ಸುಶಾಂತ್ ಸಿಂಗ್‌ನದ್ದು ಕೊಲೆಯಾ? ಚಿತ್ರಗಳು ಕೊಡುತ್ತಿವೆ ಸುಳಿವು?

ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿ ಇನ್ನೆರಡು ದಿನಕ್ಕೆ ಒಂದು ತಿಂಗಳಾಗುತ್ತದೆ. ಜೂನ್ 14 ರಂದು ಅವರು ಮುಂಬೈನ ತಮ್ಮ ನಿವಾಸದಲ್ಲಿ ನೇಣಿಗೆ ಕೊರಳೊಡ್ಡಿದ್ದರು.

Recommended Video

ಅಂದು ನನ್ನ ಅಮ್ಮನ ಕಾಲಿಗೆ ಬಿದ್ದು ಕೊಟ್ಟ ಮಾತನ್ನ ಉಳಿಸಿಕೊಂಡರು ಶಿವಣ್ಣ | Shiva Rajkumar | Filmibeat Kannada

ಅಂದಿನಿಂದಲೂ ಸುಶಾಂತ್ ಸಿಂಗ್ ಸಾವಿನ ಸುದ್ದಿಗಳು ಹರಿದಾಡುತ್ತಲೇ ಇವೆ. ಜೀವನದಲ್ಲಿ ಯಶಸ್ವಿ ಎನಿಸಿಕೊಂಡಿದ್ದ, ಸಾಕಷ್ಟು ಹಣ, ಹೆಸರು ಸಂಪಾದಿಸಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬುದನ್ನು ಹಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಯಾರದ್ದೋ ಪ್ರಬಲ ಪ್ರಭಾವ ಕಾರಣ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದರೆ. ಇನ್ನು ಕೆಲವರು ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೇ ಅಲ್ಲ. ಅದೊಂದು ಕೊಲೆ ಎಂದು ವಾದ ಮುಂದಿಡುತ್ತಿದ್ದಾರೆ. ತಮ್ಮ ವಾದಕ್ಕೆ ಸಾಕ್ಷಿಯಾಗಿ ಕೆಲವು ಚಿತ್ರಗಳನ್ನು ಸಹ ಮುಂದಿಡುತ್ತಾರೆ.

ನೆಟ್ಟಿಜನರ ತರ್ಕವನ್ನು ಪರಿಶೀಲಿಸೋಣ

ನೆಟ್ಟಿಜನರ ತರ್ಕವನ್ನು ಪರಿಶೀಲಿಸೋಣ

ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಹೇಳಿದ್ದಾರೆ. ಅದಾಗ್ಯೂ ಸುಶಾಂತ್‌ ಸಿಂಗ್‌ರದ್ದು ಕೊಲೆ ಎಂದು ಹೇಳುವವರ ವಾದವೇನು, ಅವರು ನೀಡುವ ತರ್ಕವೇನು ಎಂದು ಕುತೂಹಲಕ್ಕಾಗಿ ಈ ಲೇಖನದಲ್ಲಿ ಪರಿಶೀಲನೆ ಮಾಡಲಾಗಿದೆ.

ಸುಶಾಂತ್ ರದ್ದು ಆತ್ಮಹತ್ಯಯಾ, ಕೊಲೆಯಾ?

ಸುಶಾಂತ್ ರದ್ದು ಆತ್ಮಹತ್ಯಯಾ, ಕೊಲೆಯಾ?

ಸಾಮಾಜಿಕ ಜಾಲತಾಣದಲ್ಲಿ ಕೆಲವು ಖಾತೆಗಳಲ್ಲಿ ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ವಾದಗಳು ಹರಿದಾಡುತ್ತಿದ್ದು, ಇದಕ್ಕೆ ಸಾಕ್ಷ್ಯವಾಗಿ ಕೆಲವು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಸುಶಾಂತ್ ಸಿಂಗ್ ಅವರು ಸತ್ತಾಗ ತೆಗೆದ ಚಿತ್ರಗಳನ್ನು ಸಹ ಹಂಚಿಕೊಳ್ಳಲಾಗಿದೆ.

ಕುತ್ತಿಗೆಗೆ ಬೆಲ್ಟ್ ಸುತ್ತಿ ಕೊಲೆ?

ಕುತ್ತಿಗೆಗೆ ಬೆಲ್ಟ್ ಸುತ್ತಿ ಕೊಲೆ?

ಸುಶಾಂತ್ ಅವರ ಕತ್ತಿನ ಭಾಗದಲ್ಲಿ ಆಗಿರುವ ಗಾಯ ಹಗ್ಗದಿಂದ ಅಥವಾ ಬಟ್ಟೆ ಸುತ್ತಿಕೊಂಡಿದ್ದರಿಂದ ಆಗಿದ್ದಲ್ಲವಂತೆ. ಸುಶಾಂತ್ ಅವರ ಕತ್ತಿಗೆ ಬೆಲ್ಟ್‌ ಸುತ್ತಿ ಕುತ್ತಿಗೆ ಬಿಗಿಯಾಗಿಸಿ ಕೊಲ್ಲಲಾಗಿದೆ ಎನ್ನುತ್ತಾರೆ ಇದಕ್ಕೆ ಚಿತ್ರವೊಂದರ ಹೋಲಿಕೆಯನ್ನು ನೀಡಲಾಗಿದೆ.

ಹಸಿರು ಬಣ್ಣದ ದುಪಟ್ಟಾ ಬಳಕೆ

ಹಸಿರು ಬಣ್ಣದ ದುಪಟ್ಟಾ ಬಳಕೆ

ಸುಶಾಂತ್‌ ಸಿಂಗ್‌ನ ಆತ್ಮಹತ್ಯೆ ಮಾಡಿಕೊಳ್ಳಲು ಬಳಸಿದ್ದ ಹಸಿರು ಬಣ್ಣದ ದುಪಟ್ಟಾವನ್ನು ಗುರುತಿಸಿರುವ ಕೆಲವು ನೆಟ್ಟಿಗರು, ಅದು ಸುಶಾಂತ್‌ ನ ಮಾಜಿ ಗೆಳತಿ ರೆಹಾ ಚಕ್ರವರ್ತಿಯದ್ದು ಎಂದಿದ್ದಾರೆ. ಅದೇ ರೀತಿಯ ದುಪಟ್ಟಾ ತೊಟ್ಟು ಫೋಸ್ ಕೊಟ್ಟಿದ್ದ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಒಂದು ಇಂಚು ಅಂತರ ಮಾತ್ರವೇ ಇದೆ

ಒಂದು ಇಂಚು ಅಂತರ ಮಾತ್ರವೇ ಇದೆ

ಇನ್ನೊಂದು ವಾದದ ಪ್ರಕಾರ ಮಂಚದ ಮೇಲಿನಿಂದ ಫ್ಯಾನ್‌ ಕೇವಲ 5.11 ಅಡಿ ಎತ್ತರ ಇದೆಯಂತೆ. ಸುಶಾಂತ್ ಸಿಂಗ್ ಅವರ ಎತ್ತರ 5.10 ಹಾಗಿದ್ದಾಗ ಕೇವಲ ಒಂದು ಇಂಚು ಅಂತರದಲ್ಲಿ ನೇಣು ಹಾಕಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ವಾದವನ್ನೂ ಮುಂದಿಟ್ಟಿದ್ದಾರೆ.

ಸುಶಾಂಗ್ ಸಿಂಗ್ ಕಾಲು ಮುರಿಯಲಾಗಿತ್ತೆ?

ಸುಶಾಂಗ್ ಸಿಂಗ್ ಕಾಲು ಮುರಿಯಲಾಗಿತ್ತೆ?

ಇನ್ನೊಂದು ಚಿತ್ರದಲ್ಲಿ ಸುಶಾಂತ್ ಸಿಂಗ್ ಕಾಲನ್ನು ಯಾರೊ ಮುರಿದಿದ್ದಾರೆ. ಸಾಯುವ ಮುನ್ನವೇ ಅವರ ಕಾಲು ಬಿರಿದಿತ್ತು, ಯಾರೋ ಅವರಿಗೆ ಬಲವಾಗಿ ಹೊಡೆದಿದ್ದಾರೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಆದರೆ ಪೋಸ್ಟ್‌ ಮಾರ್ಟಮ್‌ನಲ್ಲಿ ಇದಿಲ್ಲ.

More from Filmibeat

English summary
Actor Sushant Singh death created many questions in social media. Few people raised question over Sushant Singh death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X