ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಯೋಜಿತ ಕೊಲೆ: ನಟಿ ಕಂಗನಾ ರಣಾವತ್

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೆ ನಟಿ ಕಂಗನಾ ರಣಾವತ್ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸುಶಾಂತ್ ಸಾವಿಗೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

Recommended Video

ಸುಶಾಂತ್ ಸಾವಿನ ರಹಸ್ಯ ಬಿಚ್ಚಿಟ್ಟ ಬಾಲಿವುಡ್ ಸ್ಟಾರ್ ನಟಿ | Kangana Ranuat | Sushanth Singh Rajput

ಮೊದಲಿನಿಂದಲೂ ಬಾಲಿವುಡ್‌ನಲ್ಲಿರುವ ಅಸಮಾನತೆ ಬಗ್ಗೆ ದನಿ ಎತ್ತುತ್ತಲೇ ಬಂದಿರುವ ಕಂಗನಾ ರಣಾವತ್ ತಮ್ಮಂತೆಯೇ ಬಾಲಿವುಡ್‌ನಲ್ಲಿನ ಅಸಮಾನತೆಯಿಂದ ಬಳಲಿದ್ದ ಸುಶಾಂತ್ ಸಾವಿನಿಂದ ತೀವ್ರವಾಗಿ ನೊಂದಿದ್ದು, ಬಾಲಿವುಡ್‌ ಮಂದಿಯ ಮೇಲೆ ಆಕ್ರೋಶ ಹೊರಹಾಕಿದ್ದಾರೆ.

'ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆಯಲ್ಲ ಅದೊಂದು ಯೋಜಿತ ಕೊಲೆ' ಎಂದಿರುವ ಕಂಗನಾ ರಣಾವತ್ ತಮ್ಮ ಈ ಹೇಳಿಕೆಗೆ ಕಾರಣವನ್ನೂ ನೀಡಿದ್ದಾರೆ. 'ಎಲ್ಲಾ ಆತ್ಯಹತ್ಯೆಯೂ ಕೊಲೆ' ಎಂಬ ಮನೋವಿಜ್ಞಾನಿಗಳ ಮಾತಿನ ಹಿನ್ನೆಲೆಯಲ್ಲಿ ಕಂಗನಾ ಮಾತನ್ನು ಕೇಳಿದಾಗ ಇದು ನಿಜವಿರಬಹುದು ಎಂಬ ಅನುಮಾನ ಬಾರದೆ ಇರದು.

ಸುಶಾಂತ್ ಸಿಂಗ್ ರ್ಯಾಂಕ್ ಹೋಲ್ಡರ್ ಆಗಿದ್ದ

ಸುಶಾಂತ್ ಸಿಂಗ್ ರ್ಯಾಂಕ್ ಹೋಲ್ಡರ್ ಆಗಿದ್ದ

ಸುಶಾಂತ್ ಸಿಂಗ್ ಮೃದು ಮನಸ್ಸಿನವನು, ಆತನಿಗೆ ಇಚ್ಛಾಶಕ್ತಿ ಇರಲಿಲ್ಲ, ಆತ ಹೆದರಿಕೆ ಸ್ವಭಾವದವನಾಗಿದ್ದ, ಬೌದ್ಧಿಕವಾಗಿ ನಿಶ್ಯಕ್ತನಾಗಿದ್ದ ಹಾಗಾಗಿ ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗುತ್ತಿದೆ. ಆದರೆ ಸುಶಾಂತ್ ಸಿಂಗ್ ರಾಷ್ಟ್ರಮಟ್ಟದ rank ಹೋಲ್ಡರ್ ಆಗಿದ್ದ ಆತನ ಬೌದ್ಧಿಕಮಟ್ಟ ಕ್ಷೀಣವಾಗಿತ್ತು ಎಂದು ಹೇಗೆ ಹೇಳುತ್ತೀರಿ ಎಂದು ಕಂಗನಾ ರಣಾವತ್ ಪ್ರಶ್ನೆ ಮಾಡಿದ್ದಾರೆ.

'ನನ್ನನ್ನು ಹೊರಗೆ ಹಾಕುತ್ತಾರೆ ಎಂದು ಹೇಳಿದ್ದ ಸುಶಾಂತ್'

'ನನ್ನನ್ನು ಹೊರಗೆ ಹಾಕುತ್ತಾರೆ ಎಂದು ಹೇಳಿದ್ದ ಸುಶಾಂತ್'

ಆತ ಸ್ಪಷ್ಟವಾಗಿ ಹೇಳುತ್ತಿದ್ದ, ನನ್ನ ಸಿನಿಮಾಗಳನ್ನು ನೋಡಿ ನನಗೆ ಗಾಡ್‌ಫಾದರ್‌ಗಳಿಲ್ಲ. ನೀವು ನನ್ನ ಕೈಬಿಟ್ಟರೆ ನನ್ನನ್ನು ಈ ಇಂಡಸ್ಟ್ರೀಯಿಂದ ಹೊರಗೆ ಹಾಕಿಬಿಡುತ್ತಾರೆ ಎಂದು ಗೋಗರೆದ, ಕೆಲವು ಸಂದರ್ಶನಗಳಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ ನನ್ನನ್ನು ಬಾಲಿವುಡ್ ತನ್ನವನೆಂದು ಭಾವಿಸಿಲ್ಲ, ನನ್ನನ್ನು ಹೊರಗಿನವನಂತೆ ನೋಡಲಾಗುತ್ತಿದೆ ಎಂದು ಇದು ತಪ್ಪಲ್ಲವೆ, ಈ ತಪ್ಪಿಗೆ ಶಿಕ್ಷೆ ಇಲ್ಲವೆ ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ.

ಸಿಗಬೇಕಾದ ಮನ್ನಣೆ ಆತನಿಗೆ ಸಿಗಲಿಲ್ಲ: ಕಂಗನಾ

ಸಿಗಬೇಕಾದ ಮನ್ನಣೆ ಆತನಿಗೆ ಸಿಗಲಿಲ್ಲ: ಕಂಗನಾ

ಆರು ವರ್ಷಗಳಲ್ಲಿ 'ಕಾಯ್‌ ಪೋ ಚೆ', ಧೋನಿ, ರಾಬ್ತಾ, ಚಿಚೋರೆ ಅಂಥಹಾ ಅದ್ಭುತ ಸಿನಿಮಾಗಳನ್ನು ಆತ ಮಾಡಿದ. ಮೊದಲ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟಿಸಿದ ಅವನಿಗೆ ಸೂಕ್ತ ಮನ್ನಣೆ ಸಹ ಕೊಡಲಿಲ್ಲ ನೀವು. ಅದೇ ಒಬ್ಬ ಸ್ಟಾರ್ ಮಗ ಹೀಗೆ ಸಿನಿಮಾಗಳನ್ನು ಮಾಡಿದ್ದಿದ್ದರೆ ತಲೆಯ ಮೇಲೆ ಹೊತ್ತು ಮೆರೆಸುತ್ತಿದ್ದಿರಿ ಎಂದು ಕಂಗನಾ ಆಕ್ರೋಶದಿಂದ ಪ್ರಶ್ನೆಗಳನ್ನು ಕೇಳಿದ್ದಾರೆ.

ಕೆಟ್ಟ ಸಿನಿಮಾ ಗಲ್ಲಿ ಬಾಯ್‌ಗೆ ಪ್ರಶಸ್ತಿ ಕೊಟ್ಟಿರಿ: ಕಂಗನಾ

ಕೆಟ್ಟ ಸಿನಿಮಾ ಗಲ್ಲಿ ಬಾಯ್‌ಗೆ ಪ್ರಶಸ್ತಿ ಕೊಟ್ಟಿರಿ: ಕಂಗನಾ

ಚಿಚೋರೆ ನಾನು ನೋಡಿದ ಒಳ್ಳೆಯ ಸಿನಿಮಾಗಳಲ್ಲಿ ಒಂದು, ಅದ್ಭುತವಾದ ನಿರ್ದೇಶನ ಸಹ ಆದರೆ ಅದಕ್ಕೆ ಒಂದೇ ಒಂದು ಪ್ರಶಸ್ತಿ ಕೊಡಲಿಲ್ಲ. ಕೆಲಸಕ್ಕೆ ಬಾರದ 'ಗಲ್ಲಿ ಬಾಯ್' ಸಿನಿಮಾಕ್ಕೆ ಎಲ್ಲಾ ಪ್ರಶಸ್ತಿಗಳನ್ನು ಕೊಟ್ಟಿರಿ ಆದರೆ 'ಚಿಚೋರೆ' ಅಂಥಹಾ ಸಿನಿಮಾಕ್ಕೆ ಒಂದೂ ಪ್ರಶಸ್ತಿ ಕೊಡಲಿಲ್ಲ ಎಂದು ಕಂಗನಾ ಉರಿದುಬಿದ್ದಿದ್ದಾರೆ.

'ಸಂಜಯ್ ದತ್ ವ್ಯಸನ ನಿಮಗೆ ಕ್ಯೂಟ್ ಆಗಿ ಕಾಣುತ್ತದೆ'

'ಸಂಜಯ್ ದತ್ ವ್ಯಸನ ನಿಮಗೆ ಕ್ಯೂಟ್ ಆಗಿ ಕಾಣುತ್ತದೆ'

ಕೆಲವು ಬಾಲಿವುಡ್‌ ಖ್ಯಾತನಾಮರ ಕೈಗೊಂಬೆಯಾದ ಕೆಲವು ಪತ್ರಕರ್ತರು ಕಣ್ಣುಮುಚ್ಚಿಕೊಂಡು ಸುಶಾಂತ್ ಬಗ್ಗೆ ಬರೆಯುತ್ತಿದ್ದಾರೆ. ಸುಶಾಂತ್‌ಗೆ ನರದೌರ್ಬಲ್ಯ ಇತ್ತು, ಸುಶಾಂತ್‌ ಮಾದಕ ವ್ಯಸನಿ ಆಗಿದ್ದ ಅದೂ ಇದು ಎಂದು. ಅದೇ ಸಂಜಯ್ ದತ್ ಮಾದಕ ವ್ಯಸನ ನಿಮಗೆ ಕ್ಯೂಟ್ ಆಗಿ ಕಾಣುತ್ತದೆ ಆದರೆ ಬೇರೆಯವರದ್ದು ಕೆಟ್ಟದಾಗಿ ಕಾಣುತ್ತದೆ ಏಕೆ ಎಂದು ನೇರಾ-ನೇರಾ ಪ್ರಶ್ನೆ ಎಸೆದಿದ್ದಾರೆ ಕಂಗನಾ.

ನನ್ನನ್ನು ಜೈಲಿಗೆ ಕಳಿಸುವ ಪ್ರಯತ್ನ ಮಾಡಲಾಯಿತು: ಕಂಗನಾ

ನನ್ನನ್ನು ಜೈಲಿಗೆ ಕಳಿಸುವ ಪ್ರಯತ್ನ ಮಾಡಲಾಯಿತು: ಕಂಗನಾ

ತಮ್ಮ ಮೇಲೆ ಆಗುತ್ತಿರುವ ಪರೋಕ್ಷ ದಾಳಿಗಳ ಬಗ್ಗೆಯೂ ಮಾತನಾಡಿರುವ ಕಂಗನಾ, ನನ್ನ ಸಿನಿಮಾಗಳನ್ನು ಉದ್ದೇಶಪೂರ್ವಕವಾಗಿ ಫ್ಲಾಪ್ ಎಂದು ಬರೆಯಲಾಗುತ್ತದೆ. ನನ್ನ ಮೇಲೆ ಆರು ಕೇಸು ಹಾಕಲಾಗಿದೆ. ನನ್ನನ್ನು ಜೈಲಿಗೆ ಕಳುಹಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ನಮ್ಮನ್ನು (ಸಿನಿಮಾ ಹಿನ್ನೆಲೆ ಇರದವರನ್ನು) ನಿಮ್ಮವರು ಎಂದು ಏಕೆ ಒಪ್ಪಿಕೊಳ್ಳುವುದಿಲ್ಲ ಎಂದು ಕಂಗನಾ ಪ್ರಶ್ನಿಸಿದ್ದಾರೆ.

More from Filmibeat

English summary
Actor Sushant Singh Rajput's death is not suicide it is planed murder said actress Kangana Ranaut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X