ಸುಶಾಂತ್‌ಗಾಗಿ ಹುಡುಕುತ್ತಾ ಕಣ್ಣೀರಿಡುತ್ತಿದೆ ಅವರ ಮುದ್ದಿನ ನಾಯಿ
ಸುಶಾಂತ್ ಸಿಂಗ್ ಸಾವು ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ಸುಶಾಂತ್ ಅವರ ಮುದ್ದಿನ ನಾಯಿ ಫಡ್ಜ್ ಕೂಡ ಒಡೆಯನ ಅಗಲುವಿಕೆಯಿಂದ ಕಂಗಾಲಾಗಿದೆ. ಸುಶಾಂತ್ ಸಾವಿನ ಬಳಿಕ ಅವರ ನಾಯಿ ದಿಕ್ಕೆಟ್ಟಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಸುಶಾಂತ್ ಅವರು ತಮ್ಮ ಪ್ರೀತಿ ಫಡ್ಜ್ ಜತೆ ಆಡುತ್ತಿದ್ದ ಫೋಟೊ ಮತ್ತು ವಿಡಿಯೋಗಳು ವೈರಲ್ ಆಗಿವೆ. ಹಾಗೆಯೇ ಸುಶಾಂತ್ ಸಾವಿನ ಬಳಿಕ ಫಡ್ಜ್ ಮನೆಯ ಸುತ್ತಲೂ ಓಡುತ್ತಾ ಅವರನ್ನು ಹುಡುಕುವ ವಿಡಿಯೋ ಕಣ್ಣೀರು ತರುವಂತಿದೆ. ನಟ ಮನ್ವೀರ್ ಗುರ್ಜಾರ್ ಇತ್ತೀಚೆಗೆ ಸುಶಾಂತ್ ಅವರ ನಾಯಿಯ ಫೋಟೊಗಳನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಅದವುಗಳಲ್ಲಿ ಸುಶಾಂತ್ ಅವರ ಚಿತ್ರವಿದ್ದ ಮೊಬೈಲ್ ಸ್ಕ್ರೀನ್‌ಅನ್ನು ಫಡ್ಜ್ ಖುಷಿಯಿಂದ ನೆಕ್ಕುವ ಫೋಟೊ ಹೃದಯ ತಟ್ಟುತ್ತದೆ. ಮುಂದೆ ಓದಿ...

ಸುಶಾಂತ್‌ರನ್ನು ಹುಡುಕಾಡುತ್ತಿದೆ ನಾಯಿ
ಸುಶಾಂತ್ ಮೃತಪಟ್ಟ ಬಳಿಕ ಅವರ ಮುದ್ದಿನ ಫಡ್ಜ್ ಮನೆಯ ಒಳಗೂ ಹೊರಗೂ ಓಡಾಡುತ್ತಾ ತನ್ನ ಯಜಮಾನನನ್ನು ಹುಡುಕುತ್ತಿದ್ದದ್ದನ್ನು ಅನೇಕರು ಗಮನಿಸಿ ಅದರ ವಿಡಿಯೋ ಮಾಡಿದ್ದಾರೆ. ಸುಶಾಂತ್ ಕಾಣದ ಫಡ್ಜ್ ಮೂಕವಾಗಿ ವೇದನೆ ಅನುಭವಿಸುತ್ತಿರುವುದು ಕರುಳು ಹಿಂಡುವಂತಿದೆ.
ಕಣ್ಣೀರು ವ್ಯರ್ಥವಾಗಬಾರದು
ತನ್ನ ಗೆಳೆಯನನ್ನು ಫಡ್ಜ್ ಮಿಸ್ ಮಾಡಿಕೊಳ್ಳುತ್ತಿದೆ. ಇದು ನಿಜಕ್ಕೂ ಹೃದಯ ಒಡೆಯುವಂತೆ ಮಾಡುತ್ತದೆ. ಸುಶಾಂತ್ ಕಾಣದೆ ಫಡ್ಜ್ ಸುರಿಸುತ್ತಿರುವ ಕಣ್ಣೀರು ವ್ಯರ್ಥವಾಗಬಾರದು. ಈ ಪ್ರಕರಣದಲ್ಲಿ ಸುಶಾಂತ್‌ಗೆ ನ್ಯಾಯ ಸಿಗಬೇಕು ಎಂದು ಅನೇಕರು ಹೇಳಿದ್ದಾರೆ.

ಕಣ್ಣೀರು ತರಿಸುತ್ತದೆ
ನಾಯಿಗಳು ನಿಷ್ಠೆ ಮಾತ್ರವಲ್ಲ, ಅವುಗಳಿಗೆ ವಿಶಾಲ ಹೃದಯವಿರುತ್ತದೆ. ಮನುಷ್ಯನ ಅತ್ಯುತ್ತಮ ಸ್ನೇಹಿತ ನಾಯಿ. ಬಹುಶಃ ಸುಶಾಂತ್ ತಮ್ಮ ನೋವನ್ನು ಈ ನಾಯಿ ಜತೆಗೇ ಹಂಚಿಕೊಳ್ಳುತ್ತಿದ್ದರು ಎನಿಸುತ್ತದೆ. ಸುಶಾಂತ್‌ಗಾಗಿ ಫಡ್ಜ್ ಹುಡುಕುತ್ತಿರುವ ವಿಡಿಯೋ ನನ್ನಲ್ಲಿ ಕಣ್ಣೀರು ತರಿಸುತ್ತಿದೆ ಎಂದು ಕೆಲವರು ನೋವು ಹಂಚಿಕೊಂಡಿದ್ದಾರೆ.
ಈಗ ನಾಯಿ ಎಲ್ಲಿದೆ?
ದಯವಿಟ್ಟು ಸುಶಾಂತ್ ತಮ್ಮ ನಾಯಿ ಜತೆ ಇರುವ ಫೋಟೊ ಶೇರ್ ಮಾಡುವುದನ್ನು ನಿಲ್ಲಿಸಿ. ಅದನ್ನು ನೋಡಿದರೆ ಮನಸ್ಸು ಗಟ್ಟಿಯಾಗಿರುವುದಿಲ್ಲ ಎಂದು ಕೆಲವರು ಮನವಿ ಮಾಡಿದ್ದಾರೆ. ಸುಶಾಂತ್ ಸಾವಿನ ಬಳಿಕ ಆ ನಾಯಿ ಎಲ್ಲಿದೆ? ಮನೆಯವರು ಕರೆದೊಯ್ದಿದ್ದಾರೆಯೇ ಎಂದು ಅನೇಕರು ಪ್ರಶ್ನಿಸಿದ್ದಾರೆ.


Click it and Unblock the Notifications











