ರಿಯಾ ಚಕ್ರಬೊರ್ತಿ ಕುರಿತು ತಮಗೆ ಗೊತ್ತೇ ಇಲ್ಲ ಎಂದ ಸುಶಾಂತ್ ಸಿಂಗ್ ರಜಪೂತ್ ತಂದೆ
ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟು 11ನೇ ದಿನದ ಕಾರ್ಯದ ವೇಳೆ ಮಗನ ಚಿತ್ರದ ಎದುರು ತಂದೆ ಕೃಷ್ಣ ಕುಮಾರ್ ಸಿಂಗ್ ಭಾವುಕರಾಗಿ ಕುಳಿತ ಚಿತ್ರ ಹೃದಯಸ್ಪರ್ಶಿಯಾಗಿತ್ತು. ಸುಶಾಂತ್ ಸಾವಿನ ಕುರಿತು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದ ಅವರ ತಂದೆ, ತಮ್ಮ ಏಕೈಕ ಮಗನನ್ನು ಕಳೆದುಕೊಂಡ ದುಃಖದಲ್ಲಿ ಮೌನವಾಗಿ ಕುಳಿತಿರುತ್ತಿದ್ದರು.
ಪುತ್ರ ವಿಯೋಗದ ಆಘಾತದಿಂದ ಕೊಂಚ ಚೇತರಿಸಿಕೊಂಡಿರುವ ಅವರು, ಮಗನ ಕುರಿತು ಮಾತನಾಡಿದ್ದಾರೆ. ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ಕೆಕೆ ಸಿಂಗ್, ನಾಲ್ಕು ಹೆಣ್ಣುಮಕ್ಕಳು ಹುಟ್ಟಿದ ಬಳಿಕ ಒಂದಾದರೂ ಗಂಡು ಮಗು ಬೇಕೆಂದು ಮೂರು ವರ್ಷ ಬಹಳ ಪ್ರಾರ್ಥಿಸಿದ್ದೆವು. ಅದರ ಫಲವಾಗಿ ಸುಶಾಂತ್ ಜನಿಸಿದ್ದ ಎಂಬುದನ್ನು ತಿಳಿಸಿದ್ದಾರೆ. ಮುಂದೆ ಓದಿ...

ಏನು ಬರೆದಿದೆಯೋ ಆಗುತ್ತದೆ
ಚಿಕ್ಕಂದಿನಲ್ಲಿ ಆತ ಕೀಟಲೆಗಳನ್ನು ಮಾಡುತ್ತಿದ್ದ. ಮೊದಲು ಬೇಸರವಾದಾಗಲೆಲ್ಲಾ ಆಗಾಗ್ಗೆ ಮಾತನಾಡುತ್ತಿದ್ದ. ಆದರೆ ಕೊನೆಯವರೆಗೂ ತನಗೆ ಏನಾಗುತ್ತಿದೆ ಎಂಬುದನ್ನು ಮಾತ್ರ ಎಂದಿಗೂ ಹೇಳಲಿಲ್ಲ. ಮನೆಯವರು ಯಾರೂ ಆತನ ಮೇಲೆ ಯಾವುದಕ್ಕೂ ಒತ್ತಡ ಹೇರಿರಲಿಲ್ಲ. ಚಿತ್ರರಂಗದಲ್ಲಿ ಅಂತಹ ಒತ್ತಡಗಳು ನಡೆಯುತ್ತವೆ. ಏನು ಬೇಕಾದರೂ ಆಗಬಹುದು. ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗುತ್ತದೆ ಎಂದಿದ್ದಾರೆ.

ಅಂಕಿತಾ ಬಗ್ಗೆ ಸುಶಾಂತ್ ತಂದೆ
ಸುಶಾಂತ್ ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಕುರಿತು ಮಾತನಾಡಿದ ಕೆಕೆ ಸಿಂಗ್, ಸುಶಾಂತ್ ಸಾವಿನ ಬಳಿಕ ಆಕೆ ಮುಂಬೈನಲ್ಲಿ ಹಾಗೂ ಪಟ್ನಾಕ್ಕೆ ಬಂದು ಭೇಟಿ ಮಾಡಿದ್ದಳು. ಪವಿತ್ರ ರಿಷ್ತ ಧಾರಾವಾಹಿ ಮೂಲಕ ಭೇಟಿಯಾದ ಇಬ್ಬರೂ ಆರು ವರ್ಷ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು.

ರಿಯಾ ಬಗ್ಗೆ ಗೊತ್ತೇ ಇಲ್ಲ
ಮಗನ ಜೀವನದಲ್ಲಿ ಬಂದಿದ್ದ ಯುವತಿಯೆಂದರೆ ಅದು ಅಂಕಿತಾ ಮಾತ್ರವೇ ಎಂದು ಸುಶಾಂತ್ ತಂದೆ ತಿಳಿದಿದ್ದರು. ಅವರಿಗೆ ರಿಯಾ ಚಕ್ರಬೊರ್ತಿಯ ಬಗ್ಗೆ ತಿಳಿದಿರಲಿಲ್ಲ. ಮುಂಬೈನಲ್ಲಿ ಸುಶಾಂತ್ ಅಂತ್ಯಕ್ರಿಯೆಯ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದು ಕೃತಿ ಸನೊನ್ ಮಾತ್ರ.

ಮದುವೆ ಬಗ್ಗೆಯೇ ಮಾತು
ಮದುವೆ ಆಲೋಚನೆ ಬಗ್ಗೆಯೂ ಸುಶಾಂತ್ ಜತೆ ಮಾತನಾಡಿದ್ದೆ. ಕೊರೊನಾ ಸಮಯದಲ್ಲಿ ಮದುವೆಯಾಗುವುದಿಲ್ಲ. ಆದರೆ ಮುಂದಿನ ಸಿನಿಮಾಗಳ ಬಿಡುಗಡೆಯಾದ ಬಳಿಕ ಮದುವೆಯಾಗುತ್ತೇನೆ. 2021ರ ಫೆಬ್ರವರಿ-ಮಾರ್ಚ್ ವೇಳೆಗೆ ಮದುವೆಯ ಸಿದ್ಧತೆ ನಡೆಸಲು ಯೋಚಿಸಿದ್ದ. ನಾವಿಬ್ಬರೂ ಕೊನೆಯ ಬಾರಿಗೆ ಮಾತನಾಡಿದ್ದು ಮದುವೆಯ ವಿಚಾರವಾಗಿಯೇ ಎಂದು ತಿಳಿಸಿದ್ದಾರೆ.

ನಿನ್ನ ಆಯ್ಕೆಯ ಹುಡುಗಿ
ಆದರೆ ಸುಶಾಂತ್ ತಾನು ಮದುವೆಯಾಗಲು ಇಚ್ಚಿಸಿರುವ ಹುಡುಗಿಯ ವಿವರ ನೀಡಿರಲಿಲ್ಲ. ಜೀವನಪರ್ಯಂತ ಆಕೆಯೊಂದಿಗೆ ಕಳೆಯಬೇಕಾದ್ದು ಆತನೇ ಆಗಿರುವುದರಿಂದ ನಿನ್ನ ಆಯ್ಕೆಯ ಹುಡುಗಿಯನ್ನು ಮದುವೆಯಾಗು ಎಂದಿದ್ದೆ ಎಂದು ತಂದೆ ತಿಳಿಸಿದ್ದಾರೆ.


Click it and Unblock the Notifications











