ಸುಶಾಂತ್ ಆತ್ಮಹತ್ಯೆಗೂ ಟ್ವಿಟ್ಟರ್‌ನ ಆ ಫೋಟೊಗೂ ಇದೆಯೇ ಸಂಬಂಧ?
ಬಾಲಿವುಡ್‌ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವರ ಸಾವಿನ ನೋವಿನೊಂದಿಗೆ ಅದರ ಹಿಂದಿರುವ ಕಾರಣಗಳೇನು ಎನ್ನುವುದು ಹೆಚ್ಚಿನವರನ್ನು ಕಾಡುತ್ತಿದೆ. ಸುಶಾಂತ್ ಅವರ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳು, ಅವರು ಬರೆದಿರುವ ಸಾಲುಗಳಲ್ಲಿನ ನಿಗೂಢ ಅರ್ಥಗಳು ಅವರು ಆತ್ಮಹತ್ಯೆಗೆ ಮಾನಸಿಕವಾಗಿ ಬಹಳ ಹಿಂದಿನಿಂದಲೇ ಸಿದ್ಧರಾಗುತ್ತಿದ್ದಾರೆಯೇ ಎಂಬ ಅನುಮಾನ ಮೂಡಿಸುತ್ತದೆ.
ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತಿರುವುದು ಸುಶಾಂತ್ ಅವರ ಟ್ವಿಟ್ಟರ್ ಖಾತೆಯಲ್ಲಿನ ಕವರ್ ಫೋಟೊ. ನೆದರ್ಲೆಂಡ್‌ನ ಖ್ಯಾತ ಚಿತ್ರಕಲಾವಿದ ವಿನ್ಸೆಂಟ್ ವಿಲ್ಲೆಮ್ ವ್ಯಾನ್ ಗೋ ರಚಿಸಿದ್ದ ಬಹು ಜನಪ್ರಿಯ ಚಿತ್ರ 'ಸ್ಟಾರಿ ನೈಟ್ಸ್'ನ ಫೋಟೊವನ್ನು ಸುಶಾಂತ್ ಟ್ವಿಟ್ಟರ್ ಖಾತೆಯ ಫೋಟೊದಲ್ಲಿ ಹಾಕಿಕೊಂಡಿದ್ದರು. ಆ ಚಿತ್ರಕ್ಕೂ ಸುಶಾಂತ್ ಸಾವಿನ ಪ್ರಕರಣಕ್ಕೂ ಸಾಮ್ಯತೆಗಳಿವೆ. ಮುಂದೆ ಓದಿ...

ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಾನ್ ಗೋ
1853ರ ಮಾರ್ಚ್‌ನಲ್ಲಿ ಜನಸಿದ್ದ ವ್ಯಾನ್ ಗೋ, 1890ರಲ್ಲಿ ತಮ್ಮ 37ನೇ ವಯಸ್ಸಿನಲ್ಲಿ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಗುಂಡು ಹಾರಿಸಿಕೊಂಡು ಸುಮಾರು 30 ಗಂಟೆಗಳ ಬಳಿಕ ಅವರು ಮೃತಪಟ್ಟಿದ್ದರು. ಬಡತನ, ಮಾನಸಿಕ ಅಸ್ವಸ್ಥತೆ, ಖಿನ್ನತೆ ಮುಂತಾದವು ಅವರನ್ನು ಕಾಡುತ್ತಿತ್ತು.

ಆತ್ಮಹತ್ಯೆಯ ಆಲೋಚನೆಗಳ ಚಿತ್ರ
ಆದರೆ, ಆತ್ಮಹತ್ಯೆಗೂ ಮುನ್ನ ವ್ಯಾನ್ ಗೋ ರಚಿಸಿದ್ದ 'ಸ್ಟಾರಿ ನೈಟ್ಸ್' ಚಿತ್ರ, ಅವರ ಚಿತ್ರಕೃತಿಗಳಲ್ಲಿಯೇ ಅಸಹಜವೆನಿಸಿತ್ತು. ಇದರಲ್ಲಿ ಗಾಢ ಬಣ್ಣಗಳನ್ನು ವ್ಯಾನ್ ಗೋ ಬಳಸಿದ್ದರು. ವ್ಯಾನ್ ಗೋ ಅವರ ಮಾನಸಿಕ ತೊಳಲಾಟಗಳು, ಆತ್ಮಹತ್ಯೆಯ ಚಿಂತನೆಗಳನ್ನು ಆ ಚಿತ್ರದಲ್ಲಿ ಮೂಡಿಸಿದ್ದರು.

ಚಿತ್ರದ ಮೂಲಕ ವ್ಯಕ್ತಪಡಿಸಿದ್ದರೇ ಸುಶಾಂತ್?
ಇದೇ ಚಿತ್ರವನ್ನು ಸುಶಾಂತ್ ತಮ್ಮ ಟ್ವಿಟ್ಟರ್ ಖಾತೆಯ ಕವರ್ ಫೋಟೊವನ್ನಾಗಿಸಿಕೊಂಡಿದ್ದರು. ಅಂದರೆ ವ್ಯಾನ್ ಗೋ ಎದುರಿಸಿದ್ದ ಮಾನಸಿಕ ಸಂಕಟ ಹಾಗೂ ಆಲೋಚನೆಗಳು ತಮ್ಮಲ್ಲಿಯೂ ಇರುವುದನ್ನು ಸುಶಾಂತ್ ಈ ಚಿತ್ರದ ಮೂಲಕ ವ್ಯಕ್ತಪಡಿಸಿದ್ದರು ಎನ್ನಲಾಗುತ್ತಿದೆ.

ಫೋಟಾನ್ ಇನ್ ಎ ಡಬಲ್ ಸ್ಲಿಟ್
ಸುಶಾಂತ್ ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂ ಖಾತೆಯ ಹೆಸರಿನ ಜತೆ ಬಯೋದಲ್ಲಿ 'ಫೋಟಾನ್ ಇನ್ ಎ ಡಬಲ್ ಸ್ಲಿಟ್' ಎಂದು ಬರೆದುಕೊಂಡಿದ್ದರು. ಇದು ಡಬಲ್ ಸ್ಲಿಟ್ ಪ್ರಯೋಗದ ಕುರಿತಾದ ಆಧುನಿಕ ಭೌತಶಾಸ್ತ್ರದ ಅತ್ಯಂತ ತಾರ್ಕಿಕ ಹಾಗೂ ವಿಚಿತ್ರ ಗ್ರಹಿಕೆಯಾಗಿದೆ. ಇದರ ಆಧಾರದಲ್ಲಿ ಸುಶಾಂತ್ ಅವರಲ್ಲಿ ಮಲ್ಟಿಪಲ್ ಪರ್ಸನಾಲಿಟಿ ಸಮಸ್ಯೆ ಇತ್ತೇ ಎಂದು ಊಹಿಸಲಾಗುತ್ತಿದೆ.


Click it and Unblock the Notifications











