಅಧಿಕಾರಿಗಳು ಬಲವಂತವಾಗಿ ಕ್ವಾರೆಂಟೈನ್‌ಗೆ ಒಳಪಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

     Sushant Singh Rajputs Case Probe: IPS Vinay Tiwari Released On Friday By BMC

    ಆಗಸ್ಟ್ 15ರವರೆಗೂ ವಿನಯ್ ತಿವಾರಿ ಕ್ವಾರೆಂಟೈನ್‌ನಲ್ಲಿ ಇರಬೇಕು ಎಂದು ಅಧಿಕಾರಿಗಳು ತಿಳಿಸಿದ್ದರು. ವಿನಯ್ ಅವರು ಬಿಹಾರದಲ್ಲಿ ಕರ್ತವ್ಯಕ್ಕೆ ಮರಳಬೇಕಿದೆ. ಅವರು ಆಗಸ್ಟ್ 8ರ ಒಳಗೆ ಮುಂಬೈ ತೊರೆಯಲಿದ್ದಾರೆ ಎಂದು ಬಿಹಾರ ಪೊಲೀಸ್ ಇಲಾಖೆ ಪತ್ರ ಬರೆದಿತ್ತು. ಇದಕ್ಕೆ ಒಪ್ಪಿಕೊಂಡಿರುವ ಮಹಾರಾಷ್ಟ್ರ, ತಿವಾರಿ ಅವರನ್ನು ಹೋಮ್ ಕ್ವಾರೆಂಟೈನ್‌ನಿಂದ ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ತನಿಖೆಗೆಂದು ತೆರಳಿದ್ದ ಅಧಿಕಾರಿಯನ್ನು ಬಲವಂತವಾಗಿ ಕ್ವಾರೆಂಟೈನ್‌ಗೆ ಒಳಪಡಿಸಿದ್ದ ಘಟನೆಯನ್ನು ಸುಪ್ರೀಂಕೋರ್ಟ್‌ಗೆ ಕೊಂಡೊಯ್ಯುವುದಾಗಿ ಈ ಮೊದಲು ಬಿಹಾರ ಪೊಲೀಸರು ಹೇಳಿದ್ದರು.

    ಮುಂಬೈ ಪೊಲೀಸ್ Vs ಬಿಹಾರ ಪೊಲೀಸ್: ಸುಶಾಂತ್ ಸಾವಿನ ಹಿಂದೆ ಏನೆಲ್ಲಾ ಆಗುತ್ತಿದೆ?ಮುಂಬೈ ಪೊಲೀಸ್ Vs ಬಿಹಾರ ಪೊಲೀಸ್: ಸುಶಾಂತ್ ಸಾವಿನ ಹಿಂದೆ ಏನೆಲ್ಲಾ ಆಗುತ್ತಿದೆ?

    ಶುಕ್ರವಾರ ಸಂಜೆ ಐದು ಗಂಟೆ ಸುಮಾರಿಗೆ ಮುಂಬೈ ತೊರೆಯುವುದಾಗಿ ತಿವಾರಿ ತಿಳಿಸಿದ್ದಾರೆ. ಕ್ವಾರೆಂಟೈನ್ ಕೇಂದ್ರದಿಂದ ಖಾಸಗಿ ಕಾರ್‌ನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ವಿಮಾನದಲ್ಲಿ ಅವರು ಪಟ್ನಾಗೆ ಪ್ರಯಾಣಿಸಲಿದ್ದಾರೆ. ತಮ್ಮ ಪ್ರಯಾಣದ ಬುಕ್ಕಿಂಗ್ ಟಿಕೆಟ್ ಅನ್ನು ಅವರು ಬಿಎಂಸಿ ಅಧಿಕಾರಿಗಳಿಗೆ ತೋರಿಸಬೇಕಿದೆ.

    English summary
    IPS officer Vinay Tiwari who was quarantined by BMC when he reached Mumbai to probe Sushant Singh Rajput's case has been released on Friday morning.
    Friday, August 7, 2020, 10:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X