For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ನೆನಪಲ್ಲಿ ಮಹತ್ಕಾರ್ಯಕ್ಕೆ ಮುಂದಾದ ಕುಟುಂಬ

  By Avani Malnad
  |

  ಸುಶಾಂತ್ ಸಿಂಗ್ ರಜಪೂತ್ ನಟರಷ್ಟೇ ಅಲ್ಲದೆ, ಮಾನವೀಯ ಮನಸ್ಸಿನ ವ್ಯಕ್ತಿ. ಪ್ರವಾಹ ಪರಿಹಾರ ನಿಧಿಗಳಿಗೆ ತಮ್ಮ ಹೆಸರು ಬಹಿರಂಗಪಡಿಸದಂತೆ ದೇಣಿಗೆ ನೀಡಿದ್ದು, ಬೀದಿಬದಿಯ ವ್ಯಾಪಾರಿಗಳ ಜತೆ ಮಾತನಾಡಿ ಫೋಟೊ ತೆಗೆಸಿಕೊಂಡಿದ್ದು, ಪ್ರತಿಭಾವಂತ ಮಕ್ಕಳಿಗೆ ಓದಿಗೆ ಸಹಾಯ ಮಾಡಿದ್ದು... ಹೀಗೆ ಸುಶಾಂತ್ ತೋರಿದ ಹೃದಯವಂತಿಕೆ, ಕಂಡ ಕನಸುಗಳು ನೂರಾರು.

  ಪತಿ ನೆನಪಿನಲ್ಲಿ ಡಿ.ಪಿ ಬದಲಿಸಿದ ಮೇಘನಾ ರಾಜ್ | Meghana Raj in

  ಸುಶಾಂತ್ ಸಾವಿನ ಬಳಿಕವೂ ಅವರ ಹೆಸರಿನಲ್ಲಿ ಸಾಮಾಜಿಕ ಕಾರ್ಯ ನಡೆಸುವ ಮೂಲಕ ಅವರನ್ನು ಜನರ ಮನಸ್ಸಲ್ಲಿ ಚಿರಸ್ಮರಣೀಯವಾಗಿಸಲು ಕುಟುಂಬದವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಸುಶಾಂತ್ ಸಲ್ಲಿಸಿರುವ ಸೇವೆ ಹಾಗೂ ಅವರ ಪ್ರತಿಭೆಗೆ ಗೌರವ ಸಲ್ಲಿಸುವ ಸಲುವಾಗಿ 'ಸುಶಾಂತ್ ಸಿಂಗ್ ರಜಪೂತ್ ಫೌಂಡೇಷನ್ (ಎಸ್ಎಸ್ ಆರ್ ಎಫ್) ಎಂಬ ಪ್ರತಿಷ್ಠಾನ ಸ್ಥಾಪನೆಗೆ ಮುಂದಾಗಿದೆ. ಈ ಬಗ್ಗೆ ಅವರ ಕುಟುಂಬದವರು ಸುದೀರ್ಘ ಹೇಳಿಕೆಯನ್ನು ಪ್ರಕಟಿಸಿದೆ. ಮುಂದೆ ಓದಿ....

  ನಮ್ಮ ಹೆಮ್ಮೆ ಮತ್ತು ಸ್ಫೂರ್ತಿ

  ನಮ್ಮ ಹೆಮ್ಮೆ ಮತ್ತು ಸ್ಫೂರ್ತಿ

  'ಗುಡ್ ಬೈ ಸುಶಾಂತ್' ಎಂದು ಹೇಳಿಕೆಯ ಮೇಲ್ಭಾಗದಲ್ಲಿ ಶೀರ್ಷಿಕೆಯಂತೆ ಬರೆಯಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಜಗತ್ತು ನಮ್ಮ ಪಾಲಿಗೆ ಒಂದು ಉದ್ಯಾನವಾಗಿತ್ತು. ಉತ್ಸಾಹಿ, ಮಾತುಗಾರ ಮತ್ತು ಬಹಳ ಬುದ್ಧಿವಂತ. ಪ್ರತಿಯೊಂದರ ಬಗ್ಗೆಯೂ ಆತನಲ್ಲಿ ಕುತೂಹಲವಿರುತ್ತಿತ್ತು. ಯಾವುದೇ ನಿರ್ಬಂಧಗಳಿಲ್ಲದೆ ಕನಸು ಕಂಡಿದ್ದ. ಸಿಂಹದ ಹೃದಯದೊಂದಿಗೆ ಆ ಕನಸುಗಳನ್ನು ಬೆನ್ನೆತ್ತಿದ್ದ. ಮುಕ್ತವಾಗಿ ನಗುತ್ತಿದ್ದ. ಆತ ನಮ್ಮ ಕುಟುಂಬದ ಹೆಮ್ಮೆ ಮತ್ತು ಸ್ಫೂರ್ತಿ. ಆತನ ಟೆಲಿಸ್ಕೋಪ್ ಆತನ ಬಳಿಯಿದ್ದ ಅತ್ಯಮೂಲ್ಯ ವಸ್ತು. ಅದರ ಮೂಲಕ ಇಷ್ಟಪಟ್ಟು ನಕ್ಷತ್ರಗಳನ್ನು ನೋಡುತ್ತಿದ್ದ.

  ಕರಣ್ ಜೋಹರ್ ಶೋದಲ್ಲಿ ಸುಶಾಂತ್ ಬಗ್ಗೆ ಇಮ್ರಾನ್ ಹಶ್ಮಿ ಆಡಿದ್ದ ಮಾತುಗಳಿವು...

  ಮಿನುಗುವ ಕಣ್ಣನ್ನು ನೋಡಲಾರೆವು

  ಮಿನುಗುವ ಕಣ್ಣನ್ನು ನೋಡಲಾರೆವು

  ಆತನ ಸುಲಲಿತ ನಗುವನ್ನು ಇನ್ನೆಂದಿಗೂ ಕೇಳಲು ಆಗುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ನಮಗೆ ಸಾಧ್ಯವಾಗಲಾರದು. ಆತನ ಮಿನುಗುವ ಕಣ್ಣುಗಳನ್ನು ಮತ್ತೆ ನೋಡಲಾರೆವು. ವಿಜ್ಞಾನದ ಕುರಿತಾದ ಆತನ ಮಿತಿಯಿಲ್ಲದ ಭಾಷಣಗಳನ್ನು ಮತ್ತೆ ಕೇಳಲಾರೆವು. ಆತನ ಸಾವು ನಮ್ಮ ಕುಟುಂಬದಲ್ಲಿ ಎಂದಿಗೂ ತುಂಬಲಾಗದ ನೋವನ್ನು ಶಾಶ್ವತವಾಗಿ ಉಳಿಸಿ ಹೋಗಿದೆ.

  ಬಣ್ಣದ ಜಗತ್ತಿಗಿಂತಲೂ ವರ್ಣಮಯವಾಗಿತ್ತು ಸುಶಾಂತ್ ಜೀವನ ಮತ್ತು ಕನಸು...

  ಯುವ ಪ್ರತಿಭೆಗಳಿಗೆ ಪ್ರೋತ್ಸಾಹ

  ಯುವ ಪ್ರತಿಭೆಗಳಿಗೆ ಪ್ರೋತ್ಸಾಹ

  ತಮ್ಮ ಪ್ರತಿಯೊಬ್ಬ ಅಭಿಮಾನಿಯನ್ನೂ ಆತ ಪ್ರೀತಿಸಿದ್ದ ಮತ್ತು ಇಷ್ಟಪಟ್ಟಿದ್ದ. ನಮ್ಮ ಹೂದೋಟದ ಮೇಲೆ ಬಹಳ ಪ್ರೀತಿ ಸುರಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

  ಆತನ ನೆನಪು ಮತ್ತು ಸಂಪತ್ತಿಗೆ ಗೌರವ ಸಲ್ಲಿಸುವ ಸಲುವಾಗಿ ಕುಟುಂಬವು ಸುಶಾಂತ್ ಸಿಂಗ್ ರಜಪೂತ್ ಫೌಂಡೇಷನ್ (ಎಸ್ಎಸ್ಆರ್ಎಫ್) ಸ್ಥಾಪಿಸುತ್ತಿದ್ದು, ಈ ಮೂಲಕ ಆತನ ಹೃದಯಕ್ಕೆ ಹತ್ತಿರವಾಗಿದ್ದ ಕ್ಷೇತ್ರಗಳಾದ ಸಿನಿಮಾ, ವಿಜ್ಞಾನ ಮತ್ತು ಕ್ರೀಡೆಗಳಲ್ಲಿನ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುತ್ತದೆ.

  ಸುಶಾಂತ್ ಅಭಿನಯದ ಕೊನೆಯ ಚಿತ್ರ ಒಟಿಟಿಯಲ್ಲಿ ಬಿಡುಗಡೆ: ಅಭಿಮಾನಿಗಳ ಅಸಮಾಧಾನ

  ಸ್ಮಾರಕವಾಗಲಿದೆ ಬಾಲ್ಯದ ಮನೆ

  ಸ್ಮಾರಕವಾಗಲಿದೆ ಬಾಲ್ಯದ ಮನೆ

  ಪಟ್ನಾದ ರಾಜೀವ್ ನಗರದಲ್ಲಿನ ಆತನ ಬಾಲ್ಯದ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಲಾಗುತ್ತದೆ. ಆತನ ವೈಯಕ್ತಿಕ ವಸ್ತುಗಳು ಮತ್ತು ಸ್ಮರಣಿಕೆಗಳನ್ನು ಅಲ್ಲಿ ಇರಿಸುತ್ತೇವೆ. ಸಾವಿರಾರು ಪುಸ್ತಕಗಳು, ಆತನ ಟೆಲಿಸ್ಕೋಪ್, ಫ್ಲೈಟ್ ಸಿಮ್ಯುಲೇಟರ್ ಮುಂತಾದವುಗಳನ್ನು ಅವರ ಅಭಿಮಾನಿಗಳು ಮತ್ತು ಮೆಚ್ಚಿಕೊಂಡವರಿಗಾಗಿ ಇರಿಸಲಾಗುತ್ತದೆ. ಆತನ ನೆನಪನ್ನು ಚಿರಾಯುವಾಗಿ ಇರಿಸುವ ಸಲುವಾಗಿ ಇಂದಿನಿಂದ ಆತನ ಇನ್‌ಸ್ಟಾಗ್ರಾಂ, ಟ್ವಿಟ್ಟರ್ ಮತ್ತು ಫೇಸ್‌ಬುಕ್ ಖಾತೆಗಳನ್ನು ನಿಭಾಯಿಸಲು ನಾವು ಬಯಸಿದ್ದೇವೆ ಎಂದು ಕುಟುಂಬ ತಿಳಿಸಿದೆ.

  English summary
  Family of Sushant Singh Rajput has released a statement and revealed that they will set up a foundation to support young tallents.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X