twitter
    For Quick Alerts
    ALLOW NOTIFICATIONS  
    For Daily Alerts

    ಎಂದಿಗೂ ಹೋರಾಡುವುದನ್ನು ನಿಲ್ಲಿಸಬಾರದು ಎಂದಿದ್ದರು ಸುಶಾಂತ್

    |

    ಸುಶಾಂತ್ ಸಿಂಗ್ ರಜಪೂತ್ ಒಬ್ಬ ನಟನಷ್ಟೇ ಅಲ್ಲ, ಬಹು ಬುದ್ಧಿವಂತ ಮತ್ತು ತಿಳಿವಳಿಕೆಯುಳ್ಳ ವ್ಯಕ್ತಿ ಕೂಡ ಆಗಿದ್ದರು. ವಿಜ್ಞಾನ, ತಂತ್ರಜ್ಞಾನ, ಖಗೋಳ ಶಾಸ್ತ್ರ, ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಸುಶಾಂತ್ ಅಪಾರ ತಿಳಿವಳಿಕೆ ಹೊಂದಿದ್ದರು. ಅಧ್ಯಾತ್ಮದ ಕುರಿತೂ ಒಲವು ಇತ್ತು.

    Recommended Video

    ರೀಲ್ ನಲ್ಲಿ ಪರಿಹಾರ ಕೊಟ್ಟ ಸುಶಾಂತ್ ರಿಯಲ್ ಲೈಫ್ ನಲ್ಲಿ ಸೋತಿದ್ಯಾಕೆ? |Sushant Singh Rajput|FILMIBEAT KANNADA

    ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದದ್ದು ಕಡಿಮೆ. ಆದರೆ ಹಾಕಿದ ಪ್ರತಿ ಪೋಸ್ಟ್‌ಗಳಲ್ಲಿಯೂ ಗಮನ ಸೆಳೆಯುವ ಸಾಲುಗಳಿರುತ್ತಿದ್ದವು. ಹಾಗೆಯೇ ಸಿನಿಮಾಗಳ ಕುರಿತಾದ ಪೋಸ್ಟ್‌ಗಳಿಗಿಂತ ವೈಜ್ಞಾನಿಕ, ಆಧ್ಯಾತ್ಮಿಕ ವಿಚಾರಗಳೇ ಹೆಚ್ಚಾಗಿರುತ್ತಿದ್ದವು.

    ವಾರದ ಹಿಂದಷ್ಟೇ ಎಂದೆಂದಿಗೂ ನಿಮಗೆ ಚಿರರುಣಿ ಎಂದಿದ್ದ ಸುಶಾಂತ್ ಹೀಗೇಗೆ ಮಾಡಿಕೊಂಡರು?ವಾರದ ಹಿಂದಷ್ಟೇ ಎಂದೆಂದಿಗೂ ನಿಮಗೆ ಚಿರರುಣಿ ಎಂದಿದ್ದ ಸುಶಾಂತ್ ಹೀಗೇಗೆ ಮಾಡಿಕೊಂಡರು?

    ಕಂಪ್ಯೂಟರ್ ಗೇಮಿಂಗ್ ನನಗೆ ಬಹಳ ಇಷ್ಟ. ಅದರ ಹಿಂದಿನ ಭಾಷೆಯನ್ನು ಕಲಿಯಲು ಯಾವಾಗಲೂ ಬಯಸುತ್ತೇನೆ ಎಂದಿದ್ದ ಸುಶಾಂತ್, ಕಂಪ್ಯೂಟರ್ ಗೇಮಿಂಗ್ ಒಂದರ ಕೋಡಿಂಗ್ ಕಲಿಯುವ ಪ್ರಕ್ರಿಯೆಯನ್ನು ಹಾಳೆಯೊಂದರಲ್ಲಿ ಬರೆದು ಅದರ ಫೋಟೊ ಹಾಕಿದ್ದರು. ಅದಕ್ಕೂ ಮೊದಲು ಅವರು ಬರೆದಿದ್ದ ಬರಹವೊಂದು ಎಲ್ಲರನ್ನೂ ಕಾಡುತ್ತಿದೆ. ಮುಂದೆ ಓದಿ...

    ಫೀಲ್ ಮಾಡುವುದನ್ನು ಕಲಿಸಲಾಗದು

    ಫೀಲ್ ಮಾಡುವುದನ್ನು ಕಲಿಸಲಾಗದು

    ಬಹುತೇಕ ಪ್ರತಿಯೊಬ್ಬರೂ ಯೋಚಿಸಲು ಅಥವಾ ನಂಬಲು ಅಥವಾ ತಿಳಿಯುವುದನ್ನು ಕಲಿಯಬಹುದು. ಆದರೆ ಒಬ್ಬರೇ ಒಬ್ಬ ಮನುಷ್ಯನಿಗೆ ಹೇಗೆ ಫೀಲ್ ಮಾಡಬಹುದು ಎಂದು ಕಲಿಸಲು ಸಾಧ್ಯವಿಲ್ಲ. ಏಕೆ? ಎಂದು ಸುಶಾಂತ್ ಬರಹ ಆರಂಭಿಸಿದ್ದರು.

    ನೀವು ನೀವಾಗುತ್ತೀರಿ

    ನೀವು ನೀವಾಗುತ್ತೀರಿ

    ಏಕೆಂದರೆ ನೀವು ಯೋಚಿಸಿದಾಗಲೆಲ್ಲಾ ಅಥವಾ ನೀವು ನಂಬಿಕೊಂಡಾಗಲೆಲ್ಲ ಅಥವಾ ನೀವು ತಿಳಿದಾಗಲೆಲ್ಲಾ ನೀವು ಅನೇಕ ಜನರಲ್ಲಿ ಒಬ್ಬರಾಗಿರುತ್ತೀರಿ. ಆದರೆ ನೀವು ಫೀಲ್ ಮಾಡಿದ ಗಳಿಗೆಯಲ್ಲಿ ನೀವು ಯಾರೂ ಆಗಿರುವುದಿಲ್ಲ, ಆದರೆ ನೀವಾಗಿರುತ್ತೀರಿ.

    Breaking ಚಿತ್ರರಂಗಕ್ಕೆ ಮತ್ತೊಂದು ಆಘಾತ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆBreaking ಚಿತ್ರರಂಗಕ್ಕೆ ಮತ್ತೊಂದು ಆಘಾತ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

    ಹೋರಾಡುವುದನ್ನು ನಿಲ್ಲಿಸಬಾರದು

    ಹೋರಾಡುವುದನ್ನು ನಿಲ್ಲಿಸಬಾರದು

    ಬೇರೆ ಯಾರೋ ಆಗಿರದೆ ನೀವು ನೀವಾಗಿರಲು-ಪ್ರತಿಯೊಬ್ಬರಂತೆ ನಿಮ್ಮನ್ನೂ ಮಾಡಲು ಹಗಲು ರಾತ್ರಿ ತನ್ನ ಸಾಧ್ಯವಾದುದ್ದನ್ನು ಮಾಡುತ್ತಿರುವ ಜಗತ್ತಿನಲ್ಲಿ - ಅಂದರೆ ಯಾವುದೇ ಮನುಷ್ಯ ತನ್ನಿಂದ ಹೋರಾಡಲು ಸಾಧ್ಯವಾದ ಅತ್ಯಂತ ಕಠಿಣ ಯುದ್ಧದಲ್ಲಿ ಹೋರಾಡಬೇಕು ಮತ್ತು ಹೋರಾಡುವುದನ್ನು ನಿಲ್ಲಿಸಬಾರದು ಎಂದು ಸುಶಾಂತ್ ಏಪ್ರಿಲ್‌ನಲ್ಲಿ ಸುದೀರ್ಘ ಟಿಪ್ಪಣಿ ಬರೆದುಕೊಂಡಿದ್ದರು.

    ನಟರಿಗೆ ಸಂತಾಪ ಕೋರಿದ್ದರು

    ನಟರಿಗೆ ಸಂತಾಪ ಕೋರಿದ್ದರು

    ಕಳೆದೆರಡು ತಿಂಗಳಲ್ಲಿ ಬಾಲಿವುಡ್‌ಅನ್ನು ಶೋಕಸಾಗರದಲ್ಲಿ ಮುಳುಗಿಸಿದ್ದು ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ಅವರ ಸಾವು. ಇರ್ಫಾನ್ ಖಾನ್ ನಿಧನರಾದಾಗ 'ಸರ್ ನೀವು ಬಹಳ ನೆನಪಿಗೆ ಬರುತ್ತಿದ್ದೀರಿ' ಎಂದು ಸುಶಾಂತ್ ಬರೆದುಕೊಂಡಿದ್ದರು. ರಿಷಿ ಕಪೂರ್ ಅವರ ಫೋಟೊ ಹಾಕಿ ಹೃದಯದ ಸಂಕೇತ ಪ್ರಕಟಿಸಿ ಕೈ ಮುಗಿದಿದ್ದರು. ಈಗ ಸುಶಾಂತ್ ಅವರ ಎಲ್ಲ ಹಳೆ ಪೋಸ್ಟ್‌ಗಳಿಗೂ ಅಭಿಮಾನಿಗಳು ಸಂತಾಪದ ಕಾಮೆಂಟ್ ಹಾಕುತ್ತಿದ್ದಾರೆ.

    ವಿಪರ್ಯಾಸವೆಂದರೆ ಇದು: ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ ಎಂದು ಹೇಳಿದ್ದರು ಸುಶಾಂತ್!ವಿಪರ್ಯಾಸವೆಂದರೆ ಇದು: ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ ಎಂದು ಹೇಳಿದ್ದರು ಸುಶಾಂತ್!

    English summary
    Sushant Singh Rajput wrote an Instagram post last month said never stop fighting.
    Monday, June 15, 2020, 9:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X