ಸುಶಾಂತ್ ಸಿಂಗ್ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದ ತಂದೆ
ಮುಂಬೈನ ಬಾಂದ್ರಾದ ಮನೆಯಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಅವರ ತವರು ಪಟ್ನಾದ ಜನತೆಗೆ ತಿಳಿಯುತ್ತಿದ್ದಂತೆಯೇ ರಾಜೀವ್ ನಗರ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಭಾರಿ ಪ್ರಮಾಣದಲ್ಲಿ ಜನರು ನೆರೆದಿದ್ದರು. ಮಗನ ಸಾವಿನ ಸುದ್ದಿ ಕೇಳಿದ ಕೂಡಲೇ ಆಘಾತಕ್ಕೆ ಒಳಗಾದ ಅವರ ತಂದೆ ಕೃಷ್ಣ ಕುಮಾರ್ ಸಿಂಗ್ ಕುಸಿದುಬಿದ್ದಿದ್ದರು.
Recommended Video
ಮಗನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಕೃಷ್ಣಕುಮಾರ್, ಇಂತಹ ಕೆಟ್ಟ ಸುದ್ದಿಯನ್ನು ನಿರೀಕ್ಷಿಸಿರಲಿಲ್ಲ. ಮಗ ಇನ್ನಿಲ್ಲ ಎಂಬ ಕಹಿ ಸತ್ಯ ಅವರನ್ನು ವಿಹ್ವಲಗೊಳಿಸಿತ್ತು. ನಿಸ್ತೇಜರಾಗಿ ಬಿದ್ದ ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಒಂದು ದಿನ ಕಳೆದರೂ ಅವರು ಆಘಾತದಿಂದ ಚೇತರಿಸಿಕೊಂಡಿಲ್ಲ. ಕುಟುಂಬದವರು ಕೂಡ ಆಘಾತದ ನಡುವೆಯೇ ಅವರನ್ನು ಮುಂಬೈಗೆ ಕರೆದುಕೊಂಡು ಬಂದಿದ್ದಾರೆ. ಮುಂದೆ ಓದಿ...

ದೂರವಾಣಿ ಮೂಲಕ ಬಂದ ಸುದ್ದಿ
ಸುಶಾಂತ್ ಸಿಂಗ್ ಅವರ ಸಾವಿನ ಸುದ್ದಿ ದೂರವಾಣಿಯ ಮೂಲಕ ಮನೆಗೆ ತಲುಪಿತು ಎಂದು ಸುಶಾಂತ್ ಅವರ ಪಟ್ನಾ ನಿವಾಸವನ್ನು ನೋಡಿಕೊಳ್ಳುತ್ತಿರುವ ಲಕ್ಷ್ಮಿ ದೇವಿ ತಿಳಿಸಿದರು. ಕೆಲವೇ ದಿನಗಳ ಹಿಂದಷ್ಟೇ ಅಪ್ಪನ ಜತೆ ಸುಶಾಂತ್ ಮಾತನಾಡಿದ್ದರು ಎಂದು ಅವರು ಹೇಳಿದರು.

ಅವರು ಬರಲಿಲ್ಲ, ಆದರೆ...
ಶೀಘ್ರವೇ ಪಟ್ನಾಕ್ಕೆ ಬಂದು ಅಪ್ಪನನ್ನು ಎಲ್ಲಿಯಾದರೂ ಬೆಟ್ಟದ ಮೇಲೆ ವಾಕ್‌ಗೆ ಕರೆದುಕೊಂಡು ಹೋಗುವುದಾಗಿ ಸುಶಾಂತ್ ಹೇಳಿದ್ದರು. ಆದರೆ ಅವರು ಬರಲೇ ಇಲ್ಲ. ಅದರ ಬದಲು ಅವರ ಸಾವಿನ ಸುದ್ದಿ ಬಂತು ಎಂದು ಲಕ್ಷ್ಮಿ ದೇವಿ ಕಣ್ಣೀರಿಟ್ಟರು.

ಕೊರೊನಾದಿಂದ ಸೇಫಾಗಿರಿ
ಮೂರು ದಿನಗಳ ಹಿಂದಷ್ಟೇ ಸುಶಾಂತ್ ಕರೆ ಮಾಡಿ ತಂದೆಯ ಜತೆ ಮಾತನಾಡಿದ್ದರು. ಹೊರಗೆ ಕೊರೊನಾ ವೈರಸ್ ಭೀತಿ ಹೆಚ್ಚಿದೆ. ಹಾಗಾಗಿ ಸುರಕ್ಷಿತವಾಗಿರಿ ಎಂದು ತಂದೆಗೆ ಹೇಳಿದ್ದ ಅವರು, ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಲಕ್ಷ್ಮಿ ದೇವಿ ಅವರಿಗೂ ಮನವಿ ಮಾಡಿದ್ದರು. ಅದೇ ಸುಶಾಂತ್‌ರಿಂದ ಬಂದ ಕೊನೆಯ ಕರೆಯಾಗಿತ್ತು.

ಊಟಕ್ಕೆ ಕುಳಿದಿದ್ದಾಗ ಬಂತು ಸಾವಿನ ಸುದ್ದಿ
ನಿವೃತ್ತ ಸರ್ಕಾರಿ ನೌಕರರಾಗಿರುವ ಕೃಷ್ಣ ಕುಮಾರ್ ಸಿಂಗ್, ಭಾನುವಾರ ಊಟಕ್ಕೆಂದು ಕುಳಿತಿದ್ದರು. ಆಗ ಫೋನ್ ಬಂದಿತ್ತು. ಮುಂಬೈ ಎಂದಾಗ ಮಗನ ಫೋನ್ ಎಂದು ಅವರ ಮುಖವರಳಿತ್ತು. ಆದರೆ ಕರೆ ಮಾಡಿದ್ದು ಮುಂಬೈ ಪೊಲೀಸ್. ಮಗನ ಧ್ವನಿಯ ಬದಲು ಕೇಳಿಸಿದ್ದು, ಆತನ ಸಾವಿನ ಸುದ್ದಿ...


Click it and Unblock the Notifications











