ಸುಶಾಂತ್ ಸಿಂಗ್ ಸಿನಿಮಾ ದಿಲ್ ಬೇಚಾರಾ ಟ್ರೇಲರ್ ಬಿಡುಗಡೆ: ಕಣ್ಣೀರು ತಡೆಯಲಾದೀತೆ?

ನಟ ಸುಶಾಂತ್ ಸಿಂಗ್ ಅಭಿನಯದ ಕೊನೆಯ ಸಿನಿಮಾ 'ದಿಲ್ ಬೇಚಾರಾ'ದ ಟ್ರೇಲರ್ ಇಂದು ಬಿಡುಗಡೆ ಆಗಿದೆ.

Recommended Video

Nikhil & Revathi GYM Workout : ಪ್ರಕೃತಿ ನಡುವೆ ನಿಖಿಲ್ ಕುಮಾರಸ್ವಾಮಿ-ರೇವತಿ ವರ್ಕ್‌ಔಟ್ | Filmiibeat Kannada

ಎರಡೂವರೆ ನಿಮಿಷದ ಟ್ರೇಲರ್‌ನಲ್ಲಿ ಸುಶಾಂತ್ ತುಂಬಿಕೊಂಡಿದ್ದಾರೆ. ಸುಶಾಂತ್ ಬದುಕಿದ್ದಿದ್ದರೂ ಇದೊಂದು ಒಳ್ಳೆಯ ಟ್ರೇಲರ್ರೇ ಎನಿಸಿಕೊಳ್ಳುತ್ತಿತ್ತು. ಸುಶಾಂತ್ ಇಲ್ಲದ ಹೊತ್ತಿನಲ್ಲಿ ಟ್ರೇಲರ್ ಗೆ ಅದರೊಳಗಿನ ಸನ್ನಿವೇಶಗಳಿಗೆ ವಿಶೇಷ ಭಾವುಕತನ ಪ್ರಾಪ್ತಿಯಾಗಿದೆ.

'ದಿಲ್ ಬೇಚಾರ' ಸಿನಿಮಾದ ಟ್ರೇಲರ್ ನೋಡಿದರೆ ಅರ್ಥವಾಗುತ್ತದೆ, ಸಿನಿಮಾದಲ್ಲಿ ಸುಶಾಂತ್ ಒಬ್ಬ ಜೀವನಪ್ರೀತಿ ತುಂಬಿದ, ತರಲೆ, ಕೀಟಲೆ, ತಮಾಷೆ ಪ್ರವೃತ್ತಿಯ ಯುವಕನ ಪಾತ್ರ ನಿರ್ವಹಿಸಿದ್ದಾರೆಂದು.

ಸಾವಿನಂಚಿನಲ್ಲಿರುವ ನಾಯಕಿಗೆ ಜೀವನ ಪ್ರೀತಿ ತುಂಬುವ ಪಾತ್ರ

ಸಾವಿನಂಚಿನಲ್ಲಿರುವ ನಾಯಕಿಗೆ ಜೀವನ ಪ್ರೀತಿ ತುಂಬುವ ಪಾತ್ರ

ಸಾವಿನಂಚಿನಲ್ಲಿರುವ ಕ್ಯಾನ್ಸರ್ ರೋಗಿಗೆ ಜೀವನ ಪ್ರೀತಿ ತುಂಬುವ ಪಾತ್ರ ಸುಶಾಂತ್ ಸಿಂಗ್‌ನದ್ದು, ಸಾವಿಗೆ ಹತ್ತಿರವಿರುವ ನಾಯಕಿಯನ್ನು ಪ್ರೇಮಿಸುವ ನಾಯಕನ ಪಾತ್ರ ಸುಶಾಂತ್‌ನದ್ದು. ಎಂಥಹಾ ವೈಚಿತ್ರ್ಯ, ಸ್ವತಃ ಸಾವಿನೆಡೆಗೆ ಹೋಗುತ್ತಿದ್ದ ಸುಶಾಂತ್ ಸಿನಿಮಾದಲ್ಲಿ ಮಾತ್ರ ವೈರುಧ್ಯದ ಪಾತ್ರ ನಿರ್ವಹಿಸಿದ್ದಾರೆ.

ನಗುತ್ತಲೇ ಅಳಿಸುವ ಸುಶಾಂತ್ ಸಿಂಗ್

ನಗುತ್ತಲೇ ಅಳಿಸುವ ಸುಶಾಂತ್ ಸಿಂಗ್

ಟ್ರೇಲರ್‌ನ ಬಹುಭಾಗ ಸುಶಾಂತ್ ನಗುತ್ತಲಿದ್ದಾರೆ, ಮರೆಯಾಗುವ ಮುನ್ನಾ ಅಂತಿಮ ನಗು ನಗುತ್ತಿರುವಂತೆ ಟ್ರೇಲರ್‌ ನೋಡುತ್ತಿರುವವರಿಗೆ ಅನ್ನಿಸುತ್ತದೆ. ಸುಶಾಂತ್ ಅಭಿಮಾನಿಗಳಿಗಂತೂ ಹೃದಯ ಭಾರ ಮಾಡುತ್ತದೆ ಸುಶಾಂತ್ ನಗು.

ಸುಶಾಂತ್ ಹೇಳಿದ ಸಂಭಾಷಣೆ ಇದು

ಸುಶಾಂತ್ ಹೇಳಿದ ಸಂಭಾಷಣೆ ಇದು

'ಯಾವಾಗ ಹುಟ್ಟುತ್ತೇವೆ, ಯಾವಾಗ ಸಾಯುತ್ತೇವೆ ಇದು ನಾವು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಹೇಗೆ ಬದುಕುತ್ತೇವೆ ಇದನ್ನು ನಾವು ಡಿಸೈಡ್ ಮಾಡಬಹುದು' ಟ್ರೇಲರ್‌ನಲ್ಲಿ ಸುಶಾಂತ್ ಹೇಳುವ ಸಂಭಾಷಣೆ ಇದು. ಅವರೇ ಹೇಳಿದ ಮಾತನ್ನು ಅವರೇ ಪಾಲಿಸಲಿಲ್ಲವಲ್ಲಾ ಎಂದು ಮನಸ್ಸು ಹಿಂಡಿದ ಅನುಭವಾಗುತ್ತದೆ ಸಂಭಾಷಣೆ ಕೇಳಿದಾಗ.

ಸುಶಾಂತ್ ಮೇಲೆ ಕಣ್ಣು ನೆಡುತ್ತದೆ

ಸುಶಾಂತ್ ಮೇಲೆ ಕಣ್ಣು ನೆಡುತ್ತದೆ

ಟ್ರೇಲರ್‌ನಲ್ಲಿ ಸುಶಾಂತ್ ಬಿಟ್ಟು ಇನ್ನೂ ಕೆಲವರಿದ್ದಾರೆ ಆದರೆ ಕಣ್ಣು ಸುಶಾಂತ್ ಬಿಟ್ಟು ಕದಲುವುದಿಲ್ಲ. ನಾಯಕಿ ಸಂಜನಾ ಸಂಗಿ ಮುದ್ದಾಗಿ ಕಾಣುತ್ತಾರೆ. ಸಿನಿಮಾದಲ್ಲಿ ನಟಿಸಿರುವ ಮತ್ತೊಬ್ಬ ಸ್ಟಾರ್ ನಟ ಸೈಫ್ ಅಲಿ ಖಾನ್ ಟ್ರೇಲರ್‌ನಲ್ಲಿ ಕಾಣುವುದಿಲ್ಲ.

More from Filmibeat

English summary
Sushant Singh Rajput's last movie Dil Bechara's trailer released on July 06.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X