ಹೊಸ ದಾಖಲೆ ನಿರ್ಮಿಸಿದ ಸುಶಾಂತ್ ಸಿಂಗ್ ಕೊನೆಯ ಸಿನಿಮಾದ ಟ್ರೈಲರ್

ನಟ ಸುಶಾಂತ್ ಸಿಂಗ್ ಅಭಿನಯದ ಬಹುನಿರೀಕ್ಷೆಯ ಕೊನೆಯ ಸಿನಿಮಾ ದಿಲ್ ಬೆಚಾರ ಟ್ರೈಲರ್ ರಿಲೀಸ್ ಯೂಟ್ಯೂಬ್ ಹೊಸ ದಾಖಲೆ ನಿರ್ಮಿಸಿದೆ. ನೆಚ್ಚಿನ ನಟನ ಕೊನೆಯ ಸಿನಿಮಾಗಾಗಿ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ದಿಲ್ ಬೆಚಾರ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದು ವೀಕ್ಷಿಸಿದ್ದಾರೆ.

Recommended Video

Dhruva Sarja and His Wife Prerana Tests Positive for Coronavirus | Filmibeat Kannada

ಸುಶಾಂತ್ ಅನ್ನು ಮತ್ತೆ ತೆರೆಮೇಲೆ ನೋಡಿ ಭಾವುಕರಾಗಿದ್ದಾರೆ. ವಿಶೇಷ ಅಂದರೆ ಸುಶಾಂತ್ ಕೊನೆಯ ಸಿನಿಮಾದ ಟ್ರೈಲರ್ ಅತೀ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಳ್ಳುವ ಮೂಲಕ ಎಲ್ಲಾ ಸಿನಿಮಾಗಳ ದಾಖಲೆಯನ್ನು ಧೂಳಿಪಟ ಮಾಡಿದೆ. ಭಾರತದ ಸಿನಿಮಾ ಟ್ರೈಲರ್ ಒಂದಕ್ಕೆ ಈ ಪರಿ ಲೈಕ್ಸ್ ಬಂದಿರುವುದು ನೋಡಿ ಹಾಲಿವುಡ್ ಸಹ ದಂಗ್ ಆಗಿದೆ. ಮುಂದೆ ಓದಿ...

10 ಮಿಲಿಯನ್ ಲೈಕ್ಸ್ ಪಡೆದ ಟ್ರೈಲರ್

10 ಮಿಲಿಯನ್ ಲೈಕ್ಸ್ ಪಡೆದ ಟ್ರೈಲರ್

ದಿಲ್ ಬೆಚಾರ ಸಿನಿಮಾ ಟ್ರೈಲರ್ ರಿಲೀಸ್ ಆಗಿ 10 ದಿನದಲ್ಲಿಯೇ 10 ಮಿಲಿಯನ್ ಅಧಿಕ ಲೈಕ್ಸ್ ಪಡೆದು ದಾಖಲೆ ನಿರ್ಮಿಸಿದೆ. ಈ ವಿಚಾರವನ್ನು ನಿರ್ದೇಶಕ ಮುಖೇಶ್ ಚಾಬ್ರ ಮತ್ತು ನಟಿ ಸಂಜನಾ ಸಾಂಘಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟ್ರೈಲರ್ ರಿಲೀಸ್ ಆಗಿ 24 ಗಂಟೆಯಲ್ಲಿಯೆ 5.5 ಮಿಲಿಯ್ ಲೈಕ್ಸ್ ಪಡೆದು ರೆಕಾರ್ಡ್ ಮಾಡಿದೆ.

ಹಾಲಿವುಡ್ ಸಿನಿಮಾಗಳ ದಾಖಲೆ ಮುರಿದ ದಿಲ್ ಬೆಚಾರ

ಹಾಲಿವುಡ್ ಸಿನಿಮಾಗಳ ದಾಖಲೆ ಮುರಿದ ದಿಲ್ ಬೆಚಾರ

'ದಿಲ್ ಬೆಚಾರ' ಟ್ರೈಲರ್ ಜುಲೈ 6ರಂದು ರಿಲೀಸ್ ಆಗಿದ್ದು, 16 ಗಂಟೆಯಲ್ಲಿಯೇ ಬರೋಬ್ಬರಿ 21 ಮಿಲಿಯನ್ ವೀಕ್ಷಣೆ ಪಡೆದು, ಸಾರ್ವಕಾಲಿಕ ದಾಖಲೆ ಹೊಂದಿದ್ದ ಹಾಲಿವುಡ್ ನ ಬ್ಲಾಕ್ ಬಸ್ಟರ್ ಅವೆಂಜರ್ಸ್: ಇನ್ಫಿನಿಟಿ ವಾರ್ ಮತ್ತು ಅವೆಂಜರ್ಸ್: ಎಂಡ್ ಗೇಮ್ ಸಿನಿಮಾಗಳ ದಾಖಲೆಯನ್ನು ಬ್ರೇಕ್ ಮಾಡಿದೆ.

 10 ದಿನದಲ್ಲಿ 74 ಮಿಲಿಯನ್ ವೀಕ್ಷಣೆ

10 ದಿನದಲ್ಲಿ 74 ಮಿಲಿಯನ್ ವೀಕ್ಷಣೆ

ಇದೀಗ ಟ್ರೈಲರ್ ಬಿಡುಗಡೆಯಾಗಿ 10 ದಿನದಲ್ಲಿಯೆ 74 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಣೆ ಪಡೆದಿದೆ. 10 ಮಿಲಿಯನ್ ಗೂ ಅಧಿಕ ಲೈಕ್ಸ್ ಪಡೆದು ಟಾಪ್ ಟ್ರೆಂಡಿಂಗ್ ನಲ್ಲಿದೆ. ಕಡಿಮೆ ಅವದಿಯಲ್ಲಿ ಹೆಚ್ಚು ಲೈಕ್ಸ್ ಪಡೆದ ವಿಶ್ವದ ಮೊದಲ ಟ್ರೈಲರ್ ಎನ್ನುವ ಹೆಗ್ಗಳಿಕೆ ದಿಲ್ ಬೆಚಾರ ಟ್ರೈಲರ್ ಪಡೆದುಕೊಂಡಿದೆ. 2017ರಲ್ಲಿ ರಿಲೀಸ್ ಆದ ಡಿಸ್ಪಾಸಿಟೋ ಸಾಂಗ್ 38 ಮಿಲಿಯನ್ ವೀಕ್ಷಣೆ ಪಡೆದು ಮೊದಲ ಸ್ಥಾನದಲ್ಲಿದೆ.

ಕ್ಯಾನ್ಸರ್ ರೋಗಿಯಲ್ಲಿ ಪ್ರೀತಿಯಲ್ಲಿ ಸುಶಾಂತ್

ಕ್ಯಾನ್ಸರ್ ರೋಗಿಯಲ್ಲಿ ಪ್ರೀತಿಯಲ್ಲಿ ಸುಶಾಂತ್

ಸಾವಿನಂಚಿನಲ್ಲಿರುವ ಕ್ಯಾನ್ಸರ್ ರೋಗಿಗೆ ಜೀವನ, ಪ್ರೀತಿ ತುಂಬುವ ಪಾತ್ರದಲ್ಲಿ ಸುಶಾಂತ್ ಸಿಂಗ್‌ ಕಾಣಿಸಿಕೊಂಡಿದ್ದಾರೆ. ಸಾವಿಗೆ ಹತ್ತಿರ ವಿರುವ ನಾಯಕಿಯನ್ನು ಪ್ರೀತಿಸುವ ನಾಯಕನ ಪಾತ್ರಕ್ಕೆ ಸುಶಾಂತ್ ಜೀವ ತುಂಬಿದ್ದಾರೆ. ಕ್ಯಾನ್ಸರ್ ರೋಗಿಯ ಪಾತ್ರದಲ್ಲಿ ನಟಿ ಸಂಜನಾ ಸಾಂಘಿ ಕಾಣಿಸಿಕೊಂಡಿದ್ದಾರೆ.

ಒಟಿಟಿಯಲ್ಲಿ ರಿಲೀಸ್

ಒಟಿಟಿಯಲ್ಲಿ ರಿಲೀಸ್

ದಿಲ್ ಬೆಚಾರ ಹಾಲಿವುಡ್ ನ ಪ್ರಸಿದ್ಧ ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್ ಸಿನಿಮಾದ ರಿಮೇಕ್ ಆಗಿದೆ. ಇದು ಜಾನ್ ಗ್ರೀನ್ ಬರೆದ ಕಾದಂಬರಿಯಾಧಾರಿತ ಸಿನಿಮಾವಾಗಿದೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಚಿತ್ರ ಇದೆ ತಿಂಗಳು 24ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗುತ್ತಿದೆ.

More from Filmibeat

English summary
Sushant Singh starrer Dil Bechara trailer breaks youtube record, trailer gets 10 million likes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X