ಸುಶಾಂತ್ ಸಿಂಗ್ ಅನ್ನು ಸಿನಿಮಾವೊಂದರಿಂದ ಹೊರಹಾಕಲಾಗಿತ್ತು: ಸಂಜಯ್ ರಾವತ್
ಮಹಾರಾಷ್ಟ್ರದ ರಾಜಕಾರಣಿ, ಶಿವಸೇನಾ ಪಕ್ಷದ ಪ್ರಮುಖ ಮುಖಂಡ ಸಂಜಯ್ ರಾವತ್, ಇತ್ತೀಚೆಗಷ್ಟೆ ಆತ್ಮಹತ್ಯೆ ಮಾಡಿಕೊಂಡು ಹತರಾದ ಸುಶಾಂತ್ ಸಿಂಗ್ ಬಗ್ಗೆ ಸಂಪಾದಕೀಯ ಬರೆದಿದ್ದಾರೆ.
ಸುಶಾಂತ್ ಸಿಂಗ್ ಅವರು ಬಾಲಿವುಡ್‌ನ ಗುಂಪುಗಾರಿಕೆಗೆ, ಸ್ವಜನಪಕ್ಷಪಾತಕ್ಕೆ ಬಲಿಪಶು ಆಗಿದ್ದರು ಎಂದು ಆರೋಪಿಸಲಾಗುತ್ತಿದೆ. ಈ ಬಗ್ಗೆ ದೊಡ್ಡ ಚರ್ಚೆಯೇ ಎದ್ದಿದೆ. ಈ ನಡುವೆ ಸುಶಾಂತ್ ಅವರನ್ನು ಮುಖ್ಯವಾದ ಸಿನಿಮಾ ಒಂದರಿಂದ ತೆಗೆದು ಹಾಕಲಾಗಿತ್ತು ಎಂದು ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಬರೆದಿದ್ದಾರೆ ರಾವತ್.
ದೇಶದ ಪ್ರಮುಖ ರಾಜಕೀಯ ನೇತ, ಮಾಜಿ ಮಂತ್ರಿ ಜಾರ್ಜ್ ಫರ್ನಾಂಡೀಸ್ ಅವರ ಜೀವನ ಆಧರಿತ ಸಿನಿಮಾದಲ್ಲಿ ಜಾರ್ಜ್ ಫರ್ನಾಂಡೀಸ್ ಪಾತ್ರವನ್ನು ಸುಶಾಂತ್ ಸಿಂಗ್ ಮಾಡಬೇಕಿತ್ತು. ಆದರೆ ಆ ಸಿನಿಮಾದಿಂದ ಅವರನ್ನು ಹೊರಗೆ ಹಾಕಲಾಯಿತಂತೆ.

ಜಾರ್ಜ್ ಫರ್ನಾಂಡೀಸ್ ಪಾತ್ರಕ್ಕಾಗಿ ಸುಶಾಂತ್ ಸಿಂಗ್ ಅವರನ್ನು ಕೇಳಲಾಗಿತ್ತಂತೆ, ಆದರೆ ಅವರ ಮಾನಸಿಕ ಸ್ಥಿತಿ ಗಮನಿಸಿ ಅವರನ್ನು ಸಿನಿಮಾದಿಂದ ಕೈಬಿಡಲಾಯಿತಂತೆ. ಹೀಗೆಂದು ಸಂಜಯ್ ರಾವತ್ ಸಾಮ್ನಾ ದಲ್ಲಿ ಬರೆದಿದ್ದಾರೆ.
ಅಷ್ಟೆ ಅಲ್ಲದೆ, ಸುಶಾಂತ್ ಸಿಂಗ್ ಚಿತ್ರೀಕರಣದ ಸೆಟ್‌ಗಳಲ್ಲಿ ಭಿನ್ನವಾಗಿ ವರ್ತಿಸುತ್ತಿದ್ದರಂತೆ, ಅವರು ಮಾನಸಿಕ ಸಮತೋಲನ ಕಳೆದುಕೊಂಡಂತೆ ವರ್ತಿಸುತ್ತಿದ್ದರಂತೆ. ಇದರಿಂದ ಸೆಟ್‌ನಲ್ಲಿರುವವರಿಗೆ ಸಮಸ್ಯೆ ಆಗುತ್ತಿತ್ತಂತೆ.


Click it and Unblock the Notifications











