'NASA' ಗಗನಯಾನ ತರಬೇತಿ ಪಡೆದ ಜಗತ್ತಿನ ಏಕೈಕ ನಟ ಸುಶಾಂತ್; ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಸಹೋದರಿ
ನಟ ಸುಶಾಂತ್ ಸಿಂಗ್ ರಪೂತ್ ಅಗಲಿ ವರ್ಷದ ಮೇಲಾದರೂ ಅವರ ನೆನಪುಗಳು ಇನ್ನು ಹಸಿರಾಗೆ ಇದೆ. ಸುಶಾಂತ್ ಅವರ ಬಗ್ಗೆ ಒಂದಲ್ಲೊಂದು ವಿಚಾರಗಳು ಸದ್ದು ಮಾಡುತ್ತಲೇ ಇದೆ. ಸುಶಾಂತ್ ಸಿಂಗ್ ಅದ್ಭುತ ನಟ ಮಾತ್ರವಲ್ಲ, ಅಪಾರ ಪ್ರತಿಭೆ ಹೊಂದಿದ್ದ ವ್ಯಕ್ತಿಯಾಗಿದ್ದರು. ವಿಜ್ಞಾನದ ಮೇಲೆ ಸುಶಾಂತ್ ಸಿಂಗ್ ಅವರಿಗೆ ಎಲ್ಲಿಲ್ಲದ ಪ್ರೀತಿ.
NASAದಿಂದ ತರಬೇತಿ ಪಡೆದ ಪ್ರಪಂಚದ ಏಕೈಕ ನಟ ಸುಶಾಂತ್ ಸಿಂಗ್ ಎನ್ನುವ ಇಂಟ್ರೆಸ್ಟಿಂಗ್ ವಿಚಾರವನ್ನು ಸಹೋದರಿ ಶ್ವೇತಾ ಸಿಂಗ್ ಬಿಚ್ಚಿಟ್ಟಿದ್ದಾರೆ. ಸುಶಾಂತ್ ನಿಧನ ಹೊಂದಿದಾಗಿನಿಂದನೂ ಸಾಮಾಜಿಕ ಜಾಲತಾಣಗಳಲ್ಲಿ ಸಹೋದರನ ಬಗ್ಗೆ ಪೋಸ್ಟ್‌ಗಳನ್ನು ಶೇರ್ ಮಾಡುತ್ತಲೇ ಬಂದಿದ್ದಾರೆ. ಸಹೋದರನ ನೆನಪುಗಳನ್ನು ಸದಾ ಹಂಚಿಕೊಳ್ಳುತ್ತಿರುತ್ತಾರೆ.
ಸುಶಾಂತ್ 'ನಾಸಾ' ತರಬೇತಿ ಪಡೆದ ಬಗ್ಗೆ ಬಹಿರಂಗ ಪಡಿಸಿದ್ದಾರೆ. "ನಾಸಾದಿಂದ ಗಗನಯಾನ ತರಬೇತಿ ಪಡೆದ ಪ್ರಪಂಚದ ಏಕೈಕ ನಟ ಸುಶಾಂತ್. 2024ರ ಮೂನ್ ಮಿಷನ್‌ಗೆ ಹೋಗಲು ಸಿದ್ಧರಾಗಿದ್ದರು" ಎನ್ನುವ ಮಹತ್ವದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಈ ಪೋಸ್ಟ್ ಬಳಿಕ ಅನೇಕ ಅಭಿಮಾನಿಗಳು ಸುಶಾಂತ್ ಪ್ರತಿಭೆಯನ್ನು ಹೊಗಳುತ್ತಿದ್ದಾರೆ. ಈ ಹಿಂದೆಯೂ ಸಂದರ್ಶನ ವೊಂದರಲ್ಲಿ ನಟ ಸುಶಾಂತ್ ನಾಸಾಗೆ ಹೋಗುವ ಕನಸಿನ ಬಗ್ಗೆ ಹೇಳಿಕೊಂಡಿದ್ದರು. ಆದರೆ ಇಂತ ದೊಡ್ಡ ಕನಸು ನನಸಾಗುವ ಮೊದಲೇ ಜಗತ್ತನ್ನೇ ಬಿಟ್ಟು ಹೊರಟು ಹೋಗಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ 2020 ಜೂನ್ 14ರಂದು ಮುಂಬೈನ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುಶಾಂತ್ ಸಿಂಗ್ ಸಾವು ಇಡೀ ಬಾಲಿವುಡ್ ಅನ್ನೇ ಬೆಚ್ಚಿಬೀಳಿಸಿತ್ತು. ಸುಶಾಂತ್ ನಿಧನಹೊಂದಿ ವರ್ಷದ ಮೇಲಾದರೂ ಸಾವಿನ ಹಿಂದಿನ ಕಾರಣ ಬಹಿರಂಗವಾಗಿಲ್ಲ. ಸುಶಾಂತ್ ಪ್ರಕರಣ ಸದ್ಯ ಸಿಬಿಐನಲ್ಲಿದ್ದು ತನಿಖೆ ಇನ್ನು ನಡೆಯುತ್ತಿದೆ.


Click it and Unblock the Notifications










