ಸುಶಾಂತ್ ಸಿಂಗ್ ಪ್ರೇಯಸಿ ವಿರುದ್ಧ ತಂದೆಯಿಂದಲೇ ದೂರು: ಪ್ರಕರಣಕ್ಕೆ ಟ್ವಿಸ್ಟ್
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಹಲವು ತಿರುವುಗಳನ್ನು ತೆಗೆದುಕೊಳ್ಳುತ್ತಿದೆ. ಮೊದಲಿಗೆ ಬಾಲಿವುಡ್‌ನ ದೊಡ್ಡ ತಲೆಗಳಲ್ಲಿ ಕೆಲವರ ಸುತ್ತಾ ಸುತ್ತುತ್ತಿದ್ದ ಅನುಮಾನ ನಂತರ ಕೇಂದ್ರೀಕೃತಗೊಳ್ಳುತ್ತಾ ಸಾಗಿ ಇದೀಗ ಕೆಲವರ ವಿರುದ್ಧವಷ್ಟೆ ನೆಲೆ ನಿಂತಿದೆ.
Recommended Video
ಸುಶಾಂತ್ ಸಿಂಗ್ ಪ್ರೇಯಸಿ ರೆಹಾ ಚಕ್ರವರ್ತಿ ವಿರುದ್ಧವೂ ದೊಡ್ಡ ಮಟ್ಟದ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದರು. ಈ ಕೋನದಲ್ಲಿ ತನಿಖೆ ನಡೆಸುವಂತೆ ಪೊಲೀಸರ ಮೇಲೆ ಒತ್ತಡ ಸಹ ಹೇರಿದ್ದರು ನೆಟ್ಟಿಗರು.
ಇದಕ್ಕೆ ಮುಖ್ಯ ಕಾರಣ, ಮಹೇಶ್ ಭಟ್ ಹಾಗೂ ರೆಹಾ ಚಕ್ರವರ್ತಿ ನಡುವಿದ್ದ ಆತ್ಮೀಯತೆ. ಇದೀಗ ಪ್ರಕರಣಕ್ಕೆ ಸಖತ್ ಟ್ವಿಸ್ಟ್ ಸಿಕ್ಕಿದ್ದು, ಸುಶಾಂತ್ ಸಿಂಗ್ ತಂದೆಯವರೇ ಸುಶಾಂತ್ ಸಿಂಗ್ ಪ್ರೇಯಸಿ ರೆಹಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸುಶಾಂತ್ ತಂದೆಯೇ ರೆಹಾ ವಿರುದ್ಧ ದೂರು ನೀಡಿದ್ದಾರೆ
ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆಕೆ ರಜಪೂತ್ ಅವರೇ ರೆಹಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದು, ಕೆಕೆ ರಜಪೂತ್ ಹೇಳಿಕೆ ಆಧಾರದ ಮೇಲೆ ಬಿಹಾರ ಪೊಲೀಸರು ಎಫ್‌ಐಆರ್ ಸಹ ದಾಖಲಿಸಿಕೊಂಡಿದ್ದಾರೆ.

ಕಳ್ಳತನದ ಆರೋಪ ಸಹ ಹೊರಿಸಲಾಗಿದೆ
ರೆಹಾ ಚಕ್ರವರ್ತಿ ಮಾತ್ರವಲ್ಲದೆ ಆಕೆಯ ಕುಟುಂಬ ಸದಸ್ಯರ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ. ಮೋಸ, ಆತ್ಮಹತ್ಯೆಗೆ ಪ್ರೇರೇಪಣೆ ಜೊತೆಗೆ ಕಳ್ಳತನದ ಪ್ರಕರಣ ಸಹ ರೆಹಾ ಹಾಗೂ ಅವರ ಕುಟುಂಬದ ವಿರುದ್ಧ ದಾಖಲಾಗಿದೆ.

ಸುಶಾಂತ್ ಹಣವನ್ನು ಬಳಸುತ್ತಿದ್ದ ಪ್ರೇಯಸಿ ರೆಹಾ
ರೆಹಾ ಚಕ್ರವರ್ತಿ ಕಳೆದ ಆರು ತಿಂಗಳಿಂದ ಸುಶಾಂತ್ ಸಿಂಗ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಿದ್ದರಂತೆ. ರೆಹಾ ಚಿತ್ರೀಕರಣಕ್ಕಾಗಿ ಯೂರೋಪ್‌ಗೆ ಹೋಗಿದ್ದಾಗ ಎಲ್ಲಾ ಖರ್ಚನ್ನು ಸುಶಾಂತ್ ಖಾತೆಯಿಂದಲೇ ಮಾಡಿದ್ದರಂತೆ. ಟಿಕೆಟ್ ಗೆ ಹಣ ಸಹ ಸುಶಾಂತ್ ಖಾತೆಯಿಂದಲೇ ಕಟ್ ಆಗಿದೆಯಂದು ಪೊಲೀಸರು ತನಿಖೆ ಮಾಡಿದ್ದಾರೆ.

ರೆಹಾ ಚಕ್ರವರ್ತಿ-ಮಹೇಶ್ ಭಟ್ ಸಂಬಂಧದ ಬಗ್ಗೆ ವಿಚಾರಣೆ
ರೆಹಾ ಚಕ್ರವರ್ತಿ, ಮಹೇಶ್ ಭಟ್ ಅವರೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದರು. ಮಹೇಶ್ ಭಟ್, ಸುಶಾಂತ್‌ಗೆ ಉದ್ದೇಶಪೂರ್ವಕವಾಗಿ ಸಿನಿಮಾ ನೀಡುವುದನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಮುಂಬೈ ಪೊಲೀಸರು ಮಹೇಶ್ ಭಟ್ ವಿಚಾರಣೆಯನ್ನು ಈಗಾಗಲೇ ಮಾಡಿದ್ದಾರೆ. ರೆಹಾ ಚಕ್ರವರ್ತಿ ಜೊತೆಗಿನ ಸಂಬಂಧದ ಬಗ್ಗೆಯೂ ಪ್ರಶ್ನಿಸಿದ್ದಾರೆ.


Click it and Unblock the Notifications











