ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ವಿರುದ್ಧ ದೂರು ದಾಖಲು
ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ವಕೀಲರೊಬ್ಬರು ವಿವಿಧ ನಿರ್ಮಾಪಕರು ಮತ್ತು ನಿರ್ದೇಶಕರ ವಿರುದ್ಧ ದೂರು ನೀಡಿದ್ದರು. ಈಗ ಸುಶಾಂತ್ ಸಿಂಗ್ ಅವರ ಪ್ರೇಯಸಿ ಎನ್ನಲಾದ ನಟಿ ರಿಯಾ ಚಕ್ರಬೊರ್ತಿ ವಿರುದ್ಧವೂ ಬಿಹಾರದ ನ್ಯಾಯಾಲಯವೊಂದರಲ್ಲಿ ದೂರು ದಾಖಲಿಸಲಾಗಿದೆ.
ರಿಯಾ ಚಕ್ರಬೊರ್ತಿ ಮತ್ತು ಸುಶಾಂತ್ ಸಿಂಗ್ ಇಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದರು. ಅಲ್ಲದೆ, ಸುಶಾಂತ್ ಸಾಯುವ ಕೆಲವು ದಿನಗಳ ಮುನ್ನವಷ್ಟೇ ರಿಯಾ, ಅವರಿದ್ದ ಮನೆಯನ್ನು ತೊರೆದಿದ್ದರು ಎನ್ನಲಾಗಿದೆ. ಸಾಯುವ ಹಿಂದಿನ ದಿನ ರಾತ್ರಿ ರಿಯಾಗೆ ಕರೆ ಮಾಡಲು ಸುಶಾಂತ್ ಪ್ರಯತ್ನಿಸಿದ್ದರು ಎಂದೂ ಹೇಳಲಾಗಿದೆ.
ಸುಶಾಂತ್ ಸಾವಿಗೆ ರಿಯಾ ಅವರೇ ಕಾರಣ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸುತ್ತಿದ್ದಾರೆ. ರಿಯಾ ಮತ್ತು ನಿರ್ದೇಶಕ ಮಹೇಶ್ ಭಟ್ ಆಪ್ತರಾಗಿದ್ದು, ರಿಯಾ ಮೂಲಕ ಮಹೇಶ್ ಭಟ್ ಈ ಕೃತ್ಯ ಮಾಡಿಸಿದ್ದಾರೆ ಎಂದು ಆರೋಪ ಕೇಳಬಂದಿದೆ. ಮುಂದೆ ಓದಿ...

ಬುಧವಾರ ವಿಚಾರಣೆ
ಬಿಹಾರದ ಮುಜಪ್ಫರ್ ಪುರದಲ್ಲಿನ ಪಟಾಹಿ ಎಂಬ ಸ್ಥಳದ ನಿವಾಸಿ ಕುಂದನ್ ಕುಮಾರ್ ಎಂಬುವವರು ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಕೇಶ್ ಕುಮಾರ್ ಅವರ ಎದುರು ರಿಯಾ ಚಕ್ರಬೊರ್ತಿ ವಿರುದ್ಧ ದೂರು ನೀಡಿದ್ದಾರೆ. ಈ ಪ್ರಕರಣ ಜೂನ್ 24ರಂದು ವಿಚಾರಣೆಗೆ ಬರಲಿದೆ.

ಎರಡು ಸೆಕ್ಷನ್‌ಗಳ ಅಡಿ ಪ್ರಕರಣ
ಸುಶಾಂತ್ ಸಿಂಗ್ ಅವರನ್ನು ಆರ್ಥಿಕ ಹಾಗೂ ಮಾನಸಿಕವಾಗಿ ರಿಯಾ ಶೋಷಿಸಿದ್ದಾರೆ ಎಂದು ಕುಂದನ್ ಕುಮಾರ್ ಆರೋಪಿಸಿದ್ದಾರೆ. 'ನನ್ನ ಕಕ್ಷಿದಾರರು ಸುಶಾಂತ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಆತ್ಮಹತ್ಯೆಯಿಂದ ತೀವ್ರ ಬೇಸರಗೊಂಡಿದ್ದಾರೆ. ಐಪಿಸಿ ಸೆಕ್ಷನ್‌ಗಳಾದ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 420 (ವಂಚನೆ) ದೂರನ್ನು ನೀಡಿದ್ದಾರೆ' ಎಂದು ಅವರ ವಕೀಲ ಕಮಲೇಶ್ ತಿಳಿಸಿದ್ದಾರೆ.

ಎರಡನೆಯ ದೂರು
ಬಿಹಾರದ ಪಟ್ನಾ ಮೂಲದವರಾದ ಸುಶಾಂತ್ ಬಗ್ಗೆ ಅಲ್ಲಿನ ಜನರಿಗೆ ಅಪಾರ ಪ್ರೀತಿ ಇದೆ. ಅವರ ಸಾವಿನ ಹಿನ್ನೆಲೆಯಲ್ಲಿ ಉತ್ತರ ಬಿಹಾರದ ಪಟ್ಟಣ ಮುಜಫ್ಫರ್ ಪುರದಲ್ಲಿನ ಸಿಜೆಎಂ ನ್ಯಾಯಾಲಯದಲ್ಲಿ ದಾಖಲಾಗಿರುವ ಎರಡನೆಯ ಪ್ರಕರಣ ಇದು.

ಬಾಲಿವುಡ್‌ನ ಪ್ರಭಾವಿಗ ವಿರುದ್ಧ ದೂರು
ಇದಕ್ಕೂ ಮುನ್ನ ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಜಾ ಅವರು ಸಲ್ಮಾನ್ ಖಾನ್, ಆದಿತ್ಯ ಚೋಪ್ರಾ, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ ಮತ್ತು ಏಕ್ತಾ ಕಪೂರ್ ಸೇರಿದಂತೆ ಬಾಲಿವುಡ್ ನ ಅನೇಕ ಪ್ರಮುಖರ ವಿರುದ್ಧ ದೂರು ನೀಡಿದ್ದರು.


Click it and Unblock the Notifications











